೧-೨ ದಿನ ನೀವು ಮಾಂಸ ತಿನ್ನದಿರಲು ಸಾಧ್ಯವಿಲ್ಲವೇ ?

ಮುಸಲ್ಮಾನರಿಗೆ ಗುಜರಾತನ ಉಚ್ಚ ನ್ಯಾಯಾಲಯದಿಂದ ಛೀಮಾರಿ !

ಕರ್ಣಾವತಿ (ಗುಜರಾತ) – ನೀವು ಕೊನೆ ಕ್ಷಣಕ್ಕೆ ಎದ್ದುಬಿದ್ದು ಬರುತ್ತೀರಿ, ನಾವು ಈ ಅರ್ಜಿಯ ಬಗ್ಗೆ ಯೋಚನೆ ಮಾಡುವುದಿಲ್ಲ. ಯಾವಾಗ ಕಸಾಯಿಖಾನೆಗಳ ಮೇಲೆ ನಿಷೇಧ ಹೇರಲಾಗುತ್ತದೆ, ಆಗ ನೀವು ನಮ್ಮ ಹತ್ತಿರ ಬರುತ್ತೀರಿ. ನೀವು ಒಂದೆರಡು ದಿನ ಮಾಂಸ ತಿನ್ನದಿರಲು ಸಾಧ್ಯವಿಲ್ಲವೆ ?, ಈ ರೀತಿಯ ಶಬ್ದಗಳಲ್ಲಿ ಗುಜರಾತ ಉಚ್ಚ ನ್ಯಾಯಾಲಯ ಮುಸಲ್ಮಾನರಿಗೆ ತರಾಟೆಗೆ ತೆಗೆದುಕೊಂಡಿದೆ.

ಕರ್ಣಾವತಿ ನಗರಸಭೆಯಿಂದ ಜೈನ ಧರ್ಮದ ಪವಿತ್ರ ‘ಪರ್ಯುಷಣ’ ಹಬ್ಬದ ಪ್ರಯುಕ್ತ ನಗರದ ಎಲ್ಲಾ ಕಸಾಯಿಖಾನೆಗಳನ್ನು ಒಂದು ದಿನದ ಮಟ್ಟಿಗೆ ಮುಚ್ಚುವ ಆದೇಶ ನೀಡಲಾಗಿದೆ. ಅದಕ್ಕೆ ‘ಕೂಲ ಹಿಂದ ಜಮೀಯತ-ಅಲ್ ಕುರೈಶ್ ಆಕ್ಷನ್ ಕಮಿಟಿ’ಯಿಂದ ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನೆ ನೀಡಲಾಗಿತ್ತು. ಅದರ ಬಗ್ಗೆ ನ್ಯಾಯಾಲಯ ಮೇಲಿನ ಶಬ್ದಗಳಲ್ಲಿ ತರಾಟೆಗೆ ತೆಗೆದುಕೊಂಡಿತು.