ಪಾಕಿಸ್ತಾನದಲ್ಲಿ ಪ್ರವಾಹದಿಂದಾಗಿ ಬೆಲೆ ಗಗನಕ್ಕೆರಿಕೆ !

ಟೊಮೆಟೊ ೫೦೦ ರೂಪಾಯಿ, ಈರುಳ್ಳಿ ೩೦೦ ರೂಪಾಯಿಗೆ ಕೆ.ಜಿ. !

ಇಸ್ಲಾಮಾಬಾದ (ಪಾಕಿಸ್ತಾನ) – ಪಾಕಿಸ್ತಾನದಲ್ಲಿ ಸುಮಾರು ಶೇ. ೭೦ ರಷ್ಟು ಪ್ರದೇಶದಲ್ಲಿ ಪ್ರವಾಹದ ಕಾರಣದಿಂದ ೧ ಸಾವಿರಕ್ಕಿಂತ ಅಧಿಕ ಜನರು ಸಾವನ್ನಪ್ಪಿದ್ದಾರೆ. ಹಾಗೂ ಸಾವಿರಾರು ಕೋಟಿ ರೂಪಾಯಿಗಳಷ್ಟು ಹಾನಿಯಾಗಿದೆ. ಇದರಿಂದ ಪಾಕಿಸ್ತಾನದಲ್ಲಿ ಬೆಲೆಏರಿಕೆಯೂ ಅತ್ಯಧಿಕ ಹೆಚ್ಚಳವಾಗಿದೆ. ಪಾಕಿಸ್ತಾನದ ಲಾಹೋರ ನಗರದಲ್ಲಿ ತರಕಾರಿಗಳ ಬೆಲೆ ಅತ್ಯಧಿಕ ಹೆಚ್ಚಳವಾಗಿದೆ. ಟೊಮ್ಯಾಟೊ ಬೆಲೆ ಪ್ರತಿ ಕೆ.ಜಿಗೆ ೫೦೦ ರೂಪಾಯಿ (ಪಾಕಿಸ್ತಾನಿ ರೂಪಾಯಿಯಲ್ಲಿ) ಆಗಿದೆಯೆಂದು ತಿಳಿದು ಬಂದಿದೆ. ಈರುಳ್ಳಿ ೩೦೦ ರೂಪಾಯಿ ಕೆ.ಜಿ., ಲಿಂಬೆಹಣ್ಣಿನ ಬೆಲೆ ರೂಪಾಯಿ ೮೦ ಕೆ.ಜಿ., ವಾಸ್ತವದಲ್ಲಿ ಪಾಕಿಸ್ತಾನ ಸರಕಾರದಿಂದ ಟೊಮೆಟೊದ ದರ ೮೦ ರೂಪಾಯಿ ಹಾಗೂ ಈರುಳ್ಳಿಯ ಬೆಲೆ ೬೧ ರೂಪಾಯಿ ಕೆ.ಜಿ ಇತ್ತು; ಆದರೆ ಖಾಸಗಿ ವ್ಯಾಪಾರಸ್ಥರು ಸಧ್ಯಕ್ಕೆ ಈ ತರಕಾರಿಗಳನ್ನು ೫ ಪಟ್ಟುಗಳಷ್ಟು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಅಂಗಡಿಯವರು, ಈ ಬೆಲೆಯೇರಿಕೆಯ ವಿಷಯದಲ್ಲಿ ಸಗಟು ಮಾರುಕಟ್ಟೆಯಿಂದ ಹೆಚ್ಚಿನ ಬೆಲೆಗೆ ತರಕಾರಿಗಳನ್ನು ಖರೀದಿಸುತ್ತಿರುವುದರಿಂದ ನಮಗೂ ಕೂಡ ಬೆಲೆಯನ್ನು ಹೆಚ್ಚಿಸಬೇಕಾಗುತ್ತಿದೆ ಎಂದು ಹೇಳಿದರು.


ನೆರೆಹಾವಳಿಯಿಂದ ಸಿಂಧ ಮತ್ತು ಪಂಜಾಬ ಪ್ರಾಂತ್ಯದಲ್ಲಿ ಕಬ್ಬು ಮತ್ತು ಹತ್ತಿ ಪೂರ್ಣವಾಗಿ ನಷ್ಟಗೊಂಡಿದೆ. ಈರುಳ್ಳಿ, ಟೊಮೆಟೊ ಮತ್ತು ಮೆಣಸಿನ ಕಾಯಿ ಸ್ವಲ್ಪ ಮಟ್ಟಿಗೆ ಹಾನಿಯಾಗಿದೆ. ಸಿಂಧ್ ಪ್ರಾಂತ್ಯದಲ್ಲಿ ಸರಕಾರಿ ಗೋದಾಮಿನಲ್ಲಿ ಸಂಗ್ರಹಿಸಿರುವ ಕನಿಷ್ಟ ೨೦ ಲಕ್ಷ ಟನ್ ಗೋಧಿ ಮಳೆಯಲ್ಲಿ ಮತ್ತು ಪ್ರವಾಹದ ಕಾರಣದಿಂದ ಹಾಳಾಗಿದೆ. ಇದರಿಂದ ದೇಶದ ಇತರೆ ಸುರಕ್ಷತೆಗೆ ಅಪಾಯ ನಿರ್ಮಾಣವಾಗಿದೆ.