ಸಲ್ಮಾನ ರಶ್ದಿಯವರು ‘ಸೆಟಾನಿಕ್ ವರ್ಸಸ್’ ಪುಸ್ತಕ ಬರೆದಿದ್ದರಿಂದಲೇ ಅವರ ಮೇಲೆ ಹಲ್ಲೆ!- ಲೇಖಕಿ ತಸ್ಲೀಮಾ ನಸರೀನ

ಎಡದಿಂದ ಲೇಖಕಿ ತಸ್ಲೀಮಾ ನಸರೀನ ಮತ್ತು ಸಲ್ಮಾನ ರಶ್ದಿಯ

ನವದೆಹಲಿ– ಪ್ರಸಿದ್ಧ ಲೇಖಕ ಸಲ್ಮಾನ ರಶ್ದಿಯವರ ಮೇಲೆ ಅಮೇರಿಕೆಯ ೨೪ ವರ್ಷದ ಇರಾನಿ-ಅಮೇರಿಕನ್ ಹಾದಿ ಮಾತರ ಹಲ್ಲೆ ಮಾಡಿದನು. ೧೯೮೯ರಲ್ಲಿ ರಶ್ದಿಯವರ ವಿರುದ್ಧ ಫತ್ವಾ ಹೊರಡಿಸಿದ್ದ ಅಯತುಲ್ಲಾ ಖೊಮೆನಿ ಮತ್ತು ಅವರ ಉತ್ತರಾಧಿಕಾರಿ ಅಯಾತುಲ್ಲಾ ಖಾಮೆನಿಯವರ ಛಾಯಾಚಿತ್ರಗಳು ಹಾದಿ ಮಾತರನ ಫೇಸಬುಕ್ ಖಾತೆಯಲ್ಲಿದೆ. ಇದರಿಂದ ಈ ಆಕ್ರಮಣದ ಹಿಂದಿನ ಉದ್ದೇಶವನ್ನು ಈಗ ನೀವೇ ಅಂದಾಜು ಮಾಡಬಹುದು ಎಂದು ಟ್ವೀಟ್ ಮೂಲಕ ಮೂಲ ಬಾಂಗ್ಲಾದೇಶಿ ಮತ್ತು ಈಗ ಭಾರತದಲ್ಲಿ ವಾಸಿಸುತ್ತಿರುವ ಲೇಖಕಿ ತಸ್ಲೀಮಾ ನಸರೀನ ಇವರು ಹೇಳಿದ್ದಾರೆ.

ಮತ್ತೊಂದು ಟ್ವೀಟ್ ನಲ್ಲಿ ನಸರೀನ ಇವರು “ನನಗೆ ಅನ್ನಿಸುವುದೇನೆಂದರೆ, ರಶ್ದಿಯವರು ‘ಸೆಟಾನಿಕ್ ವರ್ಸಸ್’ ಪುಸ್ತಕ ಬರೆದರೆಂದು ಯಾವ ಮನುಷ್ಯನಿಗೆ ರಶ್ದಿಯವರನ್ನು ಹತ್ಯೆ ಮಾಡಲಿಕ್ಕಿತ್ತೋ, ಅವನು ಆ ಪುಸ್ತಕವನ್ನು ಓದಿಲ್ಲ. ನನಗೆ ಅನ್ನಿಸುವುದೇನೆಂದರೆ, ಪುಸ್ತಕಗಳನ್ನು ಬರೆದಿದ್ದಕ್ಕಾಗಿ ನನ್ನನ್ನು ಹತ್ಯೆ ಮಾಡುವುದಾಗಿ ಬೆದರಿಕೆ ಹಾಕುವ ಇಸ್ಲಾಂವಾದಿಗಳು ಕೂಡ ನನ್ನ ಒಂದೇ ಒಂದು ಪುಸ್ತಕವನ್ನೂ ಓದಿಲ್ಲ.” ಎಂದು ಹೇಳಿದ್ದಾರೆ.

ಧರ್ಮಚಿಕಿತ್ಸೆಯಿಂದ ಇಸ್ಲಾಮ್ ಧರ್ಮಕ್ಕೆ ರಿಯಾಯತಿ ಕೊಡಬಾರದು!- ನಸರೀನ

ತಸ್ಲೀಮಾ ನಸರೀನ ಇವರು ಮುಂದುವರಿಯುತ್ತಾ, ಇತರ ಎಲ್ಲ ಧರ್ಮಗಳಿಗೆ ಅನ್ವಯಿಸುವ ಧರ್ಮಚಿಕಿತ್ಸೆಯಿಂದ ಇಸ್ಲಾಂ ಧರ್ಮಕ್ಕೆ ರಿಯಾಯತಿ ಕೊಡಬಾರದು. ಇಸ್ಲಾಂ ಧರ್ಮದ ಅಮಾನವೀಯ ಭೇದಭಾವ ಮಾಡುವ, ಹಾಗೆಯೇ ಅವೈಜ್ಞಾನಿಕ ಮತ್ತು ತರ್ಕಹೀನ ಮಗ್ಗಲುಗಳ ಮೇಲೆ ಪ್ರಶ್ನೆಚಿಹ್ನೆಯನ್ನು ಎತ್ತಿ ಇಸ್ಲಾಂಅನ್ನು ಪ್ರಬೋಧನಾ ಪ್ರಕ್ರಿಯೆಯ ಮೂಲಕ ಮುಂದಕ್ಕೆ ಕೊಂಡೊಯ್ಯಬೇಕು ಎಂದು ಹೇಳಿದ್ದಾರೆ.