ಜ್ಞಾನವಾಪಿ ಪ್ರಕರಣದ ಮಹಿಳಾ ದೂರುದಾರರ ಮನೆಯ ಮಾಹಿತಿಯನ್ನು ಕಂಡು ಹಿಡಿಯುವ ಪ್ರಯತ್ನ

ವಾರಾಣಸಿ (ಉತ್ತರಪ್ರದೇಶ) – ಇಲ್ಲಿಯ ಜ್ಞಾನವಾಪಿ ಮತ್ತು ಶೃಂಗಾರ ಗೌರಿ ಪ್ರಕರಣದ ಹಿಂದೂ ಪಕ್ಷದ ಒಬ್ಬ ದೂರುದಾರರಾಗಿರುವ ರೇಖಾ ಪಾಠಕ ಇವರು ಕೆಲವರು ಅವರ ಮನೆಯ ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದಾರೆ ಎಂದು ದೂರು ದಾಖಲಿಸಿದ್ದಾರೆ. ಮುಖವನ್ನು ಮುಚ್ಚಿಕೊಂಡಿದ್ದ ಕೆಲವು ಜನರು ನನ್ನ ಮನೆಯ ಮಾಹಿತಿಯನ್ನು ವಿಚಾರಿಸುತ್ತಿದ್ದರು ಎಂದು ಪಕ್ಕದ ಮನೆಯವರು ತಿಳಿಸಿದ್ದಾರೆ. ಪಕ್ಕದ ಮನೆಯವರು ಜಾಗರೂಕರಾಗಿರುವುದರಿಂದ ಅವರು ಈ ವಿಷಯದಲ್ಲಿ ಯಾವುದೇ ಮಾಹಿತಿಯನ್ನು ನೀಡಿಲ್ಲ. ಈ ಪ್ರಕರಣದ ಕುರಿತು ಪೊಲೀಸರಿಗೆ ಮಾಹಿತಿಯನ್ನು ನೀಡಲಾಗಿದೆ. ಈ ಹಿಂದೆಯೂ ಇದೇ ಪ್ರಕರಣದ ದೂರುದಾರರಾಗಿರುವ ಡಾ. ಸೋಹನಲಾಲ ಆರ್ಯ ಇವರಿಗೂ ಕೊಲೆ ಬೆದರಿಕೆ ಬಂದಿತ್ತು.