ಸ್ವಾತಂತ್ರ್ಯ ದಿನದಂದು ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕರ ದಾಳಿಯಲ್ಲಿ ಒಬ್ಬ ವ್ಯಕ್ತಿ ಮತ್ತು ಒಬ್ಬ ಪೊಲೀಸಗೆ ಗಾಯ

ಶ್ರೀನಗರ – ಜಮ್ಮು ಕಾಶ್ಮೀರದಲ್ಲಿ ಆಗಸ್ಟ್ ೧೫ ರಂದು ಸಂಜೆ ಜಿಹಾದಿ ಭಯೋತ್ಪಾದಕರಿಂದ ಒಂದು ಗಂಟೆಯಲ್ಲಿ ಗ್ರೆನೆಡ ಮೂಲಕ ಎರಡು ಕಡೆ ದಾಳಿ ಮಾಡಿದರು. ಮೊದಲ ದಾಳಿ ಬಡಗಾಮನ ಗೋಪಾಲಪೊರಾ ಚಡುರಾ ಪ್ರದೇಶದಲ್ಲಿ ಆಗಿದೆ, ಅದರಲ್ಲಿ ಕರಣ ಕುಮಾರ ಸಿಂಹ ಎಂಬ ವ್ಯಕ್ತಿ ಗಾಯಗೊಂಡರು. ಎರಡನೆಯ ಘಟನೆ ಶ್ರೀನಗರದಾಗಿದೆ. ಇಲ್ಲಿ ಭಯೋತ್ಪಾದಕರು ಪೊಲೀಸ ನಿಯಂತ್ರಣ ಕೊಠಡಿಯ ಮೇಲೆ ಗ್ರೆನೆಡ ಎಸೆದರು. ಇದರಲ್ಲಿ ಒಬ್ಬ ಪೊಲೀಸ್ ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸುರಕ್ಷಾ ಸೈನಿಕರು ಈ ಪರಿಸರವನ್ನು ಸತ್ತುವರೆದಿದ್ದಾರೆ.

ಜಮ್ಮು ಕಾಶ್ಮೀರ ಪೊಲೀಸರು, ಘಟನಾ ಸ್ಥಳದಿಂದ ಒಂದು ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ. ಲಷ್ಕರೆ-ಎ-ತೋಯ್ಬಾದ ೨ ಭಯೋತ್ಪಾದಕರು ಈ ವಾಹನ ಉಪಯೋಗಿಸುತ್ತಿದ್ದರು. ಅದಲ್ಲದೆ ಒಂದು ರೈಫಲ್ ಮತ್ತು ಎರಡು ನಾಡ ಬಾಂಬುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.

ಸಂಪಾದಕೀಯ ನಿಲುವು

ಭಯೋತ್ಪಾದಕರನ್ನು ನಿರ್ಮಾಣ ಮಾಡುವ ಪಾಕಿಸ್ತಾನವನ್ನು ಎಲ್ಲಿಯವರೆಗೆ ಭಾರತ ನಾಶ ಮಾಡುವುದಿಲ್ಲವೋ ಅಲ್ಲಿಯವರೆಗೆ ಭಯೋತ್ಪಾದನೆಯ ಮೂಲ ಸಹಿತ ಉಚ್ಛಾಟನೆ ಅಸಾಧ್ಯವಾಗಿದೆ, ಇದು ಸರಕಾರಿ ವ್ಯವಸ್ಥೆಯ ಗಮನದಲ್ಲಿಟ್ಟುಕೊಳ್ಳಬೇಕು !