ಪಾಟಲಿಪುತ್ರದಲ್ಲಿ ವಿದ್ಯಾರ್ಥಿಯಿಂದ ವಿದ್ಯಾರ್ಥಿನಿ ಮೇಲೆ ಗುಂಡಿನ ದಾಳಿ : ವಿದ್ಯಾರ್ಥಿನಿ ಆರೋಗ್ಯ ಚಿಂತಾಜನಕ

ಬಿಹಾರದಲ್ಲಿ ಮತ್ತೊಮ್ಮೆ ಜಂಗಲರಾಜ !

ಪಾಟಲಿಪುತ್ರ (ಬಿಹಾರ) – ಇಲ್ಲಿಯ ಸಿಪಾರ ಪ್ರದೇಶದ ಕಾಜಲ್ ಕುಮಾರಿ ಎಂಬ ೧೫ ವರ್ಷದ ವಿದ್ಯಾರ್ಥಿನಿಯ ಮೇಲೆ ಒಬ್ಬ ವಿದ್ಯಾರ್ಥಿಯು ಗುಂಡು ಹಾರಿಸಿದ್ದಾನೆ. ಆ ವಿದ್ಯಾರ್ಥಿಯು ವಿದ್ಯಾರ್ಥಿನಿಗೆ ಹಿಂದಿನಿಂದ ಕತ್ತಿನ ಮೇಲೆ ಗುಂಡು ಹಾರಿಸಿರುವುದು ಸಿಸಿಟಿವಿ ಚಿತ್ರೀಕರಣದಲ್ಲಿ ಕಂಡು ಬಂದಿದೆ.

ಈ ವಿದ್ಯಾರ್ಥಿನಿ ತನ್ನ ಓಣಿಗೆ ತಿರುಗುವಾಗ ಈ ವಿದ್ಯಾರ್ಥಿ ತನ್ನ ಜೋಳಿಗೆಯಿಂದ ಪಿಸ್ತೂಲನ್ನು ಹೊರ ತೆಗೆದು ಆಕೆಯ ಮೇಲೆ ಗುಂಡು ಹಾರಿಸಿ ಅಲ್ಲಿಂದ ಪಲಾಯನ ಮಾಡಿರುವುದು ಇದರಲ್ಲಿ ಕಾಣುತ್ತಿದೆ. ಕಾಜಲ ಈಕೆ ೯ ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದಾಳೆ. ಆಕೆ ಖಾಸಗಿ ಗೃಹಪಾಠದಿಂದ (ಟ್ಯೂಶನ್) ಮನೆಗೆ ಹಿಂತಿರುಗುವಾಗ ಈ ಘಟನೆ ನಡೆದಿದೆ. ಪ್ರಸ್ತುತ ಆಕೆಯ ಆರೋಗ್ಯ ಚಿಂತಾಜನಕವಾಗಿದೆ. ಆಕೆಗೆ ಇಲ್ಲಿಯ ಒಂದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪೊಲೀಸರ ಪ್ರಾಥಮಿಕ ವಿಚಾರಣೆಯಲ್ಲಿ ಈ ಘಟನೆ ಪ್ರೇಮ ಪ್ರಕರಣದಿಂದ ನಡೆದಿದೆ ಎಂದು ಸಂದೇಹ ವ್ಯಕ್ತಪಡಿಸಲಾಗುತ್ತಿದೆ. ಗುಂಡು ಹಾರಿಸುವ ಯುವಕನನ್ನು ಗುರುತಿಸಲಾಗಿದೆ. ಆದರೆ ಅವನು ಇನ್ನು ಪೊಲೀಸರ ಕೈಗೆ ಸಿಕ್ಕಿಲ್ಲ.

ಸಂಪಾದಕೀಯ ನಿಲುವು

ಇದು ಸಮಾಜದ ನೈತಿಕತೆಯ ಅಧಃಪತನವಾಗಿರುವುದರ ದ್ಯೋತಕವಾಗಿದೆ. ಯುವ ಪೀಳಿಗೆ ಸುಸಂಸ್ಕಾರಿತ ಮಾಡುವುದಕ್ಕಾಗಿ ಧೋರಣೆಯುಕ್ತ ಯೋಜನೆಗಳು ಮಾಡದೇ ಇರುವುದರಿಂದ ಎಲ್ಲಾ ಪಕ್ಷದ ಸರಕಾರಗಳಿಗೆ ಇದು ಲಜ್ಜಾಸ್ಪದವಾಗಿದೆ !