ಶಿರಚ್ಛೇದಿಸುವ ಜಿಹಾದಿಗಳಿಂದ ತಮ್ಮನ್ನು ಮತ್ತು ಕುಟುಂಬವನ್ನು ರಕ್ಷಿಸಲಿಕ್ಕಿದ್ದರೆ, ಹಿಂದೂಗಳು ಆತ್ಮರಕ್ಷಣೆಗೆ ಸಿದ್ಧರಾಗಬೇಕು ! – ಟಿ. ರಾಜಾ ಸಿಂಗ್, ಶಾಸಕರು, ತೆಲಂಗಾಣ

‘ಹಿಂದೂಗಳು ತಮ್ಮದೇ ದೇಶದಲ್ಲಿ ಅಸುರಕ್ಷಿತರೇ ?’ ಈ ಕುರಿತು ಆನ್‌ಲೈನ್ ವಿಶೇಷ ಸಂವಾದದ ಆಯೋಜನೆ !

ಶ್ರೀ. ಟಿ. ರಾಜಾಸಿಂಗ್

ನೂಪುರ್ ಶರ್ಮಾ ಅವರನ್ನು ಬೆಂಬಲಿಸಿದ್ದಕ್ಕಾಗಿ ರಾಜಸ್ಥಾನ, ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯಗಳಲ್ಲಿ ಹಿಂದೂವಿರೋಧಿ ಶಕ್ತಿಗಳಿಂದ ಹಿಂದೂಗಳ ಶಿರಚ್ಛೇದ ಮಾಡಲಾಗುತ್ತಿದೆ. ಹಿಂದೂ ಮತ್ತು ದೇಶ ವಿರೋಧಿ ಜಿಹಾದಿ ಶಕ್ತಿಗಳ ನಡುವೆ ಯುದ್ಧ ಪ್ರಾರಂಭವಾಗಿದೆ. ಯುದ್ಧ ಸಾರಲಾಗಿದೆ. ಹಿಂದೂ ‘ಸೆಕ್ಯುಲರ್’ ಆಗಿ ಉಳಿದರೆ ಅವರು ಮತ್ತು ಅವರ ಕುಟುಂಬ ಉಳಿಯುವುದಿಲ್ಲ. ಸರಕಾರ ಮತ್ತು ಪೊಲೀಸರು ನಮ್ಮನ್ನು ಕಾಪಾಡುವರು ಎಂಬ ಭರವಸೆಯಲ್ಲಿ ಹಿಂದೂಗಳು ಇರಬಾರದು. ಹಿಂದೂಗಳು ಆತ್ಮರಕ್ಷಣೆಗಾಗಿ ತರಬೇತಿ ಪಡೆದರೆ ಮಾತ್ರ ಅವರು ಉಳಿಯುವರು. ಹಿಂದೂಗಳು ತಮ್ಮನ್ನು ಮತ್ತು ತಮ್ಮ ಕುಟುಂಬವನ್ನು ಉಳಿಸಲಿಕ್ಕಿದ್ದರೆ, ಪ್ರತಿಯೊಬ್ಬ ಹಿಂದೂವು ಆತ್ಮರಕ್ಷಣೆಗಾಗಿ ಸಿದ್ಧರಾಗಬೇಕು ಎಂದು ಪ್ರಖರ ಹಿಂದುತ್ವನಿಷ್ಠ ಮತ್ತು ತೆಲಂಗಾಣದ ಭಾಜಪ ಶಾಸಕ ಶ್ರೀ. ಟಿ. ರಾಜಾಸಿಂಗ್ ಇವರು ಕರೆ ನೀಡಿದ್ದಾರೆ. ಅವರು ಹಿಂದೂ ಜನಜಾಗೃತಿ ಸಮಿತಿ ಆಯೋಜಿಸಿದ್ದ ‘ಹಿಂದೂಗಳು ತಮ್ಮ ದೇಶದಲ್ಲೇ ಅಸುರಕ್ಷಿತ ?’ ಈ ಆನ್‌ಲೈನ್ ವಿಶೇಷ ಸಂವಾದದಲ್ಲಿ ಮಾತನಾಡುತ್ತಿದ್ದರು.

ಹಿಂದುತ್ವನಿಷ್ಠ ಸಂಘಟನೆಗಳು ಒಟ್ಟಾಗದಿದ್ದರೆ ಕರ್ನಾಟಕದಲ್ಲಿ ಹಿಂದೂಗಳು ಕಾಲಿಡಲೂ ಕಷ್ಟ – ಶ್ರೀ. ಗಂಗಾಧರ ಕುಲಕರ್ಣಿ, ಕಾರ್ಯಾಧ್ಯಕ್ಷರು, ‘ಶ್ರೀರಾಮ ಸೇನೆ’,

ಶ್ರೀ. ಗಂಗಾಧರ ಕುಲಕರ್ಣಿ

ಕರ್ನಾಟಕದಲ್ಲಿ ಪ್ರವೀಣ ನೆಟ್ಟಾರು ಇವರಿಗಿಂತ ಮೊದಲು ಫೆಬ್ರವರಿ ತಿಂಗಳಿನಲ್ಲಿ ಹರ್ಷನ ಹತ್ಯೆಯಾಗಿತ್ತು. ಇದು ಮೂಲತಃ ೧೯೯೩ ರಲ್ಲಿ ಭಟ್ಕಳದಿಂದ ಪ್ರಾರಂಭವಾಯಿತು. ಆಗ ಶಾಸಕ ಚಿತ್ತರಂಜನ ಇವರ ಹತ್ಯೆಯ ನಂತರ ನಡೆದ ಗಲಭೆಯಿಂದಾಗಿ ಒಂಬತ್ತು ತಿಂಗಳಕಾಲ ಸಂಚಾರ ನಿಷೇಧ ಇತ್ತು. ಅಂದಿನಿಂದ ಕರ್ನಾಟಕದಲ್ಲಿ ನಿರಂತರವಾಗಿ ಹಿಂದೂಗಳ ಹತ್ಯೆಗಳಾಗುತ್ತಿವೆ. ಕಳೆದ ಐದು ಆರು ವರ್ಷಗಳಲ್ಲಿ ಕರ್ನಾಟಕದಲ್ಲಿ ೩೬ಕ್ಕೂ ಹೆಚ್ಚು ಹಿಂದೂಗಳ ಹತ್ಯೆಯಾಗಿದೆ. ಇದರ ವಿರುದ್ಧ ಎಲ್ಲಾ ಹಿಂದುತ್ವನಿಷ್ಠ ಸಂಘಟನೆಗಳು ಒಟ್ಟಾಗದಿದ್ದರೆ ಕರ್ನಾಟಕದಲ್ಲಿ ಹಿಂದೂಗಳು ಕಾಲಿಡಲೂ ಕಷ್ಟವಾಗಬಹುದು.

ಪಿ.ಎಫ್.ಐ. ಇದು ಭಾರತದ ‘ಅಲ್ ಖೈದಾ’ವಾಗಿದೆ ! – ಶ್ರೀ. ಪ್ರಶಾಂತ ಸಂಬರಗಿ,  ಉದ್ಯಮಿಗಳು, ಬೆಂಗಳೂರು

ಶ್ರೀ. ಪ್ರಶಾಂತ ಸಂಬರಗಿ

೩ ತಿಂಗಳ ಹಿಂದೆ ಪ್ರವೀಣ ನೆಟ್ಟಾರು ತನ್ನ ಮಾಂಸದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಮುಸಲ್ಮಾನನನ್ನು ಕೆಲಸದಿಂದ ತೆಗೆದು ಹಾಕಿ ದ್ದರು. ‘ಹಲಾಲ್ ಮಾಂಸ’ವನ್ನು ನಿಲ್ಲಿಸಿ ಹಿಂದೂ ಪದ್ಧತಿಯ ‘ಜಟ್ಕಾ ಮಾಂಸ’ವನ್ನು ಮಾರತೊಡಗಿದರು. ಇದರಿಂದಾಗಿ ಆತನನ್ನು ಹತ್ಯೆ ಮಾಡಲಾಗಿದೆ. ‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ (ಪಿ.ಎಫ್.ಐ.) ಹಿಂದೂಗಳನ್ನು ಕೊಲ್ಲುವ ಮೂಲಕ ನಾವು ಎಷ್ಟು ಶಕ್ತಿಶಾಲಿ ಎಂದು ತೋರಿಸಲು ಪ್ರಯತ್ನಿಸುತ್ತಿದೆ. ಪಿ.ಎಫ್.ಐ. ಇದು ಭಾರತದ ‘ಅಲ್ ಖೈದಾ’ವಾಗಿದೆ. ಇದರ ವಿರುದ್ಧ ತಕ್ಷಣವೇ ಕ್ರಮವನ್ನು ಕೈಗೊಳ್ಳದಿದ್ದರೆ, ಅದು ಇನ್ನೂ ದೊಡ್ಡ ಪೆಡಂಭೂತವಾಗಿ ಪರಿಣಮಿಸಬಹುದು.

ಸರಕಾರವು ಮತಾಂಧ ಸಂಘಟನೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ! – ಶ್ರೀ. ಮೋಹನ ಗೌಡ, ರಾಜ್ಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ, ಕರ್ನಾಟಕ

ಶ್ರೀ. ಮೋಹನ ಗೌಡ

ಕರ್ನಾಟಕದಲ್ಲಿ ಹಿಂದೆ ನಡೆದ ೨೩ ಹಿಂದೂಗಳ ಕೊಲೆಗಳ ಪೈಕಿ ೧೦ ಕೊಲೆಗಳಲ್ಲಿ ಪಿ.ಎಫ್.ಐ. ಮತ್ತು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್.ಡಿ. ಪಿ.ಐ.) ಭಾಗಿಯಾಗಿತ್ತು ಎಂದು ನ್ಯಾಯಾಲಯದಲ್ಲಿ ಆರೋಪಪಟ್ಟಿ ಸಲ್ಲಿಸಲಾಗಿತ್ತು. ಕಾಂಗ್ರೆಸ್ ನಾಯಕ ಸಿದ್ದರಾಮಯ್ಯನವರು ಕೂಡ ಈ ಸಂಘಟನೆಗಳನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿದ್ದರು. ೨೦೧೮ ರ ಭಾಜಪದ ಚುನಾವಣಾ ಪ್ರಣಾಳಿಕೆಯಲ್ಲಿಯೂ ಸರಕಾರ ಬಂದರೆ ಪಿ.ಎಫ್.ಐ. ಮತ್ತು ಕರ್ನಾಟಕ ಫೋರಂ ಫಾರ್ ಡಿಗ್ನಿಟಿ (ಕೆಎಫ್‌ಡಿ)ಯನ್ನು ನಿಷೇಧಿಸುವುದಾಗಿ ಆಶ್ವಾಸನೆ ನೀಡಲಾಗಿತ್ತು; ಅದರಂತೆ ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡುವ ಮೂಲಕ ಈ ಮತಾಂಧ ಸಂಘಟನೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು.