ಜಿಹಾದಿ ಭಯೋತ್ಪಾದಕರ ನೆಲೆ ಪತ್ತೆ ಹಚ್ಚುವಾಗ ವೀರಮರಣ ಹೊಂದಿದ ಸೈನ್ಯದಳದ ಶ್ವಾನಕ್ಕೆ ಮರಣೋತ್ತರ ಪ್ರಶಸ್ತಿ !

ನವ ದೆಹಲಿ – ಭಾರತದಲ್ಲಿ ಶತ್ರುವಿನೊಂದಿಗೆ ಹೋರಾಡುವಾಗ ಶೌರ್ಯವನ್ನು ತೋರಿಸಿದಾಗ ಸೈನಿಕರಿಗೆ ವಿವಿಧ ಪ್ರಶಸ್ತಿಗಳನ್ನು ನೀಡಲಾಗುತ್ತದೆ; ಆದರೆ ಒಂದು ಶ್ವಾನವು ತೋರಿಸಿದ ಶೌರ್ಯಕ್ಕಾಗಿ ಮರಣೋತ್ತರ ಪ್ರಶಸ್ತಿಯನ್ನು ನೀಡಿರುವುದು ಬಹುತೇಕವಾಗಿ ಮೊದಲ ಘಟನೆ ಕಂಡು ಬಂದಿದೆ. ಭಾರತೀಯ ಸೈನ್ಯ ದಳದ ಶ್ವಾನ ‘ಎಕ್ಸೆಲ್’ ಇದಕ್ಕೆ ಮರಣೋತ್ತರ ‘ಮೆಂಶನ್-ಇನ್-ಡಿಸ್ಪ್ಯಾಚ್’ ಈ ಪ್ರಶಸ್ತಿಯನ್ನು ನೀಡಿ ಅದನ್ನು ಗೌರವಿಸಲಾಯಿತು. ಕಾಶ್ಮೀರದ ಬಾರಾಮುಲ್ಲಾದಲ್ಲಿ ಜುಲೈ ೩೦, ೨೦೨೨ ರಂದು ಜಿಹಾದಿ ಭಯೋತ್ಪಾದಕರು ಅದರ ಮೇಲೆ ರೈಫಲನಿಂದ ೧೦ ಗುಂಡುಗಳನ್ನು ಹಾರಿಸಿದರು. ಇದರಲ್ಲಿ ಅದು ವೀರಮರಣವನ್ನು ಹೊಂದಿತು. ಅದು ‘ಬೆಲ್ಜಿಯನ್ ಮೆಲಿನೊಯಿಸ್’ ಜಾತಿಯ ಶ್ವಾನವಾಗಿತ್ತು.

ಜಿಹಾದಿ ಭಯೋತ್ಪಾದಕರನ್ನು ಪತ್ತೆ ಹಚ್ಚುವಾಗ ‘ಎಕ್ಸೆಲ್’ ಅನ್ನು ಒಂದು ಮನೆಗೆ ಕಳುಹಿಸಲಾಗಿತ್ತು. ಅಲ್ಲಿಯ ಒಂದು ಕೋಣೆಯಲ್ಲಿ ಭಯೋತ್ಪಾದಕರು ಅಡಗಿ ಕುಳಿತಿದ್ದರು. ಅವರು ಶ್ವಾನದ ಮೇಲೆ ಗುಂಡುಹಾರಿಸಿದರು. ಅದರಲ್ಲಿ ಅದು ಮರಣ ಹೊಂದಿತು; ಆದರೆ ಆ ಮನೆಯಲ್ಲಿ ಭಯೋತ್ಪಾದಕರು ಅಡಗಿ ಕುಳಿತಿರುವುದು ಸೈನ್ಯಕ್ಕೆ ತಿಳಿಯಿತು ಮತ್ತು ಸೈನ್ಯವು ಮುಂದಿನ ಕಾರ್ಯಾಚರಣೆ ನಡೆಸಿ ಭಯೋತ್ಪಾದಕರನ್ನು ಹತ್ಯೆ ಮಾಡಿದರು. ಒಂದು ವೇಳೆ ಸೈನಿಕ ನೇರವಾಗಿ ಆ ಮನೆಯಲ್ಲಿ ನುಗ್ಗಿದ್ದರೆ, ಅವರ ಪ್ರಾಣ ಹೋಗುತ್ತಿತ್ತು.