ಕಾಶ್ಮೀರಿ ಹಿಂದೂಗಳ ಬಗ್ಗೆ ಪ್ರಶ್ನೆ ಕೇಳಿದಾಗ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ ಇವರು ಚರ್ಚಾಕೂಟದಿಂದ ಪಲಾಯನ !

ಪ್ರಶ್ನೆ ಕೇಳಿದ ವಾರ್ತಾ ವಾಹಿನಿಯ ಸಂಪಾದಕರ ಮೇಲೆ ಸಿಡಿಮಿಡಿಗೊಂಡರು !

‘ಟೈಮ್ಸ್ ನೌ’ನ ಸಂಪಾದಕಿ ನಾವಿಕಾ ಕುಮಾರ ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮತ್ತು ಶ್ರೀನಗರ ಲೋಕಸಭಾ ಸದಸ್ಯ ಫಾರೂಕ್ ಅಬ್ದುಲ್ಲ

ನವ ದೆಹಲಿ – ಆಂಗ್ಲಾ ವಾರ್ತಾ ವಾಹಿನಿ ‘ಟೈಮ್ಸ್ ನೌ’ನ ಒಂದು ಚರ್ಚಾಕೂಟದಲ್ಲಿ ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮತ್ತು ಶ್ರೀನಗರ ಲೋಕಸಭಾ ಸದಸ್ಯ ಫಾರೂಕ್ ಅಬ್ದುಲ್ಲ ಇವರು ೧೯೯೦ ರಲ್ಲಿ ಕಾಶ್ಮೀರ ಕಣಿವೆಯಲ್ಲಿ ನಡೆದ ಹಿಂದೂಗಳ ನರಮೇದದ ಬಗ್ಗೆ ಪ್ರಶ್ನೆ ಕೇಳಿದಾಗ ಅವರು ಸಿಡಿಮಿಡಿಗೊಂಡು ಕಾರ್ಯಕ್ರಮವನ್ನು ಬಿಟ್ಟು ಹೋದರು. (ಉತ್ತರ ನೀಡಲು ತಪ್ಪಿಸಿಕೊಂಡರೂ ಸತ್ಯ ಎಂದಿಗೂ ಮುಚ್ಚಿಡಲಾಗುವುದಿಲ್ಲ. ಅಬ್ದುಲ್ಲಾ ಇವರಿಗೆ ಒಂದಲ್ಲ ಒಂದು ದಿನ ಹಿಂದೂಗಳ ಪ್ರಶ್ನೆಗೆ ಉತ್ತರ ನೀಡಲೇಬೇಕಾಗುತ್ತದೆ ! – ಸಂಪಾದಕರು) ‘ಟೈಮ್ಸ್ ನೌ’ನ ಸಂಪಾದಕಿ ನಾವಿಕಾ ಕುಮಾರ ಇವರು ಅವರಿಗೆ ಕಾಶ್ಮೀರಿ ಹಿಂದೂಗಳ ಬಗ್ಗೆ ಪ್ರಶ್ನೆ ಕೇಳಿದ ನಂತರ, ‘ನೀವು ಕಾಶ್ಮೀರಿದಲ್ಲಿನ ಹಿಂದೂಗಳ ನರಮೇದದ ಬಗ್ಗೆ ಪ್ರಶ್ನೆ ಕೇಳಿದರೆ ನಾನು ಈ ಕಾರ್ಯಕ್ರಮದಿಂದ ಹೊರ ಹೋಗುತ್ತೆನೆ. ನೀವು ಬೇಕಂತಲೇ ಹಳೆಯ ಗಾಯದ ಮೇಲೆ ಬರೆ ಎಳೆಯುತ್ತಿದ್ದೀರಿ’, ಎಂದು ಅಬ್ದುಲ್ಲ ಆರೋಪಿಸಿದರು.

೧. ಅಬ್ದುಲ್ಲಾ ಅವರು ನಾವಿಕಾ ಕುಮಾರ ಇವರಿಗೆ, ‘ನೀವು ಕಾಶ್ಮೀರಿ ಹಿಂದೂಗಳ ನರಮೇದದ ಬಗ್ಗೆ ನನಗೆ ಪ್ರಶ್ನೆ ಕೇಳಿ ಪಕ್ಷಪಾತ ಮಾಡುತ್ತಿರುವಿರಿ. ನೀವು ಭಾಜಪದ ಪ್ರತಿನಿಧಿ ಇರುವಂತೆ ಪ್ರಶ್ನೆ ಕೇಳುತ್ತಿದ್ದೀರಿ’, ಎಂದೂ ಸಹ ಅಬ್ದುಲ್ಲಾ ಇವರು ಆರೋಪಿಸಿದರು. (ಕಾಶ್ಮೀರಿ ಹಿಂದೂಗಳ ಬಗ್ಗೆ ಯಾರೇ ಧ್ವನಿ ಎತ್ತಿದರು ಅವರು ಭಾಜಪದ ಪ್ರತಿನಿಧಿ’ ಇರುವ ಬಗ್ಗೆ ದೂರುತ್ತಾ ವಿಷಯವನ್ನು ಮರೆಮಾಚುವ ಅಬ್ದುಲ್ಲ ! – ಸಂಪಾದಕರು) ‘ಯಾರಿಗೆ ಕಣಿವೆಯಿಂದ ಹೊರಗೆ ಹೋಗಲು ಅನಿವಾರ್ಯಗೊಳಿಸಿದ್ದ ಆ ಎಲ್ಲಾ ಹಿಂದೂಗಳು ನನಗೆ ಸಹೋದರರ ಹಾಗೆ ಇದ್ದರು’, ಎಂದೂ ಸಹ ಅವರು ಹೇಳಿದರು. (ಕಾಶ್ಮೀರಿ ಹಿಂದೂಗಳು ಸಹೋದರರ ಹಾಗೆ ಇದ್ದಿದ್ದರೆ, ಅವರ ಹತ್ಯೆ ಏಕೆ ಮಾಡಲಾಯಿತು ?’, ಇದನ್ನು ಅಬ್ದುಲ್ಲಾ ಇವರು ಹೇಳಬೇಕು ! – ಸಂಪಾದಕರು)

೨. ಚರ್ಚಾಕೂಟದ ಸಮಯದಲ್ಲಿ ನಾವಿಕಾ ಕುಮಾರ ಇವರು ಅಬ್ದುಲ್ಲರವರು ಅಧಿಕಾರದಲ್ಲಿ ಇರುವಾಗ ಹತ್ಯೆ ಮಾಡಲಾಗಿರುವ ನ್ಯಾಯಮೂರ್ತಿ ನೀಲಕಂಠ ಗಂಜು, ಟಿಕಾಲಾಲ್ ಟಪಲು ಮತ್ತು ಪತ್ರಕರ್ತ ಪ್ರೇಮನಾಥ ಭಟ್ಟ ಈ ಕಾಶ್ಮೀರಿ ಹಿಂದೂಗಳ ಬಗ್ಗೆ ಕೇಳಿದಾಗ ಅವರು ಸಂದರ್ಶನದ ಉದ್ದೇಶದ ಬಗ್ಗೆ ಪ್ರಶ್ನೆಚಿಹ್ನೆ ಎತ್ತಿದರು ಮತ್ತು ಚರ್ಚಾಕೂಟದಿಂದ ಹೊರ ನಡೆದರು.

೩. ಈ ಚರ್ಚಾಕೂಟದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಪ್ರಮಾಣದಲ್ಲಿ ಪ್ರಸಾರಿತಗೊಂಡ ನಂತರ ಅನೇಕರು ಅಬ್ದುಲ್ಲ ಅವರನ್ನು ಟೀಕಿಸಿದರು. ಟಿ.ವಿ. ೯ ವಾರ್ತಾ ವಾಹಿನಿಯ ಕಾರ್ಯಕಾರಿ ಸಂಪಾದಕರು ಮತ್ತು ಕಾಶ್ಮೀರಿ ಹಿಂದೂ ಆಗಿರುವ ಆದಿತ್ಯ ರಾಜ ಕೌಲ್ ಇವರು, ‘ಚರ್ಚಾಕೂಟದಿಂದ ಪಲಾಯನ ಮಾಡಿರುವ ಫಾರೂಕ್ ಅಬ್ದುಲ್ಲಾ ಇವರು ೧೯೯೦ ರಲ್ಲೂ ಪಲಾಯನ ಮಾಡಿ ಹಿಂದೂಗಳಿಗೆ ಜಿಹಾದಿ ಭಯೋತ್ಪಾದಕರ ಕೈಯಲ್ಲಿ ಸಾಯಲು ಬಿಟ್ಟಿದ್ದರು’, ಎಂದು ಟೀಕಿಸಿದ್ದಾರೆ.

ಸಂಪಾದಕೀಯ ನಿಲುವು

ನ್ಯಾಷನಲ್ ಕನ್ಫ್ಯೂರೆನ್ಸನ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಇವರು ಯಾವಾಗಲೂ ಕಾಶ್ಮೀರಿ ಹಿಂದೂಗಳ ನರಮೇದದ ಬಗ್ಗೆ ಮಾತನಾಡುವುದು ಮರೆಮಾಚಿದ್ದಾರೆ. ಅವರ ಕಾರ್ಯಕಾಲದಲ್ಲಿ ಹಿಂದೂಗಳ ಹತ್ಯೆ ಆಗಿರುವುದರಿಂದ ಅದಕ್ಕೆ ಅವರು ಹೊಣೆಗಾರರಾಗಿದ್ದಾರೆ. ಇಂತಹ ಎಲ್ಲರ ಮೇಲೆಯೂ ಮೊಕ್ಕಾಡಮೆ ನಡೆಸಿ ಶಿಕ್ಷೆ ನೀಡುವುದು ಅವಶ್ಯಕವಾಗಿದೆ !