ನವದೆಹಲಿ – ಅರುಣಾಚಲ ಪ್ರದೇಶ ರಾಜ್ಯಕ್ಕೆ ತಾಗಿರುವ ಭಾರತ-ಚೀನಾ ಗಡಿಯಲ್ಲಿ ಅನವಾಜ ಜಿಲ್ಲೆಯ ನಾಗರಿಕರು ಒಂದು ವಿಡಿಯೋ ತಯಾರಿಸಿದ್ದಾರೆ. ಇದರಲ್ಲಿ ಚೀನಾದ ಸೈನ್ಯದಿಂದ ಗಡಿಯಲ್ಲಿ ನಿರ್ಮಾಣವಾಗುತ್ತಿರುವ ಕಟ್ಟಡ ಕಾಮಗಾರಿ ಕಾಣಿಸುತ್ತಿದೆ. ಅದಕ್ಕಾಗಿ ಉಪಯೋಗಿಸುತ್ತಿರುವ ದೊಡ್ಡ ವಾಹನಗಳು ಮತ್ತು ಚೀನಿ ಸೈನಿಕರು ಕಾಣಿಸುತ್ತಿದ್ದಾರೆ. ಚಾಲಾಗಮನಲ್ಲಿನ ಹಾದಿಗರಾ-ಡೆಲ್ಟಾ ಸಿಕ್ಸ್ ಈ ಭಾರತೀಯ ಗಡಿಯಲ್ಲಿರುವ ಸೈನ್ಯದ ನೆಲೆಯಿಂದ ಈ ಚಿತ್ರೀಕರಣ ಮಾಡಿರುವುದಾಗಿ ಹೇಳಲಾಗುತ್ತಿದೆ. ಚಾಲಾಗಮ ಇದು ಭಾರತ-ಚೀನಾ ಗಡಿಯ ಹತ್ತಿರದ ಅರುಣಾಚಲ ಪ್ರದೇಶದ ಹತ್ತಿರದ ಪ್ರತ್ಯಕ್ಷ ನಿಯಂತ್ರಣ ರೇಖೆಗೆ ತಾಗಿ ಇರುವ ಕೊನೆಯ ಸ್ಥಳವಾಗಿದೆ. ಸಾಮಾನ್ಯವಾಗಿ ಈ ಸ್ಥಳಕ್ಕೆ ಹೋಗಲು ೪ ದಿನಗಳ ಕಾಲಾವಧಿ ಬೇಕಾಗುತ್ತದೆ. ‘ಪ್ರತ್ಯಕ್ಷ ಗಡಿ ರೇಖೆಯ ಹತ್ತಿರ ಚೀನಾದ ಭಾಗದಿಂದ ಯಾವ ವೇಗದಲ್ಲಿ ರಸ್ತೆಯನ್ನು ನಿರ್ಮಿಸುತ್ತಿರುವ ಮತ್ತು ಇತರೆ ಕೆಲಸಗಳನ್ನು ಮಾಡಲಾಗುತ್ತಿದೆಯೋ, ಅದು ಚಿಂತೆಗೆ ಎಡೆ ಮಾಡಿಕೊಡುತ್ತಿದೆ’, ಎಂದು ಅಲ್ಲಿಯ ಗ್ರಾಮಸ್ಥರ ಹೇಳಿಕೆಯಾಗಿದೆ.
Locals of Anjaw district in #ArunachalPradesh have recorded videos showing Chinese machinery engaging in construction in areas near the LAC https://t.co/I4ZKGompcx
— IndiaToday (@IndiaToday) August 26, 2022
ಸಂಪಾದಕೀಯ ನಿಲುವುಭಾರತ ಚೀನಾಕ್ಕೆ ಇಂತಹ ಕೃತ್ಯದ ಕುರಿತು ಯಾವಾಗ ಪ್ರಶ್ನಿಸಲಿದೆ ? |