ಬಂಗಾಲದಲ್ಲಿ ಯುವತಿಯ ಮೇಲೆ ಸಾಮೂಹಿಕ ಬಲಾತ್ಕಾರ ಮಾಡಿದ ಗಡಿ ಭದ್ರತಾ ದಳದ ಇಬ್ಬರ ಸೈನಿಕರ ಬಂಧನ

ಕೊಲಕಾತಾ (ಬಂಗಾಲ) – ಬಂಗಾಲದ ಉತ್ತರ ೨೪ ಪರಾಗಣ ಜಿಲ್ಲೆಯ ಗಡಿ ಭದ್ರತಾ ದಳದ ಇಬ್ಬರು ಸೈನಿಕರು ಓರ್ವ ಯುವತಿಯ ಮೇಲೆ ಸಾಮೂಹಿಕ ಬಲಾತ್ಕಾರದ ಮಾಡಿರುವ ಆರೋಪದಲ್ಲಿ ಬಂಧಿಸಲಾಗಿದೆ. ಗಡಿ ಭದ್ರತಾ ದಳದ ೬೮ ನೇ ಬಟಾಲಿಯನಿನ ಈ ಇಬ್ಬರು ಸೈನಿಕರು ಆಗಸ್ಟ್ ೨೫ ರಂದು ರಾತ್ರಿ ಬಗದಾ ಗಡಿಯ ಜಿತಪೂರ ಬಿಓಪಿ ಹತ್ತಿರದ ಒಂದು ಹೊಲದಲ್ಲಿ ಯುವತಿಯ ಮೇಲೆ ಸಾಮೂಹಿಕ ಬಲತ್ಕಾರ ನಡೆಸಿದ್ದಾರೆ. ಮರುದಿನ ಸಂತ್ರಸ್ತ ಯುವತಿಯು ಬಗದಾ ಪೊಲೀಸ ಠಾಣೆಯಲ್ಲಿ ದೂರ ದಾಖಲಿಸಿದ ನಂತರ ಈ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.