ಪ್ರಧಾನಿ ನರೇಂದ್ರ ಮೋದಿ ಅವರ ಕೆಂಪುಕೋಟೆಯಿಂದ ಜನರಿಗೆ ೫ ಸಂಕಲ್ಪ ಪೂರೈಸುವಂತೆ ಕರೆ

ಭಾರತದ ೭೬ ನೇ ಸ್ವಾತಂತ್ರ್ಯ ದಿನ ಉತ್ಸಾಹದಲ್ಲಿ ಸಂಭ್ರಮಾಚರಣೆ

ನವ ದೆಹಲಿ – ನಾವು ನಮ್ಮ ಸಾಮರ್ಥ್ಯದ ಮೇಲೆ ಗಮನ ಕೇಂದ್ರೀಕರಿಸಬೇಕು. ದೇಶವು ಇನ್ನು ಮುಂದೆ ‘ಪಂಚಪ್ರಾಣ’ ಮತ್ತು ದೊಡ್ಡ ಸಂಕಲ್ಪ ತೆಗೆದುಕೊಂಡು ಮುಂದೆ ಹೋಗಲಿದೆ. ಭಾರತದ ‘ಅಭಿವೃದ್ಧಿ ರಾಷ್ಟ್ರ’ವೆಂದು ಗುರುತು ನಿರ್ಮಾಣ ಮಾಡುವುದಿದೆ. ಇದು ಮೊದಲನೆಯ ಪ್ರಾಣವಾಗಿದೆ. ಎರಡನೆಯ ಪ್ರಾಣ ಗುಲಾಮಗಿರಿಯ ಅಂಶದಿಂದ ಹೊರಗೆ ತೆಗೆಯುವುದು ಇದಾಗಿದೆ. ಗುಲಾಮಗಿರಿಯಿಂದ ಮುಕ್ತಿ ಪಡೆಯುವುದು. ಮೂರನೇ ಪ್ರಾಣ ಎಂದರೆ ನಮಗೆ ನಮ್ಮ ಪರಂಪರೆಯ ಬಗ್ಗೆ ಅಭಿಮಾನ ಇರಬೇಕು. ಭೂತಕಾಲದ ವಿಷಯಗಳನ್ನು ಬಿಟ್ಟು ಹೊಸ ವಿಷಯಗಳನ್ನು ಸ್ವೀಕರಿಸುವುದು ನಮ್ಮ ಪರಂಪರೆಯಾಗಿದೆ. ಈ ನಾಲ್ಕನೆಯ ಪ್ರಾಣ ಬಹಳ ಮಹತ್ವದ್ದಾಗಿದೆ. ಈ ಪ್ರಾಣ ಎಂದರೆ ಒಗ್ಗಟ್ಟು ಮತ್ತು ಹೊಂದಾಣಿಕೆಯಾಗಿದೆ. ೧೩೦ ಕೋಟಿ ಜನರಲ್ಲಿ ಒಗ್ಗಟ್ಟು ಇರಬೇಕು. ‘ಒಂದು ಭಾರತ ಶ್ರೇಷ್ಠ ಭಾರತ’ದ ಸ್ಥಾಪನೆಗಾಗಿ ಒಗ್ಗಟ್ಟಾಗುವುದು ಇದು ನಾಲ್ಕನೆಯ ಪ್ರಾಣವಾಗಿದೆ. ಐದನೆಯ ಪ್ರಾಣವೆಂದರೆ ನಾಗರೀಕರ ಕರ್ತವ್ಯವಾಗಿದೆ. ಇದರಲ್ಲಿ ಪ್ರಧಾನಿ, ಮುಖ್ಯಮಂತ್ರಿ ಇವರು ಕೂಡ ಸಮಾವೇಶಗೊಂಡಿದ್ದಾರೆ. ಮುಂಬರುವ ೨೫ ವರ್ಷಗಳಲ್ಲಿ ಸಂಕಲ್ಪ ಪೂರ್ಣ ಮಾಡುವುದಕ್ಕಾಗಿ, ಇದು ಬಹಳ ಮಹತ್ವದ ‘ಪ್ರಾಣಶಕ್ತಿ’ಯಾಗಿದೆ, ಎಂದು ಪ್ರಧಾನಿ ನರೇಂದ್ರ ಮೋದಿಯವರು ಭಾರತದ ೭೬ ನೇ ಸ್ವಾತಂತ್ರ್ಯ ದಿನದ ಪ್ರಯುಕ್ತ ಕೆಂಪುಕೋಟೆಯಿಂದ ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಿದರು. ಈ ಭಾಷಣದಲ್ಲಿ ‘ಪಿಎಂ ಸಮಗ್ರ ಸ್ವಾಸ್ಥ್ಯ ಮಿಷನ್’ ಈ ಹೊಸ ಹೆಸರಿನ ‘ರಾಷ್ಟ್ರೀಯ ಆರೋಗ್ಯ ಅಭಿಯಾನ’ದ ವಿಸ್ತಾರದ ಉಲ್ಲೇಖ ಅವರು ಮಾಡಿದರು ಹಾಗೂ ಮ. ಗಾಂಧಿ, ನೆಹರು, ಸಾವರಕರ ಇವರನ್ನೂ ಕೂಡ ಸ್ಮರಿಸಿದರು. ಈ ಮೊದಲು ಅವರು ಕೆಂಪು ಕೋಟೆಯ ಮೇಲೆ ರಾಷ್ಟ್ರಧ್ವಜ ಹಾರಿಸಿದರು. ಆ ಸಮಯದಲ್ಲಿ ೨೧ ತೋಪಿನಿಂದ ಸಲಾಮಿ ನೀಡಿಲಾಯಿತು.

ಪ್ರಧಾನಿ ಮೋದಿಯವರು ತಮ್ಮ ಭಾಷಣದಲ್ಲಿ ಮಂಡಿಸಿರುವ ಕೆಲವು ಮಹತ್ವದ ಅಂಶಗಳು

ಭ್ರಷ್ಟಾಚಾರದ ವಿರುದ್ಧ ಹೋರಾಡುವುದಕ್ಕಾಗಿ ಜನರು ಸಹಕಾರ ನೀಡಬೇಕು !

ಭ್ರಷ್ಟಾಚಾರದ ಬಗ್ಗೆ ಎಲ್ಲಿಯವರೆಗೆ ಆಕ್ರೋಶ ನಿರ್ಮಾಣ ಆಗುವುದಿವೊ, ಅಲ್ಲಿಯವರೆಗೆ ದೇಶದಲ್ಲಿನ ಭ್ರಷ್ಟಾಚಾರ ಮುಗಿಯುವುದಿಲ್ಲ. ಭ್ರಷ್ಟಾಚಾರದ ವಿರುದ್ಧ ಹೋರಾಡುವುದಕ್ಕೆ ಜನರು ಸಹಕಾರ ನೀಡಬೇಕು ಹಾಗೂ ರಾಜಕೀಯ ಮತ್ತು ಬೇರೆ ಬೇರೆ ಸಂಸ್ಥೆಯಲ್ಲಿನ ಮನೆತನದ ರಾಜಕಾರಣ ಮುಗಿಸಲೇಬೇಕು. ಭಾರತದಲ್ಲಿ ಎಷ್ಟೋ ಜನರು ಬಡತನದ ಜೊತೆಗೆ ಹೋರಾಡುತ್ತಿದ್ದಾರೆ. ಕೆಲವು ಜನರ ಹತ್ತಿರ ವಾಸಿಸಲು ಮನೆ ಇಲ್ಲದಿದ್ದರೇ ಕೆಲವು ಜನರು ಕಳ್ಳತನದ ಸಂಪತ್ತನ್ನು ಮುಚ್ಚಿಡಲು ಸ್ಥಳವಿಲ್ಲ. ಇದು ಅಯೋಗ್ಯವಾಗಿದೆ. ಇದೇ ಕಾರಣದಿಂದ ನಮಗೆ ಭ್ರಷ್ಟಾಚಾರದ ವಿರುದ್ಧ ಹೋರಾಡುವುದಿದೆ. ಆಧಾರ್ ಕಾರ್ಡ್, ಸಂಚಾರ ವಾಣಿ ಈ ಆಧುನಿಕ ಸಲಕರಣೆಗಳನ್ನು ಉಪಯೋಗಿಸಿ ನಮಗೆ ಅಯೋಗ್ಯ ವ್ಯಕ್ತಿಗಳ ಕೈಗೆ ಹೋಗುವ ೨ ಲಕ್ಷ ಕೋಟಿ ರೂಪಾಯಿ ಉಳಿಸುವುದರಲ್ಲಿ ಯಶಸ್ಸು ಸಿಕ್ಕಿದೆ. ಕಳೆದ ಸರಕಾರದ ಕಾರ್ಯಕಾಲದಲ್ಲಿ ಯಾವ ಜನರು ಬ್ಯಾಂಕುಗಳನ್ನು ಲೂಟಿಗೈದು ಓಡಿ ಹೋಗಿದ್ದಾರೆ, ಅವರ ಆಸ್ತಿಯನ್ನು ವಶಪಡಿಸಿಕೊಂಡು ಅವರನ್ನು ಕರೆತರಲು ಪ್ರಯತ್ನ ಮಾಡಲಾಗುತ್ತಿದೆ. ಕೆಲವು ಜನರನ್ನು ಕಾರಾಗೃಹಕ್ಕೆ ಅಟ್ಟಲಾಗಿದೆ. ಯಾವ ಜನರು ದೇಶವನ್ನು ಲೂಟಿ ಮಾಡಿದ್ದಾರೆ ಅವರು ಆ ಲೂಟಿಯನ್ನು ಹಿಂತಿರುಗಿಸಬೇಕು, ಅಂತಹ ಪರಿಸ್ಥಿತಿ ನಾವು ನಿರ್ಮಾಣ ಮಾಡುತ್ತಿದ್ದೇವೆ.

ಮಹಿಳೆಯರನ್ನು ಅವಮಾನಿಸುವ ಅಂಶದಿಂದ ಮುಕ್ತರಾಗೋಣ !

ಗಂಡು ಮತ್ತು ಹೆಣ್ಣು ಸಮಾನರಾಗಿದ್ದರೇ ಮಾತ್ರ ಮನೆಯಲ್ಲಿ ಒಗ್ಗಟ್ಟಿನ ಅಡಿಪಾಯ ನಿರ್ಮಿಸಲು ಸಾಧ್ಯವಾಗುವುದು. ಸ್ತ್ರೀ-ಪುರುಷ ಸಮಾನತೆ ಈ ಏಕತೆಯ ಮೊದಲನೆಯ ಶರತ್ತಾಗಿದೆ. ಭಾರತ ಇದು ಏಕತೆಯ ಮಂತ್ರವಾಗಿದೆ. ಅದಾಗಿ ಒಂದಲ್ಲ ಒಂದು ಕಾರಣದಿಂದ ನಮ್ಮಲ್ಲಿ ವಿಕೃತಿ ನಿರ್ಮಾಣವಾಗಿದೆ. ನಾವು ಮಹಿಳೆಯರನ್ನು ಅವಮಾನಿಸುತ್ತೇವೆ. ದಿನನಿತ್ಯದ ಜೀವನದಲ್ಲಿ ಸ್ತ್ರೀಯರನ್ನು ಅವಮಾನಿಸುವ ಪ್ರತಿಯೊಂದು ವಿಷಯದಿಂದ ಪ್ರಕೃತಿಯ ಸಂಸ್ಕಾರದಿಂದ ಮುಕ್ತರಾಗಲು ಇಂದು ನಾವು ಸಂಕಲ್ಪ ಮಾಡಬಹುದು.

ಸ್ವಾತಂತ್ರ್ಯ ಪ್ರೇಮಿಗಳ ಎಲ್ಲಾ ಕನಸುಗಳನ್ನು ಪೂರ್ಣಗೊಳಿಸುವ ಜವಾಬ್ದಾರಿ ತೆಗೆದುಕೊಳ್ಳಿ !

ಮುಂಬರುವ ೨೫ ವರ್ಷಕ್ಕಾಗಿ ನಾವು ನಮ್ಮ ಸಂಕಲ್ಪದ ಮೇಲೆ ಗಮನ ಕೇಂದ್ರೀಕರಿಸಬೇಕು. ೨೦೪೭ ರಲ್ಲಿ ಸ್ವಾತಂತ್ರ್ಯಕ್ಕೆ ೧೦೦ ವರ್ಷ ಪೂರ್ಣವಾಗುವುದು, ಆಗ ಸ್ವಾತಂತ್ರ್ಯ ಪ್ರೇಮಿಗಳ ಎಲ್ಲಾ ಕನಸುಗಳು ಪೂರ್ಣಗೊಳಿಸುವ ಜವಾಬ್ದಾರಿಯನ್ನು ನಾವು ತೆಗೆದುಕೊಳ್ಳಬೇಕೆಂದು ನನಗೆ ಅನಿಸುತ್ತದೆ.

..ಆದರೂ ಭಾರತ ಮುಂದೆ ಹೋಗುತ್ತಿದೆ !
‘ಆಗಸ್ಟ್ ೧೪ ರಂದು ಭಾರತ ಹೃದಯದಲ್ಲಿ ನೋವನ್ನು ಗಮನದಲ್ಲಿಟ್ಟುಕೊಂಡು ‘ವಿಭಜನೆಯ ಸ್ಮೃತಿ ದಿನ’ ಆಚರಿಸಿತು. ಭಾರತದ ಮೇಲೆ ಇರುವ ಭಾರತೀಯರ ಪ್ರೇಮದಿಂದ ಪ್ರತಿಯೊಬ್ಬರು ಸುಖ ದುಃಖ ಸಹಿಸಿದ್ದಾರೆ. ನಮ್ಮ ೭೫ ವರುಷದ ಪ್ರವಾಸ ಏರುಳಿತದಿಂದ ತುಂಬಿದೆ. ಸುಖ ದುಃಖದ ನೆರಳು ಆವರಿಸಿದೆ. ಇಂತಹ ಪರಿಸ್ಥಿತಿಯಲ್ಲೂ ಕೂಡ ನಮ್ಮ ಭಾರತೀಯರು ಪ್ರಯತ್ನ ಮಾಡಿದ್ದಾರೆ ಮತ್ತು ಸಾಧಿಸಿದ್ದಾರೆ. ನೂರಾರು ವರ್ಷಗಳ ಗುಲಾಮಿಯಿಂದ ಆಳವಾದ ಗಾಯಗಳು ಆಗಿವೆ. ಯಾವಾಗ ಸ್ವಾತಂತ್ರ್ಯ ನೀಡಲಾಗುತ್ತಿತ್ತೊ ಆಗ ಭಾರತೀಯರಿಗೆ ಹೆದರಿಸಲಾಗುತ್ತಿತ್ತು. ದೇಶ ವಿಭಜನೆಯ ಭಯ ತೋರಿಸಲಾಗುತ್ತಿತ್ತು; ಆದರೆ ಇದು ಹಿಂದುಸ್ಥಾನವಿದೆ. ನಾವು ಆಹಾರದ ಸಂಕಷ್ಟಗಳನ್ನು ಎದುರಿಸಿದ್ದೇವೆ, ಯುದ್ಧಕ್ಕೆ ಬಲಿಯಾಗಿದ್ದೇವೆ, ಭಯೋತ್ಪಾದಕರ ದಾಳಿ, ನೈಸರ್ಗಿಕ ಆಪತ್ತು ಎದುರಿಸಿದ್ದೇವೆ, ಆದರೂ ಕೂಡ ಭಾರತ ಪ್ರಗತಿ ಸಾಧಿಸುತ್ತಿದೆ ಎಂದು ಹೇಳಿದರು.