ಬಾಂಗ್ಲಾದೇಶದಲ್ಲಿ ಭಾರತೀಯ ವಿದ್ಯಾರ್ಥಿನಿಯನ್ನು ಪ್ರೇಮದ ಬಲೆಯಲ್ಲಿ ಸಿಲುಕಿಸಿ ಮತಾಂಧ ಯುವಕನಿಂದ ಲೈಂಗಿಕ ದೌರ್ಜನ್ಯ

ಢಾಕಾ (ಬಾಂಗ್ಲಾದೇಶ) – ಇಲ್ಲಿಯ ಢಾಕಾ ನ್ಯಾಷನಲ್ ಮೆಡಿಕಲ್ ಕಾಲೇಜಿನಲ್ಲಿ ಓದುತ್ತಿದ್ದ ಭಾರತೀಯ ವಿದ್ಯಾರ್ಥಿನಿಯೊಬ್ಬಳನ್ನು ಆಕೆಯ ಪ್ರೇಮಿ ಅಬ್ದುಲ್ ವಕಿಲನು ಒಂದು ರೆಸ್ಟೋರೆಂಟ್‌ನ ಕೊಠಡಿಯಲ್ಲಿ ೩ ದಿನಗಳ ಕಾಲ ಅತ್ಯಾಚಾರವೆಸಗಿರುವುದು ಬೆಳಕಿಗೆ ಬಂದಿದೆ.


೧. ಈ ಯುವತಿಯು ಪೇಸ್‌ಬುಕ್ ನಲ್ಲಿ ಮುಂದಿನಂತೆ ಬರೆದಿದ್ದಾಳೆ, ಅಬ್ದುಲ ವಕಿಲ ಈತನು ಕಾಕ್ಸ್ ಬಜಾರ್‌ನ ಹೋಟೆಲ್ ಗ್ಯಾಲಕ್ಸಿಯ ಕೊಠಡಿ ಸಂಖ್ಯೆ ೫೦೧ ರಲ್ಲಿ ಆಗಸ್ಟ್ ೮ ರಿಂದ ಆಗಸ್ಟ್ ೧೧, ೨೦೨೨ ರವರೆಗೆ ೩ ದಿನಗಳ ಕಾಲ ನನ್ನ ಮೇಲೆ ಅತ್ಯಾಚಾರವೆಸಗಿದ್ದಾನೆ. ನನ್ನ ಹಣ ಮತ್ತು ಮೊಬೈಲ್ ಫೋನ್ ಕದ್ದಿದ್ದಾನೆ. ಈಗ ನನ್ನ ತಂದೆ-ತಾಯಿಗೆ ಕೊಲೆ ಬೆದರಿಕೆ ನೀಡುತ್ತಿದ್ದಾನೆ. ದಯವಿಟ್ಟು ನನಗೆ ನ್ಯಾಯ ಕೊಡಿಸಿ. ಆತ ಡಾ. ಹಲೀಮಾಖಾತುನ ನರ್ಸಿಂಗ್ ಮೆಮನಸಿಂಹನ ವಿದ್ಯಾರ್ಥಿಯಾಗಿದ್ದಾನೆ. ನನ್ನಂತಹ ವಿದೇಶಿ ವಿದ್ಯಾರ್ಥಿನಿಯ ಭದ್ರತೆಗೆ ದೊಡ್ಡ ಅಪಾಯವಿದೆ.

೨. ಝಾಕಿಯಾ ಎಂಬ ಮುಸ್ಲಿಂ ಮಹಿಳೆಯೂ ಅಬ್ದುಲ್‌ನ ಬೆಂಬಲಕ್ಕೆ ನಿಂತಿದ್ದಾಳೆ ಎಂದು ಈ ಯುವತಿಯು ಆರೋಪಿಸಿದ್ದಾಳೆ. ಈ ಯುವತಿಯು ‘ಅಬ್ದುಲ್‌ನ ಸ್ನೇಹಿತರು ಮತ್ತು ಕೆಲವು ಪತ್ರಕರ್ತರು ನನ್ನಿಂದ ಹಣ ವಸೂಲಿ ಮಾಡಲು ಯತ್ನಿಸುತ್ತಿದ್ದಾರೆ’, ಎಂದೂ ಸಹ ಆರೋಪಿಸಿದ್ದಾಳೆ. ಈ ನಿಟ್ಟಿನಲ್ಲಿ ಸಹಾಯ ಕೋರಿದ್ದಾಳೆ.

ಸಂಪಾದಕೀಯ ನಿಲುವು

ಇಂತಹ ಘಟನೆಗಳಲ್ಲಿ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಭಾರತ ಸರಕಾರವು ಬಾಂಗ್ಲಾದೇಶದ ಮೇಲೆ ಒತ್ತಡ ಹೇರಬೇಕು ಮತ್ತು ಅಲ್ಲಿ ಓದುತ್ತಿರುವ ಭಾರತೀಯ ವಿದ್ಯಾರ್ಥಿಗಳ ಸುರಕ್ಷತೆಯ ಬಗ್ಗೆ ಕಾಳಜಿ ವಹಿಸಬೇಕು, ಎಂದು ಭಾರತೀಯರಿಗೆ ಅನಿಸುತ್ತದೆ !