|
ಶ್ರೀನಗರ – ಜಿಹಾದಿ ಭಯೋತ್ಪಾದಕರು ಜಮ್ಮೂ-ಕಾಶ್ಮೀರದಲ್ಲಿರುವ ಬಂದಿಪೋರಾದಲ್ಲಿ ಆಗಸ್ಟ ೧೨ ರಂದು ಬೆಳಿಗ್ಗೆ ಓರ್ವ ಬಿಹಾರಿ ಕಾರ್ಮಿಕನ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದರು. ಮಹಮ್ಮದ ಅಮರೇಜ ಹೆಸರಾಗಿದ್ದು, ಅವನು ಬಿಹಾರಿನ ಮಾಧೆಪುರಾ ಜಿಲ್ಲೆಯ ನಿವಾಸಿಯಾಗಿದ್ದಾರೆ. ಈ ಘಟನೆಯ ಬಳಿಕ ತನಿಖೆ ಪ್ರಾರಂಭವಾಗಿದೆ. ಭಯೋತ್ಪಾದಕರು ಅಮರೇಜ ನಿದ್ದೆಯಲ್ಲಿರುವಾಗ ಅವನ ಮೇಲೆ ಗುಂಡು ಹಾರಿಸಿದರು, ಎಂದು ಅವನ ಸಹೋದರ ಹೇಳಿದರು. ಕೇಂದ್ರ ಸರಕಾರವು ಕೆಲವು ದಿನಗಳ ಹಿಂದೆ ಸಂಸತ್ತಿನಲ್ಲಿ, ‘ಜಮ್ಮೂ ಕಾಶ್ಮೀರದಲ್ಲಿ ೨೦೧೭ ರಿಂದ ೫ ಜುಲೈ ೨೦೨೨ ವರೆಗೆ ಜಮ್ಮೂ-ಕಾಶ್ಮೀರ ರಾಜ್ಯದ ಹೊರಗಿನ ೨೮ ಕಾರ್ಮಿಕರ ಹತ್ಯೆ ಮಾಡಲಾಯಿತು’, ಎಂದು ಮಾಹಿತಿ ನೀಡಿದ್ದರು.
Jammu and Kashmir: Bihari migrant worker shot dead by terrorists in Bandiporahttps://t.co/6HZ9iu3sG7
— OpIndia.com (@OpIndia_com) August 12, 2022
೧. ಗೂಢಚಾರ ಇಲಾಖೆಯು ನೀಡಿರುವ ಮಾಹಿತಿಯನುಸಾರ ಪಾಕಿಸ್ತಾನವು ಕಾಶ್ಮೀರ ಕಣಿವೆಯಲ್ಲಿ ಅಶಾಂತತೆ ಹರಡಲು ‘ಟಾರ್ಗೆಟ್ ಕಿಲ್ಲಿಂಗ’ ಸಹಾಯ ಪಡೆಯುತ್ತಿದೆ. ಕಲಂ ೩೭೦ ರದ್ದುಗೊಳಿಸಿದ ಬಳಿಕ ಜಮ್ಮೂ ಕಾಶ್ಮೀರದ ಕಾಶ್ಮೀರಿ ಹಿಂದೂಗಳ ಪುನರ್ವಸತಿಗಾಗಿ ಜಾರಿಗೊಳಿಸಲಿರುವ ಭಾರತ ಸರಕಾರದ ವಿವಿಧ ಯೋಜನೆಗಳನ್ನು ವಿಫಲಗೊಳಿಸಲು ಈ ಹತ್ಯೆಗಳನ್ನು ಮಾಡಲಾಗುತ್ತಿದೆ.
೨. ‘ಟಾರ್ಗೆಟ್ ಕಿಲ್ಲಿಂಗ್’ ಮೂಲಕ ಭಯೋತ್ಪಾದಕರು ಕಾಶ್ಮೀರಿ ಹಿಂದೂ ಹಾಗೆಯೇ ಹೊರರಾಜ್ಯಗಳ ಕಾರ್ಮಿಕರಿಗೂ ಭಾರತದ ಬಗ್ಗೆ ಸಹಾನುಭೂತಿ ಧೋರಣೆ ಹೊಂದಿರುವ ಸ್ಥಳೀಯ ಮುಸಲ್ಮಾನ ಸರಕಾರಿ ಅಧಿಕಾರಿ ಮತ್ತು ಪೊಲೀಸ ಸಿಬ್ಬಂದಿಗಳನ್ನು ಗುರಿ ಮಾಡಲಾಗಿದೆ.
೩. ‘ಹೊರಗಿನಿಂದ ಬರುವ ವರ್ಗಾವಣೆಗೊಂಡಿರುವ ನೌಕರರು ಕಾಶ್ಮೀರಿ ಮುಸಲ್ಮಾನರ ನೌಕರಿ ಮತ್ತು ಭೂಮಿ ನುಂಗುವರು’, ಎಂದು ‘ಐ.ಎಸ್.ಐ.’ ಈ ಪಾಕಿಸ್ತಾನಿ ಗುಪ್ತಚರ ಸಂಘಟನೆಯಿಂದ ಅಪಪ್ರಚಾರವನ್ನು ಮಾಡಲಾಗುತ್ತಿದೆ. ಈ ಮೂಲಕ ಪಾಕಿಸ್ತಾನವು ಭಯೋತ್ಪಾದಕ ಸಂಘಟನೆಗಾಗಿ ಮತ್ತೊಮ್ಮೆ ಪೂರಕ ವಾತಾವರಣವನ್ನು ನಿರ್ಮಿಸಲು ಪ್ರಯತ್ನಿಸುತ್ತಿದೆ.
ಸಂಪಾದಕೀಯ ನಿಲುವುಕಲಂ ೩೭೦ ರದ್ದು ಪಡಿಸಿದಾಗಿನಿಂದ ಕೆರಳಿರುವ ಜಿಹಾದಿ ಭಯೋತ್ಪಾದಕರಿಗೆ ಪಾಠ ಕಲಿಸಲು ಅವರ ಬಾಲ ಮುದುಡಿಸುವುದರಜೊತೆಗೆ ಅವರ ನಿರ್ಮಿಸುವ ಪಾಕಿಸ್ತಾನವನ್ನು ನಷ್ಟಗೊಳಿಸಿರಿ, ಇಲ್ಲವಾದರೆ ಇಂತಹ ಘಟನೆಗಳನ್ನು ತಡೆಯುವುದು ಅಸಾಧ್ಯವೇ ಆಗಿದೆ ! |