ಬ್ರಿಟನ್‌ನ ಪ್ರಧಾನಮಂತ್ರಿ ಹುದ್ದೆಯ ಕಣದಲ್ಲಿರುವ ಋಷಿ ಸುನಕ ಇವರು ಭಗವಾನ ಶ್ರೀಕೃಷ್ಣನ ದರ್ಶನ ಪಡೆದರು

ಲಂಡನ – ಶ್ರೀಕೃಷ್ಣ ಜನ್ಮಾಷ್ಟಮಿಯ ನಿಮಿತ್ತದಿಂದ ಭಕ್ತಿ ವೇದಾಂತ ಮಂದಿರದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಬ್ರಿಟನ್‌ನ ಪ್ರಧಾನಮಂತ್ರಿ ಹುದ್ದೆಯ ಕಣದಲ್ಲಿರುವ ಭಾರತೀಯ ಸಂಜಾತೆ ಅಭ್ಯರ್ಥಿ ಋಷಿ ಸುನಕ ಮತ್ತು ಅವರ ಪತ್ನಿ ಅಕ್ಷತಾ ಮೂರ್ತಿ ಉಪಸ್ಥಿತರಿದ್ದರು. ಈ ದೇವಸ್ಥಾನ ‘ಇಂಟರನ್ಯಾಶನಲ್ ಸೊಸಾಯಟಿ ಫಾರ ಕೃಷ್ಣ ಕಾನ್ಷಿಯಸನೆಸ್’ ಅಂದರೆ ‘ಇಸ್ಕಾನ’ ನಡೆಸುತ್ತಿದೆ. ಈ ಸಮಯದಲ್ಲಿ ಸುನಕ ಮತ್ತು ಅವರ ಪತ್ನಿ ಭಗವಾನ ಶ್ರೀಕೃಷ್ಣ ದರ್ಶನವನ್ನು ಪಡೆದರು. ಸುನಕ ಇವರು ಪದೇ ಪದೇ ‘ನಾನು ಹಿಂದೂ ಆಗಿದ್ದು, ಅದರ ಬಗ್ಗೆ ನನಗೆ ಅಭಿಮಾನವಿದೆ’, ಎಂದು ವ್ಯಕ್ತಪಡಿಸಿದ್ದಾರೆ. ಅವರು ಗೀತೆಯ ಮೇಲೆ ಕೈಯಿಟ್ಟು ಶಾಸಕ ಸ್ಥಾನದ ಪ್ರಮಾಣವಚನವನ್ನು ತೆಗೆದುಕೊಂಡಿದ್ದರು.