ಭಾಗ್ಯನಗರದಲ್ಲಿ ಭಾಜಪದ ಶಾಸಕ ಟಿ. ರಾಜ ಸಿಂಹ ಇವರ ಬಂಧನ

  • ಮಹಮ್ಮದ್ ಪೈಗಂಬರರ ಬಗ್ಗೆ ತಥಾಕಥಿತ ಅಕ್ಷೆಪಾರ್ಯ ಹೇಳಿಕೆ ನೀಡಿದ ಆರೋಪ

  • ಮುಸಲ್ಮಾನರಿಂದ ‘ಸರ್ ತನ ಸೇ ಜುದಾ’(ಶಿರಚ್ಛೇದ) ಮಾಡುವ ಬೆದರಿಕೆ

ಭಾಜಪಾದ ಶಾಸಕ ಟಿ. ರಾಜ ಸಿಂಹ

ಭಾಗ್ಯನಗರ (ತೆಲಂಗಾಣ) – ಮಹಮ್ಮದ್ ಪೈಗಂಬರರ ತಥಾಕಥಿತ ಅಪಮಾನ ಮಾಡಿರುವುದರ ಬಗ್ಗೆ ಇಲ್ಲಿಯ ಗೋಷಾಮಹಲ್ ವಿಧಾನಸಭಾ ಮತದಾರ ಕ್ಷೇತ್ರದ ಭಾಜಪಾದ ಶಾಸಕ ಟಿ. ರಾಜ ಸಿಂಹ ಇವರನ್ನು ಬಂಧಿಸಲಾಗಿದೆ. ಅವರ ಮೇಲೆ ಕಲಂ ೧೫೩ಅ, ೨೯೫ ಮತ್ತು ೫೦೫ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ. ‘ಯೂಟ್ಯುಬ್’ನಲ್ಲಿ ಟಿ. ರಾಜಾ ಸಿಂಹ ಇವರು ನೀಡಿರುವ ಹೇಳಿಕೆಯ ವಿಡಿಯೋ ಪ್ರಸಾರವಾದ ನಂತರ ಬಶೀರಬಾಗದಲ್ಲಿನ ಪೊಲೀಸ ಆಯುಕ್ತರ ಕಾರ್ಯಾಲಯದ ಹೊರಗೆ ಹೆಚ್ಚಿನ ಸಂಖ್ಯೆಯ ಮುಸಲ್ಮಾನರು ಒಗ್ಗೂಡಿ ಟಿ. ರಾಜಸಿಂಹ ಇವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಅವರು ಇಲ್ಲಿ ‘ರಸ್ತೆತಡೆ’ ಆಂದೋಲನ ನಡೆಸಿದರು. ಈ ಸಮಯದಲ್ಲಿ ಟಿ. ರಾಜಾ ಸಿಂಹ ಇವರನ್ನು ಉದ್ದೇಶಿಸಿ ‘ಸರ ತನ್ ಸೇ ಜುದಾ’ ಎಂದು ಘೋಷಣೆ ನೀಡಲಾಯಿತು. ಅದರ ನಂತರ ಮುಸಲ್ಮಾನರಿಂದ ಪೊಲೀಸ ಆಯುಕ್ತರ ಕಾರ್ಯಾಲಯದಲ್ಲಿ (ದಕ್ಷಿಣ ವಿಭಾಗ) ಬಲವಂತವಾಗಿ ಪ್ರವೇಶಿಸಿ ನಿಷೇಧ ನೊಂದಾಯಿಸಿದರು. ಇದರಿಂದ ಇಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಯಿತು. ಅದರ ನಂತರ ಪೊಲೀಸರು ಟಿ. ರಾಜಸಿಂಹ ಇವರ ವಿರುದ್ಧ ಪ್ರಕರಣವನ್ನು ದಾಖಲಿಸಿ ಅವರನ್ನು ಮನೆಯಿಂದ ಬಂಧಿಸಿದರು.

ಟಿ. ರಾಜಾ ಸಿಂಹ ಇವರ ವಿಡಿಯೋದಿಂದ ಬಂದಿಸಲಾಗಿದೆ, ಅದು ೧೦ ನಿಮಿಷ ೨೭ ಸೆಕೆಂಡ ದಷ್ಟು ಇದೆ. ಈ ವಿಡಿಯೋದಲ್ಲಿ ‘ಫಾರುಕಿ ಕೆ ಆಂಖ ಕಾ ಇತಿಹಾಸ ಸುನಿಯೆ’ ಎಂಬ ಶೀರ್ಷಿಕೆ ಇದೆ. ‘ಶ್ರೀ ರಾಮ ಚ್ಯಾನಲ್ ತೆಲಂಗಾಣ’ ಎಂಬ ಹೆಸರಿನ ‘ಯುಟ್ಯುಬ್ ಚಾನಲ್’ನಿಂದ ಈ ವಿಡಿಯೋ ಆಗಸ್ಟ್ ೨೨ ರಂದು ರಾತ್ರಿ ಪ್ರಸಾರ ಮಾಡಲಾಯಿತು. ಇದರಲ್ಲಿ ಟಿ. ರಾಜಾ ಸಿಂಹ ಇವರು ಹಾಸ್ಯ ಕಲಾವಿದ ಮುನ್ನವರ ಫಾರೂಕಿ ಇವರ ಕಾರ್ಯಕ್ರಮದ ಬಗ್ಗೆ ಟೀಕಿಸುವಾಗ ಭಾಜಪದಿಂದ ಅಮಾನತು ಗೊಂಡಿರುವ ವಕ್ತೆ ನೂಪುರು ಶರ್ಮ ಇವರ ಸಂಬಂಧಿತ ಟೀಕೆ ಮಾಡಿದರು. ಶರ್ಮಾ ಅವರ ಹೆಸರು ನೇರವಾಗಿ ಹೇಳದೆ ಅವರು ಕಥಾಕಥಿತ ಅಪಮಾನಕರ ಹೇಳಿಕೆಯ ಉಲ್ಲೇಖವನ್ನು ಟಿ. ರಾಜಾ ಸಿಂಹ ಇವರು ಮಾಡುತ್ತಿರುವುದು ಇದರಲ್ಲಿ ಕಾಣುತ್ತಿದೆ. ಶರ್ಮಾ ಅವರು ಮಹಮ್ಮದ್ ಪೈಗಂಬರರ ಬಗ್ಗೆ ತಥಾಕಥಿತ ಅಪಮಾನಕರ ಹೇಳಿಕೆಯ ನಂತರ ಅಂತರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ವಿವಾದ ನಿರ್ಮಾಣವಾಗಿತ್ತು. ಇದರ ನಂತರ ಅನೇಕ ಸ್ಥಳಗಳಲ್ಲಿ ಆಂದೋಲನ ನಡೆಸಲಾಯಿತು. ಕೊನೆಗೆ ಟಿ. ರಾಜಾ ಸಿಂಹ ಇವರನ್ನು ಆಗಸ್ಟ್ ೨೩ ರಂದು ಬೆಳಿಗ್ಗೆ ಧಾರ್ಮಿಕ ಭಾವನೆಗಳಿಗೆ ನೋವು ಉಂಟು ಮಾಡಿರುವ ಆರೋಪದಡಿಯಲ್ಲಿ ಬಂದಿಸಲಾಯಿತು.

ಟಿ. ರಾಜಾ ಸಿಂಹ ಭಾಜಪದಿಂದ ಅಮಾನತು

ಭಾಜಪದಿಂದ ಅವರ ಶಾಸಕರಾದ ಟಿ. ರಾಜಾ ಸಿಂಹ ಇವರನ್ನ ಪಕ್ಷದಿಂದ ಅಮಾನತುಗೊಳಿಸಲಾಗಿದೆ. ಹಾಗೂ ಅವರ ಕಥಾಕಥಿತ ಆಕ್ಷೇಪಾರ್ಹ ಹೇಳಿಕೆಯ ಬಗ್ಗೆ ಅವರಿಗೆ ‘ಕಾರಣ ನೀಡಿ’ ನೋಟಿಸ್ ಸಹ ಜಾರಿ ಮಾಡಲಾಗಿದೆ. ‘ನಿಮ್ಮನ್ನು ಪಕ್ಷದಿಂದ ಹೊರ ಏಕೆ ಹಾಕಬಾರದು ?’ ಎಂದು ಅವರಿಗೆ ಪ್ರಶ್ನಿಸಲಾಗಿದೆ. ಅವರಿಗೆ ಉತ್ತರ ನೀಡುವುದಕ್ಕೆ ೧೦ ದಿನದ ಕಾಲಾವಕಾಶ ನೀಡಲಾಗಿದೆ ಹಾಗೂ ಅವರ ಕುರಿತು ಒಂದು ವಿಚಾರಣೆ ಸಮಿತಿಯನ್ನು ಸ್ಥಾಪಿಸಲಾಗಿದೆ.

ಶಾಸಕರ ಅಕ್ಷೇಪಾರ್ಹ ಹೇಳಿಕೆಯನ್ನು ಪ್ರಧಾನಿ ಮೋದಿ ಸಮರ್ಥಿಸುತ್ತಾರೆಯೇ ? – ಅಸದುದ್ದಿನ ಓವೈಸಿ ಇವರ ಪ್ರಶ್ನೆ

ಟಿ. ರಾಜಾ ಸಿಂಹ ಇವರ ಹೇಳಿಕೆಯ ಬಗ್ಗೆ ಪ್ರತಿಕ್ರಿಯೆ ವ್ಯಕ್ತ ಪಡಿಸುತ್ತಿರುವಾಗ ಎಮ್.ಐ.ಎಮ್.ನ ಅಧ್ಯಕ್ಷ ಅಸದುದ್ದೀನ ಓವೈಸಿ, “ಭಾಜಪ ಮುಸಲ್ಮಾನ ಮತ್ತು ಮಹಮ್ಮದ್ ಪೈಗಂಬರರನ್ನು ದ್ವೇಷಿಸುತ್ತಾರೆ. ಭಾಗ್ಯನಗರದಲ್ಲಿನ ಶಾಂತತೆ ಭಾಜಪ ಸಹಿಸುತ್ತಿಲ್ಲ. ಭಾಜಪ ಸಾಮಾಜಿಕ ಸಾಮರಸ್ಯ ಕದಡುತ್ತಿದೆ. ಮುಸಲ್ಮಾನರಿಗೆ ಭಾವನಿಕವಾಗಿ ಮತ್ತು ಮಾನಸಿಕವಾಗಿ ತೊಂದರೆ ನೀಡುವುದು, ಇದು ಭಾಜಪದ ಅಧಿಕೃತ ಉದ್ದೆಶವಾಗಿದೆ. ಪೈಗಂಬರರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡುವ ನೂಪುರ ಶರ್ಮಾ ಪ್ರಸ್ತುತ ಕಾರಾಗೃಹದಲ್ಲಿ ಇದ್ದಾರೆಯೇ ? ಅವರಿಗೆ ಭಾಜಪದಿಂದ ಪೊಲೀಸ ಸಂರಕ್ಷಣೆ ನೀಡಲಾಗಿದೆ. ಭಾಜಪದ ಶಾಸಕರು ನೀಡಿರುವ ಹೇಳಿಕೆನ್ನು ಪ್ರಧಾನಿ ನರೇಂದ್ರ ಮೋದಿಯವರಿಗೆ ಬೆಂಬಲವಿದೆಯೇ ? ಆದರೂ ಮುಸಲ್ಮಾನರು ಕಾನೂನನ್ನು ಕೈಗೆತ್ತಿಕೊಳ್ಳಬಾರದು.” ಎಂದು ಹೇಳಿದರು.

ನಾನು ಯಾರ ಹೆಸರು ಹೇಳಿಲ್ಲ ! – ಟಿ. ರಾಜಾ ಸಿಂಹ ಇವರ ಸ್ಪಷ್ಟಿಕರಣ

ಈ ವಿಡಿಯೋದಲ್ಲಿ ಟಿ. ರಾಜಾ ಸಿಂಹ ಇವರು ನೂಪುರು ಶರ್ಮಾ ಇವರ ಹೇಳಿಕೆಯಲ್ಲಿನ ಕೆಲವು ಭಾಗ ಯಾರ ಹೆಸರು ತೆಗೆದುಕೊಳ್ಳದೆ ಹೇಳಿದ್ದಾರೆ. ಇದರಿಂದ ಅವರನ್ನು ವಿರೋಧಿಸಲಾಗುತ್ತಿದೆ. ಈ ವಿರೋಧದ ಬಗ್ಗೆ ಟಿ. ರಾಜಾ ಸಿಂಹ ಇವರು ಸ್ಪಷ್ಟೀಕರಣ ನೀಡುತ್ತಾ, ನಾನು ಯಾರ ಹೆಸರನ್ನು ತೆಗೆದುಕೊಂಡಿಲ್ಲ ಎಂದು ಹೇಳಿದರು.

ತೆಲಂಗಾಣ ಪ್ರದೇಶದ ಕಾಂಗ್ರೆಸ್‌ನ ಕಾರ್ಯದರ್ಶಿ ರಾಶಿದ ಖಾನ್ ಇವರಿಂದ ಮುಸಲ್ಮಾನರಿಗೆ ಕರೆ

ಟಿ. ರಾಜಾ ಸಿಂಹ ಇವರ ಮನೆಗೆ ಬೆಂಕಿ ಹಚ್ಚ ಬೇಕು ! (ಅಂತೆ)

‘ಒಂದು ವೇಳೆ ಟಿ. ರಾಜಾ ಸಿಂಹ ಇವರನ್ನು ೨೪ ಗಂಟೆಯಲ್ಲಿ ಬಂಧಿಸದಿದ್ದರೆ, ಅವರ ಮನೆಗೆ ಬೆಂಕಿ ಹಚ್ಚಬೇಕೆಂದು’, ರಾಜ್ಯದ ಕಾಂಗ್ರೆಸ್‌ನ ಕಾರ್ಯದರ್ಶಿ ರಾಶಿದ ಖಾನ್ ಇವರು ಮುಸಲ್ಮಾನರಿಗೆ ಕರೆ ನೀಡಿದರು. ‘ಕಾನೂನು ಮತ್ತು ಸುವ್ಯವಸ್ಥೆ ಹಾಳಾದರೆ ಅದಕ್ಕೆ ನಾನು ಜವಾಬ್ದಾರನಲ್ಲ. ಟಿ. ರಾಜಾ ಸಿಂಹ ಇವರು ಯಾವಾಗಲೂ ಪೈಗಂಬರರನ್ನು ಅವಮಾನಿಸುತ್ತಾರೆ. ಅವರನ್ನು ಬಂಧಿಸಿ ಇಲ್ಲವಾದರೆ ನಗರದಲ್ಲಿನ ಕಾನೂನು ಮತ್ತು ಸುವ್ಯವಸ್ಥೆ ಹಾಳು ಮಾಡುತ್ತೇನೆಂದು’, ಖಾನ್ ಅವರು ಬೆದರಿಕೆ ನೀಡಿದ್ದಾರೆ.
ಈ ವಿಷಯವಾಗಿ ಒಂದು ವಾರ್ತಾ ವಾಹಿನಿ ಪತ್ರಕರ್ತರು ಕೇಳಿರುವ ಪ್ರಶ್ನೆಗೆ ಉತ್ತರಿಸುವಾಗ, ನಾನು ಒಬ್ಬ ಮುಸಲ್ಮಾನನಾಗಿ ಪೈಗಂಬರನ ಅಪಮಾನ ಸಹಿಸಲು ಸಾಧ್ಯವಿಲ್ಲವೆಂದು ನಾನು ಈ ಕರೆ ನೀಡಿದ್ದೇನೆ ಎಂದು ಹೇಳಿದರು.

ಸಂಪಾದಕೀಯ ನಿಲುವು

  • ಹಿಂದೂ ದೇವತೆಗಳ ಅಪಮಾನ ಮಾಡುವವರ ಮೇಲೆ ಈ ರೀತಿ ಕೂಡಲೇ ಕ್ರಮ ಕೈಗೊಳ್ಳಲಾಗುವುದಿಲ್ಲ, ಎಂಬುದನ್ನು ಗಮನದಲ್ಲಿಡಿ !
  • ಶಿರಚ್ಛೇದ ಮಾಡುವಂತೆ ರಾಜಾರೋಷವಾಗಿ ಬೆದರಿಕೆ ನೀಡುವವರ ಮೇಲೆಯೂ ಸರಕಾರ ಕ್ರಮ ಕೈಗೊಳ್ಳುವುದೇ ?