ಶಾಸಕ ಟಿ. ರಾಜಸಿಂಹ ಇವರಿಗೆ ಶೀಘ್ರವೇ ಭದ್ರತೆ ನೀಡಬೇಕು ! – ತೆಲಂಗಾಣದಲ್ಲಿನ ಹಿಂದೂ ಸಂಘಟನೆಗಳ ಬೇಡಿಕೆ

ಭಾಗ್ಯನಗರ (ತೆಲಂಗಾಣ) – ಇಲ್ಲಿಯ ಗೋಶಾಮಹಲನ ಶಾಸಕ ಟಿ. ರಾಜಾ ಸಿಂಹ ಇವರಿಗೆ ಕೂಡಲೇ ಶಸ್ತ್ರಾಸ್ತ್ರ ಸಹಿತ ರಕ್ಷಣೆ ನೀಡಬೇಕು ಮತ್ತು ಅವರಿಗೆ ಕೊಲೆ ಬೆದರಿಕೆ ನೀಡಿರುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು, ಎಂದು ಹಿಂದುತ್ವನಿಷ್ಠ ಸಂಘಟನೆಗಳು ಸರಕಾರಕ್ಕೆ ಆಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ಭಾಗ್ಯನಗರ ಮತ್ತು ರೆಂಗರೆಡ್ಡಿ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಲಾಗಿದೆ. ಈ ಸಮಯದಲ್ಲಿ ರಾಷ್ಟ್ರೀಯ ಶಿವಾಜಿ ಸೇನಾ, ಧರ್ಮವೀರ ಸಂಸ್ಥೆ, ಭಜರಂಗ ಸೇನಾ, ಶ್ರೀರಾಮ ಯುವಸೇನಾ, ವಿಶ್ವ ಹಿಂದೂ ಪರಿಷತ್, ಧರ್ಮರಕ್ಷಾ ಶ್ರೀ ರಾಮ ಸೇನಾ, ಶ್ರೀರಾಮ ರಾಜ್ಯವೇದಿಕೆ ಮುಂತಾದ ಸಂಘಟನೆಯ ಕಾರ್ಯಕರ್ತರು ಉಪಸ್ಥಿತರಿದ್ದರು.

ರಾಜಾ ಸಿಂಹ ಇವರ ಮನೆ ಸುಟ್ಟು ಹಾಕುವ ಬೆದರಿಕೆ ನೀಡಿರುವ ಕಾಂಗ್ರೆಸ್‌ನ ಸಚಿವ ರಾಶೀದ ಖಾನ್, ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರ ಹತ್ಯೆ ಮಾಡುವುದಕ್ಕಾಗಿ ಮುಸಲ್ಮಾನರಿಗೆ ಪ್ರಚೋದನೆ ನೀಡುವ ಕಲೀಮುದ್ದೀನ್, ಮುಸಲ್ಮಾನರಿಗೆ ಪ್ರಚೋದಿಸಿರುವ ಕಾಂಗ್ರೆಸ್‌ನ ನಾಯಕ ಫಿರೋಜ ಖಾನ್ ಮುಂತಾದವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿದೆ. ಹಾಗೂ ತೆಲಂಗಾಣದ ಸರಕಾರದಿಂದ ರಾಜಾ ಸಿಂಹ ಇವರಿಗೆ ನ್ಯಾಯ ಸಿಗುವ ಸಾಧ್ಯತೆ ಇಲ್ಲದೆ ಇರುವುದರಿಂದ ಅವರ ಮೇಲೆ ಮೊಕ್ಕದಮೆ ಮಹಾರಾಷ್ಟ್ರ, ಕರ್ನಾಟಕ ಅಥವಾ ಗೋವಾ ರಾಜ್ಯದಲ್ಲಿ ಹಸ್ತಾಂತರಿಸಬೇಕು. ಯಾವ ಕಾರಾಗೃಹದಲ್ಲಿ ರಾಜಾ ಸಿಂಹ ಇವರನ್ನು ಇರಿಸಲಾಗಿದೆ, ಅಲ್ಲಿ ಮೊದಲಿನಿಂದಲೇ ಜಿಹಾದಿ ಭಯೋತ್ಪಾದಕರನ್ನು ಬಂದಿಸಲಾಗಿದೆ. ಆದ್ದರಿಂದ ರಾಜಾ ಸಿಂಹ ಇವರ ಜೀವಕ್ಕೆ ಅಪಾಯವಿರುವುದೆಂದು ಅವರಿಗೆ ಯೋಗ್ಯ ಭದ್ರತೆ ನೀಡಬೇಕು, ಎಂದು ಬೇಡಿಕೆ ಸಲ್ಲಿಸಲಾಗಿದೆ.

ಸಂಪಾದಕೀಯ ನಿಲುವು

ಈ ರೀತಿಯ ಬೇಡಿಕೆ ಏಕೆ ಮಾಡಬೇಕಾಗುತ್ತದೆ ? ಟಿ. ರಾಜಾ ಸಿಂಹ ಇವರ ಜೀವಕ್ಕೆ ಅಪಾಯ ಇರುವುದರಿಂದ ಸರಕಾರ ಅವರಿಗೆ ಕಾರಾಗೃಹದಲ್ಲಿ ಏಕೆ ಭದ್ರತೆ ನೀಡುತ್ತಿಲ್ಲ ?