ರಿಲಯನ್ಸ್ ಮಾರ್ಟ್‌ನ ಜಾಹೀರಾತಿನಲ್ಲಿ ನಟಿ ಸಯಿ ತಾಮ್ಹಣಕರ ಇವರು ಹಣೆಗೆ ಕುಂಕುಮ ಹಚ್ಚಿಕೊಳ್ಳದೆ ಗಣೇಶನ ಸ್ವಾಗತ ಮಾಡಿದರು !

ಸಯಿ ತಾಮ್ಹಣಕರ ಇವರ ಜಾಹಿರಾತಿಗೆ ಶೇಫಾಲಿ ವೈದ್ಯ ಇವರ ಆಕ್ಷೇಪ !

ಮುಂಬಯಿ – ಗಣೇಶೋತ್ಸವದ ಸಂದರ್ಭದಲ್ಲಿ ‘ರಿಲಯನ್ಸ್ ಮಾರ್ಟ’ ವತಿಯಿಂದ ಒಂದು ಜಾಹಿರಾತಿನ ಮೂಲಕ ವಿವಾದ ನಿರ್ಮಾಣವಾಗಿದೆ. ‘ರಿಲಯನ್ಸ್ ಮಾರ್ಟ’ನ ಜಾಹೀರಾತಿನಲ್ಲಿ ಮರಾಠಿ ನಟಿ ಸಯಿ ತಾಮ್ಹಣಕರ ಇವರು ಹಣೆಗೆ ಕುಂಕುಮ ಹಚ್ಚಿಕೊಳ್ಳದೆ ಗಣೇಶನ ಸ್ವಾಗತ ಮಾಡಿರುವುದು ತೋರಿಸಲಾಗಿದೆ. ಇದನ್ನು ಹಿರಿಯ ಲೇಖಕಿ ಶೇಫಾಲಿ ವೈದ್ಯ ಇವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ವಿಷಯವಾಗಿ ಅವರು ಒಂದು ಟ್ವೀಟ್ ಮಾಡಿ ಅದರ ಜೊತೆಗೆ  ‘#nobindinobusiness’ ಹೀಗೆ ‘ಹ್ಯಾಶ್ ಟ್ಯಾಗ್’ ಉಪಯೋಗಿಸಿದ್ದಾರೆ. (‘ರಿಲಯನ್ಸ್ ಮಾರ್ಟ್’ ಜಾಹೀರಾತಿನ ವಿರೋಧದಲ್ಲಿ ಧೈರ್ಯದಿಂದ ನಿಂತು ಇತರರಿಗೂ ಈ ಜಾಹೀರಾತನ್ನು ವಿರೋಧಿಸುವಂತೆ ಹೇಳುವ ಮತ್ತು ಧರ್ಮ ಹಾನಿ ತಡೆಯುವದಕ್ಕೆ ಧ್ವನಿ ಎತ್ತಿರುವ ಹಿರಿಯ ಲೇಖಕಿ ಶೇಫಾಲಿ ವೈದ್ಯ ಇವರ ಅಭಿನಂದನೆ ! ಇದರಿಂದ ಇತರ ಮರಾಠಿ ಮತ್ತು ಹಿಂದಿ ಕಲಾವಿದರು ಬೋಧ ತೆಗೆದುಕೊಂಡು ಅನೇಕ ಮಾಧ್ಯಮಗಳಲ್ಲಿ ನಡೆಯುವ ಹಿಂದೂ ದೇವತೆಯರ ಮತ್ತು ಹಬ್ಬಗಳ ವಿಡಂಬನೆಗಳನ್ನು ತಡೆಯಬೇಕು – ಸಂಪಾದಕರು)

ಏನು ಈ ಪ್ರಕರಣ ?

೨೦೨೧ ರಲ್ಲಿ ದೀಪಾವಳಿ ಹಬ್ಬದ ಸಮಯದಲ್ಲಿ ಕೆಲವು ದೊಡ್ಡ ‘ಬ್ರಾಂಡ್’ಗಳು ತನ್ನ ಜಾಹಿರಾತಿಗಾಗಿ ಕುಂಕುಮ ಹಚ್ಚಿಕೊಳ್ಳದೆ ಇರುವ ಮಾಡಲ್‌ಗಳ ಛಾಯಾ ಚಿತ್ರಗಳನ್ನು ಜಾಹೀರಾತುಗಾಗಿ ಉಪಯೋಗಿಸಿದ್ದರು. ಅದರ ಬಗ್ಗೆ ಶೇಫಾಲಿ ವೈದ್ಯ ಇವರು ಆಕ್ಷೇಪ ವ್ಯಕ್ತಪಡಿಸುತ್ತ ‘ಹಿಂದೂಗಳ ಹಬ್ಬ ಉತ್ಸವಗಳ ಜಾಹೀರಾತಿನಲ್ಲಿ ಉಪಯೋಗಿಸುವ ಮಾಡಲ್ (ಯಾವುದಾದರೂ ವಿಶಿಷ್ಟ ಕಂಪನಿ ತಯಾರಿಸಿರುವ ಬಟ್ಟೆ ಅಥವಾ ಇತರೆ ವಸ್ತುಗಳ ಪ್ರಚಾರ ಮಾಡಲು ನೇಮಿಸಿರುವ ವ್ಯಕ್ತಿಗಳು) ‘ಕುಂಕುಮ’ ಹಚ್ಚಿಕೊಳ್ಳಲೇಬೇಕು’, ಎಂದು ಒತ್ತಾಯಿಸಿದ್ದರು. ಅವರು ತೆಗೆದುಕೊಂಡಿರುವ ಈ ನಿಲುವಿನಿಂದ ಎಲ್ಲಾ ಸ್ತರದಲ್ಲಿ ಸಿಗುವ ದೊಡ್ಡ ಪ್ರಮಾಣದ ಬೆಂಬಲ ಗಮನಿಸಿ ಕೊನೆಗೆ ಸಂಬಂಧಿಸಿದ ಎಲ್ಲಾ ಕಂಪನಿಗಳು ಹಳೆ ಜಾಹಿರಾತು ಹಿಂಪಡೆದು ಕುಂಕುಮ ಹಚ್ಚಿಕೊಂಡಿರುವ ಹೊಸ ಜಾಹಿರಾತು ಪ್ರಸಾರ ಮಾಡಿದ್ದರು. ಆದ್ದರಿಂದ ದೊಡ್ಡ ದೊಡ್ಡ ಕಂಪನಿಗಳು ಮತ್ತು ಬ್ರಾಂಡ್ಸ್ ಇವರನ್ನು ಹೆಡೆಮುರಿ ಕಟ್ಟುವ ಶೇಫಾಲಿ ವೈದ್ಯ ಈಗ ‘ರಿಲಯನ್ಸ್ ಮಾರ್ಟ್’ ಕಂಪನಿಯ ವಿರುದ್ಧ ನಿಂತಿದ್ದಾರೆ.

ಸಂಪಾದಕೀಯ ನಿಲುವು

ಅರಬ ದೇಶದಲ್ಲಿ ಯಾವುದೇ ಕಂಪನಿಯಿಂದ ಮೊಹಮ್ಮದ್ ಪೈಗಂಬರ್ ಮತ್ತು ಕುರಾನ್ ಇದನ್ನು ಜಾಹಿರಾತಿನಲ್ಲಿ ವಿಡಂಬನೆ ಮಾಡಿದರೆ, ಸಂಬಂಧಪಟ್ಟ ಕಂಪನಿಗಳ ಮೇಲೆ ಕಠಿಣ ಕ್ರಮ ಕೈಗೊಂಡು ಆ ಕಂಪನಿಗೆ ದೇಶದಿಂದ ಗಡಿಪಾರು ಮಾಡಲಾಗುತ್ತದೆ. ಕಳೆದ ಅನೇಕ ವರ್ಷಗಳಿಂದ ದೇಶದಲ್ಲಿನ ವಿವಿಧ ಕಂಪನಿಗಳಿಂದ ಹಿಂದೂಗಳ ಧಾರ್ಮಿಕ ಭಾವನೆಗಳನ್ನು ನೋಯಿಸಲಾಗುತ್ತದೆ, ಆದರೂ ಕೂಡ ಅವರ ಮೇಲೆ ಕ್ರಮ ಕೈಗೊಳ್ಳಲಾಗುವುದಿಲ್ಲ. ಈ ವಿಷಯವಾಗಿ ಮಹಾರಾಷ್ಟ್ರ ಸರಕಾರ ಗಮನ ನೀಡಿ ಸಂಬಂಧಿತ ಕಂಪನಿಗಳ ಮೇಲೆ ಕ್ರಮ ಕೈಗೊಳ್ಳಬೇಕೆಂದು ಹಿಂದೂಗಳ ಅಪೇಕ್ಷೆಯಾಗಿದೆ !