ಚಾಮರಾಜ ಪೇಟೆ ಮೈದಾನ ಕಾಂಗ್ರೆಸ್ಸಿನ ಶಾಸಕ ಜಮೀರ ಅಹಮ್ಮದ ಖಾನ ಇವರ ಪಿತ್ರಾರ್ಜಿತ ಸಂಪತ್ತಾಗಿದೆಯೇ ? – ಭಾಜಪ ಶಾಸಕ ಸಿ.ಟಿ.ರವಿಯವರ ಆಕ್ರೋಷ

ಬೆಂಗಳೂರಿನ ಚಾಮರಾಜ ಪೇಟೆ ಮೈದಾನದಲ್ಲಿ ಗಣೇಶೋತ್ಸವವನ್ನು ಆಚರಿಸಲು ಕಾಂಗ್ರೆಸ್ಸಿನ ಶಾಸಕರ ಜಮೀರ ಅಹಮ್ಮದ ಖಾನ ವಿರೋಧಿಸಿದ ಪ್ರಕರಣ

ಬೆಂಗಳೂರಿನ ಚಾಮರಾಜ ಪೇಟೆ ಮೈದಾನ

ಬೆಂಗಳೂರು : ಇಲ್ಲಿಯ ಚಾಮರಾಜ ಪೇಟೆ ಮೈದಾನ ಕಾಂಗ್ರೆಸ್ಸಿನ ಶಾಸಕ ಜಮೀರ ಅಹಮ್ಮದ ಖಾನ ಇವರ ಪಿತ್ರಾರ್ಜಿತ ಆಸ್ತಿಯೇ ? ‘ಗಣೇಶೋತ್ಸವಕ್ಕೆ ಅನುಮತಿ ನೀಡುವುದಿಲ್ಲ’ ಎಂದು ಹೇಳುವ ಜಮೀರರಿಗೆ ಯಾರು ಅಧಿಕಾರ ನೀಡಿದರು ?, ಎಂದು ಭಾಜಪ ರಾಷ್ಟ್ರೀಯ ಕಾರ್ಯದರ್ಶಿ ಮತ್ತು ಶಾಸಕ ಸಿ.ಟಿ.ರವಿಯವರು ಪ್ರಶ್ನಿಸಿದ್ದಾರೆ. ಈ ಮೈದಾನ ಅನೇಕ ವರ್ಷಗಳಿಂದ ‘ಈದ್ಗಾ ಮೈದಾನ’ ಎಂದು ಮುಸಲ್ಮಾನರು ಉಪಯೋಗಿಸುತ್ತಿದ್ದರು. ಇಲ್ಲಿ ಹಿಂದೂಗಳಿಗೆ ಯಾವುದೇ ಹಬ್ಬ ಹರಿದಿನಗಳನ್ನು ಆಚರಿಸಲು ಅನುಮತಿ ಇರಲಿಲ್ಲ; ಆದರೆ ರಾಜ್ಯದ ಕಂದಾಯ ಇಲಾಖೆಯು ಕೆಲವು ತಿಂಗಳುಗಳ ಹಿಂದೆ ಈ ಮೈದಾನ ಸರಕಾರಕ್ಕೆ ಸೇರಿದೆಯೆಂದು ಘೋಷಿಸಿದ ಬಳಿಕ ಹಿಂದೂಗಳು ಅಲ್ಲಿ ಗಣೇಶೋತ್ಸವ ಆಚರಿಸಲು ಅನುಮತಿ ಕೋರಿದರು. ಅದಕ್ಕೆ ಕಾಂಗ್ರಸ್ಸಿನ ಸ್ಥಳೀಯ ಶಾಸಕ ಜಮೀರ ಅಹಮ್ಮದ ಖಾನ ಇವರು ವಿರೋಧಿಸಿದ್ದಾರೆ. ಇದಕ್ಕೆ ಶಾಸಕ ಸಿ.ಟಿ.ರವಿಯವರು ಮೇಲಿನ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದ್ದಾರೆ.

ಜಮೀರ ಅಹಮ್ಮದ ಖಾನ

೧. ಸ್ವಾತಂತ್ರ್ಯದ ಅಮೃತ ಮಹೋತ್ಸವದ ನಿಮಿತ್ತದಿಂದ ಕೇಂದ್ರ ಸರಕಾರದಿಂದ ‘ಹರ ಘರ ತಿರಂಗಾ’ ಅಭಿಯಾನ ನಡೆಸಲಾಗುತ್ತಿದೆ. ಹಿಂದೂ ಸಂಘಟನೆಗಳು ಈ ಮೈದಾನದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಲು ಅನುಮತಿ ಕೋರಿದ್ದರು. ಇದನ್ನು ನೋಡಿ ಮುಸಲ್ಮಾನರೂ ಕೂಡ ತ್ರವರ್ಣ ಧ್ವಜ ಹಾರಿಸಲು ಅನುಮತಿ ಕೇಳಿದ್ದರು. ಅದಕ್ಕೆ ಸರಕಾರವು ಇಬ್ಬರಿಗೂ ಅನುಮತಿಯನ್ನು ನಿರಾಕರಿಸಿ, ‘ಸರಕಾರಿ ಪ್ರತಿನಿಧಿಯಿಂದಲೇ ಇಲ್ಲಿ ತ್ರಿವರ್ಣ ಧ್ವಜ ಹಾರಿಸಲಾಗುವುದು’, ಎಂದು ಘೋಷಿಸಿದರು.

೨. ಹಿಂದೂಗಳ ಸಂಘಟನೆಯು, ಒಂದುವೇಳೆ ಈ ಮೈದಾನ ಈಗ ಸರಕಾರಿ ಆಸ್ತಿಯಾಗಿದ್ದರೆ, ಅದರ ಉಪಯೋಗವನ್ನು ಎಲ್ಲ ಧರ್ಮದವರು ಮಾಡಬಹುದಾಗಿದೆ. ಆದ್ದರಿಂದ ಹಿಂದೂಗಳಿಗೆ ಇಲ್ಲಿ ಗಣೇಶೋತ್ಸವ ಆಚರಿಸಲು ಅನುಮತಿ ಸಿಗಬೇಕು. ಇದಕ್ಕೆ ಆಡಳಿತವು ‘ವಿಚಾರ ಮಾಡಿ ನಿರ್ಣಯವನ್ನು ನೀಡುತ್ತೇವೆ’, ಎಂದು ಹೇಳಿದೆ.