ರೊಹಿಂಗ್ಯಾ ಮತ್ತು ಬಾಂಗ್ಲಾದೇಶದ ನುಸುಳುಕೋರ ಮುಸಲ್ಮಾನರಿಗೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಆಧಾರ ಕಾರ್ಡ್ ಮಾಡಿ ಕೊಡುತ್ತಿದೆ !

ಆಧಾರ ಕಾರ್ಡ್ ಮಾಡಿಸಿ ಅವರನ್ನು ಸಂಘಟನೆಯಲ್ಲಿ ಸೇರಿಸಲಾಗುತ್ತಿದೆ !

ಪಾಟಲಿಪುತ್ರ (ಬಿಹಾರ) – ಜಿಹಾದಿ ಸಂಘಟನೆ ಪಾಪ್ಯುಲರ ಫ್ರಂಟ್ ಆಫ್ ಇಂಡಿಯಾವು ತನ್ನ ಸಂಘಟನೆಯಲ್ಲಿ ರೋಹಿಂಗ್ಯಾ ಮತ್ತು ಬಾಂಗ್ಲಾದೇಶಿ ನಸುಳುಕೋರ ಮುಸಲ್ಮಾನರನ್ನು ನೇಮಕ ಮಾಡಿಕೊಳ್ಳಲು ಅವರಿಗೆ ಆಧಾರ ಕಾರ್ಡ ತಯಾರಿಸಿ ಕೊಡಲಾಯಿತು, ಎಂದು ಪೊಲೀಸರ ವಿಚಾರಣೆಯಲ್ಲಿ ಮಾಹಿತಿ ಲಭ್ಯವಾಗಿದೆ. ಆಧಾರ ಕಾರ್ಡ್ ತಯಾರಿಸುವುದಕ್ಕಾಗಿ ಕಳ್ಳ ಸಾಗಾಣಿಕೆ ದಾರದಿಂದ ನಕಲಿ ಕಾಗದ ಪತ್ರಗಳು ತಯಾರಿಸಲಾಗಿತ್ತು ಹಾಗೂ ಈ ಮುಸಲ್ಮಾನರನ್ನು ಕರ್ನಾಟಕ ಮತ್ತು ಇತರ ರಾಜ್ಯಗಳಿಗೆ ಕಾರ್ಮಿಕರಂದು ಕಳುಹಿಸಲಾಗುತ್ತದೆ. ಅದರ ಮೂಲಕ ಅವರಿಗೆ ಹೊಸ ಪರಿಚಯ ನಿರ್ಮಾಣವಾಗುತ್ತದೆ. ಬಿಹಾರದ ನೇಪಾಳ ಗಡಿಯಲ್ಲಿ ಕಿಶನಗಂಜ, ದರ್ಭಂಗಾ, ಕಟಿಹಾರ, ಮಧುಬನಿ, ಸೂಪೌಲ, ಮತ್ತು ಪೂರ್ಣಿಯಾ ಈ ಜಿಲ್ಲೆಗಳಲ್ಲಿ ಈ ರೀತಿ ನಡೆಯುತ್ತಿದೆ.

ಆಧಾರ ಕಾರ್ಡ ತಯಾರಿಸಲು ಭಾರತೀಯ ಮುಸಲ್ಮಾನರ ಉಪಯೋಗ !

ಓರ್ವ ಪೊಲೀಸ ಅಧಿಕಾರಿಯು, ಆಧಾರ್ ಕಾರ್ಡ್ ತಯಾರಿಸಲು ಪಿ.ಎಫ್.ಐ.ನಿಂದ ಭಾರತೀಯ ಮುಸಲ್ಮಾನ್ ಕುಟುಂಬಗಳನ್ನು ಉಪಯೋಗಿಸಲಾಗುತ್ತಿದೆ. ಇದಕ್ಕಾಗಿ ಈ ಕುಟುಂಬಗಳಿಗೆ ಪಿ.ಎಫ್.ಐ. ನಿಂದ ಅನೇಕ ಆಮಿಷಗಳು ತೋರಿಸಿ ಹಣ ಸಹ ನೀಡಲಾಗುತ್ತದೆ. ಅದರ ನಂತರ ಈ ಕುಟುಂಬಗಳು ರೋಹಿಂಗ್ಯ ಮತ್ತು ಬಾಂಗ್ಲಾದೇಶಿ ನುಸುಳಕೋರ ಮುಸಲ್ಮಾನರನ್ನು ಇವರನ್ನು ನಮ್ಮ ಕುಟುಂಬದ ಸದಸ್ಯರೆಂದು ಹೇಳಲಾಗುತ್ತದೆ. ಯಾವ ವ್ಯಕ್ತಿಯ ಆಧಾರ ಕಾರ್ಡ್ ಮಾಡಿಸಲಿಕ್ಕೆ ಇದೆಯೋ ಆ ಬಗ್ಗೆ ಭಾರತೀಯ ಮುಸಲ್ಮಾನರು, ವ್ಯಕ್ತಿ ಚಿಕ್ಕವರಿರುವಾಗ ಇವರನ್ನು ನಮ್ಮ ಸಂಬಂಧಿಕರ ಹತ್ತಿರ ಕಳುಹಿಸಲಾಗಿತ್ತು ಆದ ಕಾರಣ ಅವರ ಆಧಾರ ಕಾರ್ಡ್ ತಯಾರಿಸಲು ಸಾಧ್ಯವಾಗಿಲ್ಲ ಈಗ ಅವರು ನಮ್ಮ ಹತ್ತಿರ ಹಿಂತಿರುಗಿ ಬಂದಿದ್ದಾರೆ ಆದ್ದರಿಂದ ನಾವು ಕಾರ್ಡ ಮಾಡಿಸುತ್ತಿದ್ದೇವೆ, ಎಂದು ಹೇಳುತ್ತಾರೆ. ಎಂದು ಹೇಳಿದರು.

(ಸೌಜನ್ಯ – News Nation)

ಬಂಗಾಲ ಮತ್ತು ಅಸ್ಸಾಂ ಮಾರ್ಗವಾಗಿ ಅಲ್ಲ ಬದಲಾಗಿ ನೇಪಾಳ ಮಾರ್ಗದಿಂದ ನುಸಳುವಿಕೆ !

ಈ ಅಧಿಕಾರಿಯು ತಮ್ಮ ಮಾತನ್ನು ಮುಂದುವರೆಸುತ್ತಾ, ಬಂಗಾಲ ಮತ್ತು ಅಸ್ಸಾಂ ಗಡಿಯಲ್ಲಿ ಈಗ ಬಿಗಿ ಭದ್ರತೆ ಇರುವುದರಿಂದ ಈ ನುಸುಳುಕೋರರು ನೇಪಾಳ ಮೂಲಕ ಭಾರತಕ್ಕೆ ನುಗ್ಗುತ್ತಿದ್ದಾರೆ. ಭಾರತ-ನೇಪಾಳ ಗಡಿಯಲ್ಲಿ ಅನೇಕ ಸ್ಥಳಗಳಲ್ಲಿ ಅವರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದಾರೆ.

ನೇಪಾಳ ಗಡಿಯಲ್ಲಿ ೫೦೦ ಕೋಟಿ ರೂಪಾಯಿ ಖರ್ಚು ಮಾಡಿ ೭೦೦ ಹೊಸ ಮದರಸಾಗಳ ಮತ್ತು ಮಸೀದಿಗಳ ನಿರ್ಮಾಣ !

೨೦೧೮ ರ ನಂತರ ನೇಪಾಳ ಗಡಿಯಲ್ಲಿ ೫೦೦ ಕೋಟಿ ರೂಪಾಯಿ ಖರ್ಚು ಮಾಡಿ ೫೦೦ ಹೊಸ ಮದರಸಾಗಳು ಮತ್ತು ಮಸಿದಿಗಳು ಕಟ್ಟಲಾಗಿದೆ. ಇದಕ್ಕಾಗಿ ಸಂಯುಕ್ತ ಆರಬ ಅಮೀರತ್, ಕತಾರ್ ಮತ್ತು ತುರ್ಕಿಯ ಈ ದೇಶಗಳಿಂದ ಹಣದ ಸಹಾಯ ಮಾಡಲಾಗುತ್ತದೆ, ಎಂದು ಸಹ ಈ ಪೊಲೀಸ ಅಧಿಕಾರಿ ಹೇಳಿದರು.

ಸಂಪಾದಕೀಯ ನಿಲುವು

ರಾಷ್ಟ್ರದ್ರೋಹಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಮೇಲೆ ಕೇಂದ್ರ ಸರಕಾರ ಯಾವಾಗ ನಿಷೇಧ ಹೇರಲಿದೆ ?, ಎಂದು ಹಿಂದೂಗಳು ಸತತವಾಗಿ ಪ್ರಶ್ನೆ ಕೇಳಲಾಗುತ್ತಿದೆ, ಸರಕಾರ ಇದರ ಕಡೆಗೆ ಗಮನ ನೀಡಬೇಕು !