ಕಾಶ್ಮೀರದಲ್ಲಿ ಕಾಶ್ಮೀರಿ ಹಿಂದೂಗಳ ಮೇಲೆ ದಾಳಿ : ಒಬ್ಬ ಸಾವು ಇನ್ನೊಬ್ಬನಿಗೆ ಗಾಯ

ಶೋಪಿಯಾ (ಜಮ್ಮು-ಕಾಶ್ಮೀರ) – ಜಿಹಾದಿ ಭಯೋತ್ಪಾದಕರು ಹಿಂದೂಗಳನ್ನು ಗುರಿಯಾಗಿಸುವ ಪ್ರಯತ್ನ ಮಾಡುತ್ತಲೇ ಇದ್ದಾರೆ. ಆಗಸ್ಟ್ ೧೬ ರಂದು ಇಲ್ಲಿಯ ಚೋಟೆಪೊರಾ ಪ್ರದೇಶದ ಸೇಬಿನ ತೋಟದಲ್ಲಿ ಕೆಲಸ ಮಾಡುವ ಇಬ್ಬರ ಕಾಶ್ಮೀರಿ ಹಿಂದೂಗಳ ಮೇಲೆ ಭಯೋತ್ಪಾದಕರು ಗುಂಡಿನ ದಾಳಿ ಮಾಡಿದ್ದಾರೆ. ಅದರಲ್ಲಿ ಒಬ್ಬನು ಸಾವನ್ನಪ್ಪಿದರೇ ಮತ್ತೊಬ್ಬ ಗಾಯಗೊಂಡಿದ್ದಾನೆ. ಇವರಿಬ್ಬರೂ ಸೋದರರಾಗಿದ್ದರು. ಮೃತ ಹಿಂದೂವಿನ ಹೆಸರು ಸುನಿಲ ಕುಮಾರ ಎಂದು ಇದೆ. ಈ ದಾಳಿಯ ನಂತರ ಭದ್ರತಾ ಪಡೆಯವರು ಈ ಪ್ರದೇಶದಲ್ಲಿ ಹುಡುಕಾಟ ನಡೆಸಿದ್ದಾರೆ. ಕಾಶ್ಮೀರದಲ್ಲಿ ಕಲಂ ೩೭೦ ತೆರೆವು ಗೊಳಸಿದನಂತರ ಹಿಂದೂಗಳನ್ನು ಹಾಗೂ ರಾಜ್ಯದ ಹೊರಗಿನ ನಾಗರೀಕರನ್ನು ಗುರಿಯಾಗಿಸಿ ದಾಳಿ ಮಾಡುವ ಘಟನೆ ಹೆಚ್ಚಿದೆ. ಈ ವರ್ಷ ಇಂತಹ ಒಟ್ಟು ೧೬ ಘಟನೆಗಳು ಘಟಿಸಿದೆ. ಈ ಮೂಲಕ ಅವರು ಕಾಶ್ಮೀರಿ ಹಿಂದೂಗಳಿಗೆ ಕಾಶ್ಮೀರ ಕಣಿವೆಯಲ್ಲಿ ಪುನರ್ವಸತಿ ಮಾಡುವ ಪ್ರಯತ್ನಕ್ಕೆ ವಿರೋಧ ವ್ಯಕ್ತಪಡಿಸುವ ಪ್ರಯತ್ನ ಮಾಡುತ್ತಿದ್ದಾರೆ.

ಸಂಪಾದಕೀಯ ನಿಲುವು

ಕಾಶ್ಮೀರದಲ್ಲಿ ಭದ್ರತಾ ಪಡೆಗಳಿಂದ ಪ್ರತಿದಿನ ಜಿಹಾದಿ ಭಯೋತ್ಪಾದಕರನ್ನು ಕೊಲ್ಲುತ್ತಿದ್ದರೂ ಅಲ್ಲಿಯ ಭಯೋತ್ಪಾದನೆ ಮುಗಿದಿಲ್ಲ ಮತ್ತು ಎಲ್ಲಿಯವರೆಗೆ ಅದರ ನಿರ್ಮಾಣ ಮಾಡುವ ಪಾಕಿಸ್ತಾನವನ್ನು ಮುಗಿಸುವುದಿಲ್ಲವೋ ಅಲ್ಲಿಯವರೆಗೆ ಜಿಹಾದಿ ಮಾನಸಿಕತೆ ನಾಶ ಮಾಡಲಾಗುವುದಿಲ್ಲ. ಅಲ್ಲಿಯವರೆಗೆ ಈ ಭಯೋತ್ಪಾದನೆ ನಾಶವಾಗುವುದಿಲ್ಲ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !