ಅಗತ್ಯ ಔಪಚಾರಿಕತೆಗಳನ್ನು ಪೂರ್ಣಗೊಳಿಸಲಾಗದೇ ೩೩೪ ಪಾಕಿಸ್ತಾನಿ ನಿರಾಶ್ರಿತ ಹಿಂದೂಗಳು ಈ ವರ್ಷ ಪಾಕಿಸ್ತಾನಕ್ಕೆ ಮರಳಬೇಕಾಯಿತು !

ಲಾಹೋರ್ (ಪಾಕಿಸ್ತಾನ) – ಪಾಕಿಸ್ತಾನದಲ್ಲಿನ ದೌರ್ಜನ್ಯದಿಂದ ಅಲ್ಲಿಯ ಹಿಂದೂಗಳು ಭಾರತಕ್ಕೆ ಬರುತ್ತಿರುತ್ತಾರೆ; ಆದರೆ ಜುಲೈ ೨೦೨೨ ರವರೆಗೆ ಬಂದಿದ್ದ ಹಿಂದೂಗಳ ಪೈಕಿ ೩೩೪ ಹಿಂದೂ ನಿರಾಶ್ರಿತರು ಪುನಃ ಪಾಕಿಸ್ತಾನಕ್ಕೆ ಮರಳಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ೨೦೨೧ ರಿಂದ ಅಂದಾಜು ೧ ಸಾವಿರದ ೫೦೦ ಪಾಕಿಸ್ತಾನಿ ಹಿಂದೂಗಳು ಪಾಕಿಸ್ತಾನಕ್ಕೆ ಮರಳಿದ್ದಾರೆ. ‘ಈ ಪೈಕಿ ಹೆಚ್ಚಿನ ಭಾರತೀಯ ಪೌರತ್ವ ಪಡೆಯಲು ಅಗತ್ಯವಾದ ಔಪಚಾರಿಕತೆಗಳನ್ನು ಪೂರ್ಣಗೊಳಿಸಲು ಹಣ ಅಥವಾ ದಾಖಲೆಗಳಿಲ್ಲದ ಕಾರಣ ಹೆಚ್ಚಿನವರು ಪಾಕಿಸ್ತಾನಕ್ಕೆ ಹಿಂತಿರುಗುತ್ತಿದ್ದಾರೆ’, ಎಂದು ಹಿಂದೂ ಸಿಂಗ್ ಸೋಢಾ ಹೇಳಿದ್ದಾರೆ.

೧. ಪ್ರಸ್ತುತ ಪಾಕಿಸ್ತಾನದಲ್ಲಿರುವ ೨೫ ಸಾವಿರ ಹಿಂದೂಗಳು ಭಾರತೀಯ ಪೌರತ್ವವನ್ನು ಸ್ವೀಕರಿಸಲು ಸಿದ್ಧರಿದ್ದಾರೆ. ಕಳೆದ ೧೦ ರಿಂದ ೧೫ ವರ್ಷಗಳಿಂದ ಈ ಹಿಂದೂಗಳು ಭಾರತದಲ್ಲಿ ವಾಸಿಸುತ್ತಿದ್ದಾರೆ ಮತ್ತು ಅವರು ಭಾರತೀಯ ಪೌರತ್ವವನ್ನು ಪಡೆಯುವುದು ಖಚಿತವಾಗದ ಕಾರಣ ೧ ಸಾವಿರದ ೫೦೦ ಪಾಕಿಸ್ತಾನಿ ಹಿಂದೂಗಳು ೨೦೨೧ ರಲ್ಲಿ ರಾಜಸ್ಥಾನದ ಜೈಸಲ್ಮೇರ್‌ನಿಂದ ಪಾಕಿಸ್ತಾನಕ್ಕೆ ಮರಳಿದ್ದರು.

೨. ಹಿಂದೂ ಸಿಂಗ ಸೋಢಾ ಇವರು, ೨೦೦೪ ಮತ್ತು ೨೦೦೫ ರಲ್ಲಿ ಪೌರತ್ವ ನೀಡಲು ಶಿಬಿರಗಳನ್ನು ಆಯೋಜಿಸಲಾಗಿದೆ. ಅವರಲ್ಲಿ ಅಂದಾಜು ೧೩ ಸಾವಿರ ಪಾಕಿಸ್ತಾನಿ ಹಿಂದೂಗಳು ಭಾರತೀಯ ಪೌರತ್ವವನ್ನು ಪಡೆದರು; ಆದರೆ ಕಳೆದ ೫ ವರ್ಷಗಳಲ್ಲಿ ಕೇವಲ ೨ ಸಾವಿರ ಪಾಕಿಸ್ತಾನಿ ಹಿಂದೂಗಳಿಗೆ ಮಾತ್ರ ಪೌರತ್ವ ನೀಡಲಾಗಿದೆ ಎಂದು ಹೇಳಿದರು.

೩. ಭಾರತದ ಗೃಹ ವ್ಯವಹಾರಗಳ ಸಚಿವಾಲಯದ ನಿಯಮಗಳ ಪ್ರಕಾರ, ಪಾಕಿಸ್ತಾನಿ ವಲಸಿಗರು ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಲು ತಮ್ಮ ಪಾಸ್‌ಪೋರ್ಟ್‌ಗಳನ್ನು ನವೀಕರಿಸಬೇಕು ಮತ್ತು ಪಾಸ್‌ಪೋರ್ಟ್ ಮಾನ್ಯವಾಗಿರಲು ಪಾಕಿಸ್ತಾನಿ ರಾಯಭಾರ ಕಚೇರಿಯಿಂದ ಪ್ರಮಾಣಪತ್ರವನ್ನು ಸಲ್ಲಿಸಬೇಕು. ಹಾಗಾಗಿ ಸಾಕಷ್ಟು ವೆಚ್ಚವಾಗುತ್ತದೆ. ಈ ಖರ್ಚು ಮಾಡಿದರೂ ಭಾರತೀಯ ಪೌರತ್ವವನ್ನು ಪಡೆಯುವ ಖಚಿತತೆಯ ಕೊರತೆಯಿಂದಾಗಿ ಪಾಕಿಸ್ತಾನಿ ಹಿಂದೂಗಳು ಮತ್ತೆ ಪಾಕಿಸ್ತಾನಕ್ಕೆ ಮರಳುತ್ತಾರೆ.