೧೮ ಆಗಸ್ಟ್ ೨೦೨೨ (ಶ್ರಾವಣ ಕೃಷ್ಣ ಸಪ್ತಮಿ) ಈ ದಿನದಂದು ಸಂತ ಜ್ಞಾನೇಶ್ವರ ಮಹಾರಾಜರ ಜಯಂತಿ ಇದೆ. ಈ ನಿಮಿತ್ತ….
‘ಸಂತ ಜ್ಞಾನೇಶ್ವರ ಮಹಾರಾಜರ ತಂದೆಯವರು ಓರ್ವ ಉತ್ತಮ ಸಾಧಕರಾಗಿದ್ದರು. ಅವರು ಗುರುಗಳ ಆಜ್ಞೆಯಿಂದ ಗೃಹಸ್ಥಾಶ್ರಮವನ್ನು ಸ್ವೀಕರಿಸಿದರು. ‘ಗೃಹಸ್ಥಾಶ್ರಮದಲ್ಲಿ ಇದ್ದಾಗಲೂ ಸಾಧನಾಮಾರ್ಗದಲ್ಲಿನ ಜೀವನದ ಧ್ಯೇಯವು ಯಾವಾಗಲೂ ಅವರೆದುರು ಇರಬೇಕು’, ಎಂಬುದಕ್ಕಾಗಿ ಅವರು ಅಂತಹ ಹೆಸರುಗಳನ್ನೇ ತಮ್ಮ ಮಕ್ಕಳಿಗೆ ಇಟ್ಟರು. ಅವರು ಇಟ್ಟ ಹೆಸರುಗಳಿಂದ ಮುಂದಿನ ಬೋಧವಾಗುತ್ತದೆ.
‘ನಿವೃತ್ತಿ’ನಾಥ : ಸಂಸಾರದಿಂದ ನಿವೃತ್ತರಾದರೆ, ಮಾಯೆಯ ಆಸಕ್ತಿಯನ್ನು ಕಡಿಮೆ ಮಾಡಿದರೆ ಅಥವಾ ತ್ಯಾಗ ಮಾಡಿದರೆ, ಸಾಧನೆಯಾಗತೊಡಗುತ್ತದೆ.
‘ಜ್ಞಾನ’ದೇವ : ನಿವೃತ್ತನಾದ ಸಾಧಕನಿಗೆ ನಿಜವಾದ ‘ಜ್ಞಾನ’ವಾಗ ತೊಡಗುತ್ತದೆ.
‘ಸೋಪಾನ’ದೇವ : ಜ್ಞಾನವಾದ ಸಾಧಕನು ಈಶ್ವರಪ್ರಾಪ್ತಿಯ ದಿಶೆಯತ್ತ ಮಾರ್ಗಕ್ರಮಣ ಮಾಡತೊಡಗುತ್ತಾನೆ.
‘ಮುಕ್ತಾ’ಬಾಯಿ : ಈ ರೀತಿ ಈಶ್ವರಪ್ರಾಪ್ತಿಯ ದಿಶೆಯತ್ತ ಮಾರ್ಗಕ್ರಮಣ ಮಾಡುವ ಸಾಧಕನು, ಅವನ ಸಾಧನೆಯು ಫಲಪ್ರದವಾದ ನಂತರ ಮುಕ್ತನಾಗುತ್ತಾನೆ.
‘ಹಿಂದಿನ ಕಾಲದಲ್ಲಿ ಜನರು ಪ್ರತಿಯೊಂದು ವಿಷಯದ ಬಗ್ಗೆ ಎಷ್ಟು ಸೂಕ್ಷ್ಮವಾಗಿ ವಿಚಾರ ಮಾಡುತ್ತಿದ್ದರು ?’, ಎಂಬುದು ಇದರಿಂದ ಗಮನಕ್ಕೆ ಬರುತ್ತದೆ.
– (ಸಚ್ಚಿದಾನಂದ ಪರಬ್ರಹ್ಮ) ಡಾ. ಆಠವಲೆ