ದೇವಬಂದ (ಉತ್ತರಪ್ರದೇಶ)ದಲ್ಲಿ ಮೂವರು ಗೋವು ಕಳ್ಳಸಾಗಾಣಿಕೆದಾರರಿಂದ ೫೦ ಕೆ.ಜಿ. ಗೋಮಾಂಸ ವಶ

ಸಹಾರನಪೂರ (ಉತ್ತರಪ್ರದೇಶ) – ದೇವಬಂದನ ಶೇಖ-ಉಲ್-ಹಿಂದ ಕಾಲೋನಿಯಲ್ಲಿ ಪೊಲೀಸರು ಫೈಜಾನ ಹೆಸರಿನ ವ್ಯಕ್ತಿಯ ಮನೆಯ ಮೇಲೆ ದಾಳಿ ನಡೆಸಿ ಫೈಜಾನ, ಮಹಮ್ಮದ ಛೋಟನ ಮತ್ತು ಸುಫಿಯಾನ ಈ ಮೂವರು ಗೋವು ಕಳ್ಳಸಾಗಾಣಿಕೆದಾರರನ್ನು ಬಂಧಿಸಿದ್ದಾರೆ. ಮತ್ತು ಒಬ್ಬ ಮಹಿಳೆ ಸಹಿತ ೩ ಆರೋಪಿಗಳು ಪರಾರಿಯಾಗಿದ್ದಾರೆ. ಪೊಲೀಸರು ಈ ಮನೆಯಿಂದ ೫೦ ಕೆ.ಜಿ. ಗೋಮಾಂಸ ಮತ್ತು ಮಾಂಸ ಕೊಯ್ಯುವ ಶಸ್ತ್ರಗಳನ್ನು ಜಪ್ತಿ ಮಾಡಿದ್ದಾರೆ.

ಬಂಧಿಸಲಾಗಿರುವವರಲ್ಲಿ ಛೋಟನ ಮೇಲೆ ಈಗಾಗಲೇ ೭ ಅಪರಾಧ ಪ್ರಕರಣಗಳು ದಾಖಲಾಗಿದೆ. ಅದರಲ್ಲಿ ೫ ಅಪರಾಧಗಳು ಗೋಹತ್ಯೆಗೆ ಸಂಬಂಧಿಸಿವೆ. ಅಲ್ಲದೇ ಅವನ ಮೇಲೆ ಗೂಂಡಾ ಕಾನೂನಿನ ಅಡಿಯಲ್ಲಿಯೂ ದೂರು ದಾಖಲಿಸಲಾಗಿದೆ. ಫೈಜಾನ ಮೇಲೆಯೂ ೭ ಅಪರಾಧ ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ ೪ ಗೋಹತ್ಯೆಯ ಸಂದರ್ಭದಲ್ಲಿವೆ. (ಇವರಿಬ್ಬರ ಮೇಲೆ ಈ ಹಿಂದೆಯೇ ಗೋಹತ್ಯೆಯ ದೂರು ಇದೆ. ಹೀಗಿರುವಾಗ ಅವರನ್ನು ಇಲ್ಲಿಯವರೆಗೆ ಕಠಿಣ ಶಿಕ್ಷೆ ಏಕೆ ಆಗಿಲ್ಲ ? ಒಂದು ವೇಳೆ ಅವರು ಸತತವಾಗಿ ಜಾಮೀನಿನ ಮೇಲೆ ಹೊರಗೆ ಬಂದು ಪದೇ ಪದೇ ಅದೇ ಅಪರಾಧವನ್ನೇ ಮಾಡುತ್ತಿದ್ದರೆ, ಗೋಹತ್ಯೆ ಎಂದಾದರೂ ನಿಲ್ಲ ಬಹುದೇ ? ಇಂತಹ ಕಾನೂನು ಮತ್ತು ನಿಯಮಗಳನ್ನು ಬದಲಾಯಿಸುವುದೇ ಸೂಕ್ತ ! – ಸಂಪಾದಕರು)

ಸಂಪಾದಕೀಯ ನಿಲುವು

ಉತ್ತರಪ್ರದೇಶದಲ್ಲಿ ಗೋಹತ್ಯೆ ನಿಷೇಧ ಕಾನೂನು ಜಾರಿಯಲ್ಲಿರುವಾಗಲೂ ಈ ರೀತಿ ಅಪರಾಧಗಳು ನಡೆಯುತ್ತಿದ್ದರೆ, ಈ ಕಾನೂನಿನ ನಿಯಮಗಳನ್ನು ಮತ್ತಷ್ಟು ಬಿಗಿಗೊಳಿಸಿ ಆರೋಪಿಗಳ ಮೇಲೆ ಶೀಘ್ರಗತಿ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲು ಸರಕಾರವು ಪ್ರಯತ್ನಿಸುವುದು ಆವಶ್ಯಕವಾಗಿದೆ !