ಸಿಯಾಚೀನನಲ್ಲಿ ಹಿಮಪಾತದಲ್ಲಿ ಕಾಣೆಯಾದ ಸೈನಿಕರ ಮೃತದೇಹವು ೩೮ ವರ್ಷಗಳ ನಂತರ ದೊರೆತಿದೆ !

ನವದೆಹಲಿ – ಕಾಶ್ಮೀರದ ಸಿಯಾಚೀನನಲ್ಲಿ ಮೇ ೨೦, ೧೯೮೪ರಂದು ಪಾಕಿಸ್ತಾನದೊಂದಿಗೆ ನಡೆದ ಯುದ್ಧದ ಸಮಯದಲ್ಲಿ ಹಿಮಪಾತದಲ್ಲಿ ಕಾಣೆಯಾಗಿದ್ದ ಲಾನ್ಸನಾಯಕ ಚಂದ್ರಶೇಖರ ಹರಬೋಲಾ ರವರ ಮೃತದೇಹವು ಈಗ ೩೮ ವರ್ಷಗಳ ನಂತರ ದೊರೆತಿದೆ. ಅವರು ೧೯ ಕುಮಾಊಂ ರೆಜಿಮೆಂಟ್‌ನ ಸೈನಿಕರಾಗಿದ್ದರು. ಅವರ ಮೃತದೇಹವನ್ನು ಉತ್ತರಾಖಂಡದಲ್ಲಿನ ಹಲದಾನಿಯ ಬಳಿ ಇರುವ ಅವರ ಮನೆಗೆ ಒಯ್ಯಲಾಗುವುದು. ಅನಂತರ ಸೈನ್ಯಗೌರವದೊಂದಿಗೆ ಅವರ ಅಂತ್ಯಸಂಸ್ಕಾರವನ್ನು ಮಾಡಲಾಗುವುದು.

ಈ ಹಿಮಪಾತದಲ್ಲಿ ಒಟ್ಟೂ ೧೯ ಸೈನಿಕರು ಕಾಣೆಯಾಗಿದ್ದಾರೆ, ಅವರಲ್ಲಿ ೧೪ ಜನರ ಮೃತದೇಹವು ನಂತರ ದೊರೆತಿತ್ತು, ಆದರೆ ಉಳಿದ ೬ ಜನರು ಕಾಣೆಯಾಗಿದ್ದರು. ಅವರಲ್ಲಿ ಹರಬೋಲಾರವರ ಮೃತದೇಹವು ಈಗ ದೊರೆತಿದೆ. ಇನ್ನೂ ೫ ಜನರ ಮೃತದೇಹವು ಇನ್ನೂ ದೊರೆತಿಲ್ಲ. ಹಿಮದಲ್ಲಿ ಹುದುಗಿದ್ದ ಬಂಕರಗಳಲ್ಲಿ ಹರಬೋಲಾರವರ ಮೃತದೇಹದ ಬಳಿ ಅವರಿಗೆ ನೀಡಲಾದ ಸ್ಟೀಲ್‌ನ ಕ್ರಮಾಂಕದ ಪಟ್ಟಿಯು ಕಂಡುಬಂದ ನಂತರ ಅವರನ್ನು ಗುರುತಿಸಲಾಯಿತು. ಅವರಿಗೆ ಈ ಕ್ರಮಾಂಕವನ್ನು ಸೈನ್ಯವು ನೀಡಿತ್ತು.