೨೦೦೨ರ ಗುಜರಾತ ಗಲಭೆಗೆ ಸಂಬಂಧಿಸಿದ ಎಲ್ಲ ಪ್ರಕರಣಗಳನ್ನು ಮುಕ್ತಾಯಗೊಳಿಸಿರಿ ! – ಸರ್ವೋಚ್ಚ ನ್ಯಾಯಾಲಯ

ನವದೆಹಲಿ – ೨೦೦೨ ರ ಗುಜರಾತ ಗಲಭೆಗೆ ಸಂಬಂಧಿಸಿದ ಎಲ್ಲ ಪ್ರಕರಣಗಳನ್ನು ಮುಕ್ತಾಯಗೊಳಿಸುವಂತೆ ಸರ್ವೋಚ್ಚ ನ್ಯಾಯಾಲಯ ಆದೇಶಿಸಿದೆ. ‘ಈ ಪ್ರಕರಣದಲ್ಲಿ ಇಷ್ಟು ದಿನಗಳವರೆಗೆ ಆಲಿಕೆ ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲವೆಂದು ಮುಖ್ಯ ನ್ಯಾಯಮೂರ್ತಿ ಉದಯ ಲಳಿತರವರ ನ್ಯಾಯಪೀಠವು ಹೇಳಿದೆ.
ಗುಜರಾತ ಗಲಭೆಗೆ ಸಂಬಂಧಿಸಿದ ಅನೇಕ ಪ್ರಕರಣಗಳು ಸರ್ವೋಚ್ಚ ನ್ಯಾಯಾಲಯದಲ್ಲಿ ಬಾಕಿ ಉಳಿದಿದೆ. ಸರ್ವೋಚ್ಚ ನ್ಯಾಯಾಲಯವು, ಗುಜರಾತ ಗಲಭೆಗೆ ಸಂಬಂಧಿಸಿದ ೯ ಪ್ರಕರಣಗಳಲ್ಲಿ ೮ ಪ್ರಕರಣಗಳಿಗೆ ಕಿರಿಯ ನ್ಯಾಯಾಲಯವು ತೀರ್ಪು ನೀಡಿದೆ. ನರೋಡಾ ಗ್ರಾಮಕ್ಕೆ ಸಂಬಂಧಿಸಿದ ಪ್ರಕರಣದ ಆಲಿಕೆ ಇಂದಿಗೂ ಮುಂದುವರಿದಿದೆ ಎಂದು ಹೇಳಿದೆ. ಇಂತಹ ಸ್ಥಿತಿಯಲ್ಲಿ ಗಲಭೆಗೆ ಸಂಬಂಧಿಸಿದ ಯಾವುದೇ ಪ್ರಕರಣದ ಆಲಿಕೆಯನ್ನು ಮಾಡುವ ಆವಶ್ಯಕತೆಯಿಲ್ಲ ಎಂದು ಹೇಳಿತು.

ನರೇಂದ್ರಮೋದಿಯವರಿಗೆ ‘ಕ್ಲೀನ ಚಿಟ್’ ನೀಡಿರುವ ವಿಶೇಷ ತನಿಖಾದಳದ ವರದಿ ನ್ಯಾಯೋಚಿತ ! – ಸರ್ವೋಚ್ಚ ನ್ಯಾಯಾಲಯ
ಜೂನ ೨೪, ೨೦೨೨ ರಂದು ಸರ್ವೋಚ್ಚ ನ್ಯಾಯಾಲಯವು ಝಾಕಿಯಾ ಜಾಫರಿಯವರು ಪ್ರಧಾನಮಂತ್ರಿಗಳ ವಿರುದ್ಧ ದಾಖಲಿಸಿದ್ದ ದೂರನ್ನು ತಿರಸ್ಕರಿಸಿತ್ತು. ೨೦೦೨ ರ ಗುಜರಾತ ಗಲಭೆಯಲ್ಲಿ ಗುಜರಾತಿನ ಆಗಿನ ಮುಖ್ಯಮಂತ್ರಿ ನರೇಂದ್ರ ಮೋದಿಯವರಿಗೆ ‘ಕ್ಲೀನ ಚಿಟ್’ ನೀಡುವ ವಿಶೇಷ ತನಿಖಾ ದಳದ (‘ಎಸ್.ಐ.ಟಿ.’ಯ) ವರದಿಯ ವಿರುದ್ಧ ಈ ದೂರು ದಾಖಲಿಸಲಾಗಿತ್ತು.

ಗೋಧ್ರಾ ಧಾರ್ಮಿಕ ಹಿಂಸಾಚಾರದಲ್ಲಿ ೬೯ ಜನರ ಸಾವು

ಫೆಬ್ರುವರಿ ೨೭, ೨೦೦೨ ರಂದು ಗೋಧ್ರಾ ಅಗ್ನಿಕಾಂಡದ ಬಳಿಕ ಗುಜರಾತನಲ್ಲಿ ಧಾರ್ಮಿಕ ಹಿಂಸಾಚಾರ ಉಮ್ಮಳಿಸಿತ್ತು. ಇದರಲ್ಲಿ ಝಾಕಿಯಾ ಜಾಫರಿಯವರ ಪತಿ ಮತ್ತು ಕಾಂಗ್ರೆಸನ ಮಾಜಿ ಶಾಸಕ ಎಹಸಾನ ಜಾಫರಿಯವರೊಂದಿಗೆ ೬೯ ಜನರು ಮರಣ ಹೊಂದಿದ್ದರು. ಇದರಲ್ಲಿ ೩೮ ಜನರ ಮೃತದೇಹ ಹೊರಗೆ ತೆಗೆಯಲಾಗಿದ್ದರೆ, ಜಾಫರಿಯೊಂದಿಗೆ ಇನ್ನುಳಿದ ೩೧ ಜನರು ನಾಪತ್ತೆಯಾಗಿದ್ದಾರೆಂದು ಹೇಳಲಾಗಿತ್ತು.

ಸರ್ವೋಚ್ಚ ನ್ಯಾಯಾಲಯವು ‘ಎಸ್.ಐ.ಟಿ’ ರಚನೆ ಮಾಡಿತ್ತು

ಗುಜರಾತ ಗಲಭೆಯ ತನಿಖೆಗಾಗಿ ಸರ್ವೋಚ್ಚ ನ್ಯಾಯಾಲಯವು ೨೦೦೮ರಲ್ಲಿ ‘ಎಸ್.ಐ.ಟಿ’ ರಚಿಸಿತ್ತು. ಈ ಪ್ರಕರಣದ ಎಲ್ಲ ಆಲಿಕೆಯ ವರದಿಯನ್ನು ಸಲ್ಲಿಸುವಂತೆ ಸರ್ವೋಚ್ಚ ನ್ಯಾಯಾಲಯವು ‘ಎಸ್.ಐ.ಟಿ’ ಆದೇಶ ನೀಡಿದೆ. ತದನಂತರ ಝಾಕಿಯಾ ಜಾಫರಿಯವರ ದೂರಿನ ತನಿಖೆಯನ್ನು ‘ಎಸ್.ಐ.ಟಿ’ ಗೆ ಒಪ್ಪಿಸಲಾಗಿತ್ತು. ‘ಎಸ್.ಐ.ಟಿ’ಯು ಮೋದಿಯವರಿಗೆ ಕ್ಲೀನ ಚಿಟ್ ನೀಡಿತು ಮತ್ತು ೨೦೧೧ ರಲ್ಲಿ ಸರ್ವೋಚ್ಚ ನ್ಯಾಯಾಲಯದ ಆದೇಶಾನುಸಾರ ‘ಎಸ್.ಐ.ಟಿ’ ವರದಿಯನ್ನು ನ್ಯಾಯದಂದಾಧಿಕಾರಿಗೆ ‘ಕ್ಲೋಜರ ರಿಪೋರ್ಟ್’ ಸಲ್ಲಿಸಿತ್ತು. ಯಾವ ಅಧಿಕಾರಿಯ ಅಧ್ಯಕ್ಷತೆಯಲ್ಲಿ ಯಾವುದಾದರೂ ಪ್ರಕರಣದ ತನಿಖೆ ನಡೆದಿರುತ್ತದೆಯೋ, ಅವರು ವರದಿಯ ಮೇಲೆ ಹಸ್ತಾಕ್ಷರದೊಂದಿಗೆ ತನಿಖೆಯನ್ನು ಮುಕ್ತಾಯಗೊಳಿಸಲು ಅನುಮತಿ ನೀಡುವುದಕ್ಕೆ ‘ಕ್ಲೋಜರ ರಿಪೋರ್ಟ’ ಎನ್ನುತ್ತಾರೆ.

೨೦೧೩ ರಲ್ಲಿ ಝಾಕಿಯಾ ಜಾಫರಿಯವರು ‘ಕ್ಲೋಸರ ರಿಪೋರ್ಟ’ನ್ನು ವಿರೋಧಿಸಿ, ಜಿಲ್ಲಾ ನ್ಯಾಯದಂಡಾಧಿಕಾರಿಗಳಲ್ಲಿ ದೂರು ದಾಖಲಿಸಿದ್ದರು. ಜಿಲ್ಲಾ ದಂಡಾಧಿಕಾರಿಗಳು ಈ ದೂರನ್ನು ತಿರಸ್ಕರಿಸಿದ್ದರು. ತದನಂತರ ಝಾಕಿಯಾ ಜಾಫರಿಯವರು ಗುಜರಾತ ಉಚ್ಚ ನ್ಯಾಯಾಲಯದ ಮೊರೆ ಹೋದರು. ಉಚ್ಚ ನ್ಯಾಯಾಲಯವು ೨೦೧೭ ರಲ್ಲಿ ದಂಡಾಧಿಕಾರಿಗಳ ನಿರ್ಣಯವು ಸರಿಯಾಗಿದೆಯೆಂದು ತೀರ್ಪು ನೀಡಿತು. ತದನಂತರ ಝಾಕಿಯಾ ಜಾಫರಿಯವರು ಉಚ್ಚ ನ್ಯಾಯಾಲಯದ ನಿರ್ಣಯವನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು.