ಮೆಹಬೂಬ ಮುಫ್ತಿ ಮತ್ತೆ ಗೃಹಬಂಧನ

‘ಕೇಂದ್ರ ಸರಕಾರ ಕಾಶ್ಮೀರಿ ಹಿಂದೂಗಳ ಎದುರು ನಮ್ಮ ಪ್ರತಿಮೆ ಶತ್ರು ಎಂದು ನಿರ್ಮಾಣ ಮಾಡಲು ಪ್ರಯತ್ನಿಸುತ್ತಿದ್ದಾರೆ !’ (ಅಂತೆ) – ಮೆಹಬೂಬ ಮುಫ್ತಿ ಇವರ ಆರೋಪ

ಶ್ರೀನಗರ (ಜಮ್ಮು-ಕಾಶ್ಮೀರ) – ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮತ್ತು ಪಿ.ಡಿ.ಪಿ.ಯ ಅಧ್ಯಕ್ಷ ಮೇಹಬೂಬಾ ಮುಫ್ತಿ ಇವರಿಗೆ ಮತ್ತೆ ಗೃಹಬಂಧನದಲ್ಲಿರಿಸಲಾಗಿದೆ. ಅವರು, ‘ನನ್ನ ಮನೆಯ ಹೊರಗೆ ಕೇಂದ್ರ ಮೀಸಲು ಪಡೆಯ ಪೊಲೀಸದಳದ ಸೈನಿಕರನ್ನು ನೇಮಿಸಲಾಗಿದೆ ಮನೆಯ ಮುಖ್ಯ ಪ್ರವೇಶ ದ್ವಾರಕೆ ಬೀಗ ಹಾಕಲಾಗಿದೆ.’ ಎಂದು ಹೇಳಿದರು. ಅವರು ಇದರ ಒಂದು ಛಾಯಾಚಿತ್ರ ಟ್ವೀಟ್ ಮಾಡಿದ್ದಾರೆ. ಮೆಹಬೂಬಾ ಮುಫ್ತಿ ಇವರಿಗೆ ಮೂರು ತಿಂಗಳ ಮೊದಲು, ಅಂದರೆ ಮೇ ೧ ರಂದು ಸರಕಾರದಿಂದ ಅವರನ್ನು ಗೃಹ ಬಂಧನದಲ್ಲಿ ಇರಿಸಲಾಗಿತ್ತು. ಆ ಸಮಯದಲ್ಲಿ ಭಯೋತ್ಪಾದಕರು ಕೊಲೆ ಮಾಡಿರುವ ಕಾಶ್ಮೀರಿ ಹಿಂದೂ ರಾಹುಲ್ ಭಟ್ಟ ಇವರ ಪರಿವಾರದವರನ್ನು ಭೇಟಿ ಮಾಡಲು ಬಡಗಾಮಾಲಾಗೆ ಹೋಗುತ್ತಿದ್ದರು. ಈಗಲು ಅವರು ಭಯೋತ್ಪಾದಕರು ಕೊಲೆ ಮಾಡಿರುವ ಸುನಿಲ್ ಕುಮಾರ ಭಟ್ಟ ಅವರ ಕುಟುಂಬದವರನ್ನು ಭೇಟಿ ಮಾಡಲು ಹೊರಟಿದ್ದರು. (ಹಿಂದೂಗಳ ಹತ್ಯೆ ನಡೆಯಬಾರದು, ಇದಕ್ಕಾಗಿ ಮೆಹಬೂಬಾ ಮುಫ್ತಿ ಇವರು ಏನು ಮಾಡಿದ್ದಾರೆ ?, ಇದನ್ನು ಅವರು ಹೇಳಬೇಕು ! ಹಿಂದೂಗಳನ್ನು ಭೇಟಿ ಮಾಡಿ ಮೊಸಳೆ ಕಣ್ಣೀರು ಸುರಿಸುವುದರಿಂದ ಏನು ಆಗುವುದಿಲ್ಲ, ಎಂಬುದನ್ನು ಅವರು ಗಮನದಲ್ಲಿಡಬೇಕು ! -ಸಂಪಾದಕರು)

ಮೆಹಬೂಬಾ ಮುಫ್ತಿ ಇವರು ಮಾತು ಮುಂದುವರೆಸಿ, ಕೇಂದ್ರ ಸರಕಾರ ಕಾಶ್ಮೀರಿ ಹಿಂದೂಗಳ ನೋವು ಮರೆಮಾಚಿಸುವ ಪ್ರಯತ್ನ ಮಾಡುತ್ತಿದೆ. ಸರಕಾರದ ನಿರ್ದಯಿ ಧೋರಣೆಯಿಂದ ಕಾಶ್ಮೀರ ಬಿಟ್ಟು ಹೋಗದೆ ಇರುವ ವ್ಯಕ್ತಿಗಳ ಹತ್ಯೆ ಮಾಡಲಾಗುತ್ತಿದೆ. ಈ ಮೂಲಕ ಸರಕಾರ ಕಾಶ್ಮೀರಿ ಹಿಂದೂಗಳ ಎದುರು ನಮ್ಮ ಪ್ರತಿಮೆ ಶತ್ರುಗಳೆಂದು ನಿರ್ಮಿಸಲು ಪ್ರಯತ್ನಿಸುತ್ತಿದೆ. ಆದ್ದರಿಂದ ಇಂದು ನನಗೆ ಗೃಹ ಬಂಧನದಲ್ಲಿ ಇರಿಸಲಾಗಿದೆ ಎಂದು ಹೇಳಿದರು.

ಸಂಪಾದಕೀಯ ನಿಲುವು

ಇದರಲ್ಲಿ ಆರೋಪಿಸುವಂತಹದ್ದು ಏನು ಇದೆ ? ಯಾವುದು ಸತ್ಯವಾಗಿದೆ ಅದು ಯಾರಬೇಕಿದ್ದರು ಹೇಳುತ್ತಾರೆ ? ಕಾಶ್ಮೀರದಲ್ಲಿ ಒಂದು ಪಕ್ಷವಾದರೂ ಹಿಂದೂಗಳಿಗಾಗಿ ಏನಾದರೂ ಮಾಡಿದ್ದಾರೆಯೇ ? ಎಲ್ಲಾ ಪಕ್ಷಗಳು ಹಿಂದೂಗಳಿಗಾಗಿ ಶತ್ರುಗಳೆ ಆಗಿದ್ದಾರೆ ಮತ್ತು ಅದು ಹಿಂದೂಗಳಿಗೂ ತಿಳಿದಿದೆ !