‘ವೈರಲ್ ಫೀವರ್’ (ವಿಷಾಣುಜನ್ಯ ಜ್ವರ) ಮತ್ತು ಪ್ರತಿಜೈವಿಕಗಳು !

೧. ‘ವೈರಲ್ ಜ್ವರ’ ಇದು ಗಂಭೀರವಾದರೂ ಚಿಂತಿಸುವ ಆವಶ್ಯಕತೆಯಿಲ್ಲದ ಕಾಯಿಲೆಯಾಗಿದೆ !

ಡಾ. ಶಿಲ್ಪಾ ಚಿಟ್ನೀಸ ಜೋಶಿ

ಸದ್ಯ ‘ವೈರಲ್ ಫೀವರ್’ ಈ ಕಾಯಿಲೆಯ ಹೆಸರು ನಮಗೆ ಆಗಾಗ ಮತ್ತು ದೊಡ್ಡ ಪ್ರಮಾಣದಲ್ಲಿ ಕೇಳಲು ಸಿಗುತ್ತದೆ ಮತ್ತು ಅದನ್ನು ಅತ್ಯಂತ ಗಾಂಭೀರ್ಯದಿಂದ ಪರಿಗಣಿಸಲಾಗುತ್ತದೆ. ಅದರ ಹಿಂದೆ ‘ನಮಗೆ ಏನೋ ಭಯಂಕರವಾದ ಕಾಯಿಲೆ ಬಂದಿದೆ’, ಎನ್ನುವ ಭಾವನೆ ಇರುತ್ತದೆ. (ವಾಸ್ತವದಲ್ಲಿ ಯಾವುದೇ ಕಾಯಿಲೆಯಾದರೂ ಗಾಂಭೀರ್ಯತೆ ಬೇಕು; ಆದರೆ ಭಯಪಡಬಾರದು. ಆದ್ದರಿಂದ ಅದರಿಂದ ಹೊರಬರಲು ಸುಲಭವಾಗುವುದು.) ರೋಗಿಗಳು ಈ ‘ವೈರಲ್’ಗೆ ಪ್ರತಿಜೈವಿಕ (ಎಂಟಿಬಯೋಟಿಕ್ಸ್) ತೆಗೆದುಕೊಳ್ಳುತ್ತಾರೆ. ಕೆಲವೊಮ್ಮೆ ಆಧುನಿಕ ವೈದ್ಯರು ಒಂದೇ ಕಾಯಿಲೆಗೆ ೨-೩ ಪ್ರತಿಜೈವಿಕಗಳನ್ನು ಬದಲಾಯಿಸಿ ಕೊಡುತ್ತಾ ಇರುತ್ತಾರೆ. (ಈ ಪ್ರತಿಜೈವಿಕಗಳ ಅವಿವೇಕಿ ಉಪಯೋಗದ ಬಗ್ಗೆ ಜಗತ್ತಿನಾದ್ಯಂತ ಭಾರತದ ಅಪಕೀರ್ತಿಯಾಗಿದೆ. ಅದಕ್ಕೆ ಆಧುನಿಕ ವೈದ್ಯರ ಅಜಾರೂಕತೆಯು ಎಷ್ಟು ಕಾರಣವಾಗಿದೆಯೊ, ಅದಕ್ಕಿಂತಲೂ ಹೆಚ್ಚು ರೋಗಿಗಳ ಭೀತಿಯೂ ಹೊಣೆಯಾಗಿದೆ.) ನಿಜವಾಗಿಯೂ ಈ ಕಾಯಿಲೆಯೆಂದರೇನು ? ಇದು ಗುಣವಾಗುತ್ತದೆಯೇ ? ಇದಕ್ಕೆ ಯೋಗ್ಯವಾದ ಉಪಚಾರವೇನು ? ಮುಖ್ಯವೆಂದರೆ ಆಯುರ್ವೇದದಲ್ಲಿ ಅದಕ್ಕೆ ಏನಾದರೂ ಔಷಧಿ ಇದೆಯೇ ? (ಆಂಗ್ಲ ಹೆಸರಿರುವ ಯಾವುದೇ ಕಾಯಿಲೆಗೆ ಆಯುರ್ವೇದದಲ್ಲಿ ಔಷಧಿ ಇರುವುದು ಕಷ್ಟವೆನಿಸುತ್ತದೆ. ಇತ್ತೀಚೆಗೆ ಕೆಲವು ಸಂಶೋಧನೆಯಾಗಿರಬಹುದು, ಕೇವಲ ಅದೇ ಔಷಧಗಳು ಉಪಯೋಗವಾಗಬಹುದು. ಇಲ್ಲದಿದ್ದರೆ ‘ಆಯುರ್ವೇದದ ಸಾಮಾನ್ಯ ವೈದ್ಯರು ಈ ಕಾಯಿಲೆಗೆ ಎಂತಹ ಉಪಚಾರ ಮಾಡಬಹುದು ?’ ಎನ್ನುವುದು ಜನರ ತಪ್ಪು ಅಭಿಪ್ರಾಯವಾಗಿದೆ. ದುರ್ಭಾಗ್ಯವೆಂದರೆ ಕೆಲವು ವೈದ್ಯರೂ ಈ ತಪ್ಪು ಅಭಿಪ್ರಾಯಕ್ಕೆ ಬಲಿಯಾಗಿದ್ದಾರೆ.) ಇದನ್ನು ತಿಳಿದುಕೊಳ್ಳಲು ನಾವು ‘ವೈರಲ್ ಫೀವರ್’ ಎಂದರೇನು ಎಂಬುದನ್ನು ತಿಳಿದುಕೊಳ್ಳೋಣ.

೨. ‘ವೈರಲ್ ಫೀವರ್’ನ ಸ್ವರೂಪ

೨ ಅ. ಶರೀರದಲ್ಲಿನ ಸೂಕ್ಷ್ಮ ವಿಷಾಣುಗಳು ಮತ್ತು ಅವುಗಳ ಕಾರ್ಯ : ವಿಷಾಣುಗಳು ಕಾಯಿಲೆಯನ್ನು ನಿರ್ಮಿಸುವ ಸೂಕ್ಷ್ಮ ಜೀವಗಳಾಗಿವೆ. ಈ ವಿಷಾಣುಗಳು ಅತ್ಯಂತ ಸೂಕ್ಷ್ಮವಾಗಿರುತ್ತವೆ. ಕೇವಲ ಆರ್.ಎನ್.ಎ. (ರೈಬೋನ್ಯೂಕ್ಲಿಯಿಕ್ ಆಸಿಡ್ – ಪ್ರತಿಯೊಂದು ಕೋಶದಲ್ಲಿ ದೊರೆಯುವ ಒಂದು ರೀತಿಯ ಆಮ್ಲ) ದಾರದಷ್ಟೇ ಅವುಗಳ ಶರೀರವಿರುತ್ತದೆ. ಅವುಗಳ ರಚನೆಯನ್ನು ಅವುಗಳು ಬೇಕಾದ ಹಾಗೆ ಬದಲಾಯಿಸಲು ಸಾಧ್ಯವಿದೆ. ಜೀವಂತ ಕೋಶಗಳಲ್ಲಿ ಮಾತ್ರ ಸಂಖ್ಯೆ ವೃದ್ಧಿ ಮಾಡಬಲ್ಲವು. ಅವುಗಳಿಗೆ ಎಲ್ಲ ಪ್ರಾಣಿ ಹಾಗೂ ವನಸ್ಪತಿ ಸೃಷ್ಟಿಯಲ್ಲಿ ರೋಗಗಳನ್ನು ನಿರ್ಮಿಸಲು ಸಾಧ್ಯವಿದೆ. ಅವುಗಳ ಸ್ವರೂಪ ಸತತವಾಗಿ ಬದಲಾಗುವುದರಿಂದ ಅವುಗಳ ಬಗ್ಗೆ ಪ್ರಯೋಗಶಾಲೆಯಲ್ಲಿ ಪರೀಕ್ಷಣೆ ಮಾಡುವುದು ಸ್ವಲ್ಪ ಕಠಿಣವಾಗುತ್ತದೆ. ಅವುಗಳು ಶರೀರದಲ್ಲಿ ಮಾಡುವ ಬದಲಾವಣೆಯಿಂದಾಗಿ ಅವುಗಳು ಶರೀರದಲ್ಲಿ ಇವೆಯೆ ಅಥವಾ ಇಲ್ಲವೆ ಎಂದು ಅನುಮಾನಪಡಬೇಕಾಗುತ್ತದೆ.

೨ ಆ. ಹರಡುವ ಮಾರ್ಗ : ಅವುಗಳು ಒಂದು ಪ್ರಾಣಿಯಿಂದ ಇನ್ನೊಂದು ಪ್ರಾಣಿಗೆ ಹರಡುವ ವೇಗ ತುಂಬಾ ಹೆಚ್ಚಾಗಿರುತ್ತದೆ. ಶ್ವಾಸ, ಸ್ಪರ್ಶ, ಬಟ್ಟೆ, ನೀರು, ಉಗುಳು, ಮಲ ಇತ್ಯಾದಿ ಯಾವುದೇ ಮಾರ್ಗ ಈ ಶತ್ರುವಿಗೆ ಅನುಕೂಲವಾಗುತ್ತದೆ.

೨ ಇ. ಡೆಂಗ್ಯೂ, ಚಿಕನ್‌ಗುನಿಯಾ, ಸ್ವೈನ್, ಫ್ಲೂ, ಏಡ್ಸ್, ಮಧುಮೇಹ ಇಷ್ಟು ಮಾತ್ರವಲ್ಲ, ಈಗ ಅರ್ಬುದರೋಗವೂ ವಿಷಾಣುಜನ್ಯ ಆಗಿದೆಯೆಂಬುದು ಪತ್ತೆಯಾಗುತ್ತಿದೆ. ವ್ಯತ್ಯಾಸವೆಂದರೆ, ಈ ಕಾಯಿಲೆಗಳ ವಿಷಾಣುಗಳು ವಿಶಿಷ್ಟವಾಗಿದ್ದು ಅವುಗಳ ವಿಷಯದಲ್ಲಿ ಸಂಶೋಧನೆಯಿಂದ ಕೆಲವು ಮಾಹಿತಿಗಳು ಬಂದಿವೆ. ಆದರೆ ಪದೇ ಪದೇ ಬರುವ ಈ ಜ್ವರದ್ದು ಹಾಗಿಲ್ಲ.

೩. ಜ್ವರದ ಲಕ್ಷಣಗಳು

ಒಂದು ಋತು ಮುಗಿದು ಇನ್ನೊಂದು ಋತು ಆರಂಭವಾಗುವ ಋತುಸಂಧಿಕಾಲದಲ್ಲಿ ಈ ವಿಷಾಣುಜನ್ಯ ಜ್ವರದ ಹಾವಳಿಯಾಗುತ್ತದೆ. (ಭಾರತದ ನಗರಗಳಲ್ಲಿ ಜನಸಂಖ್ಯೆಯ ಸಾಂದ್ರತೆ ಹೆಚ್ಚಿರುವುದರಿಂದ ಮತ್ತು ಸುಲಭ ಭಾಷೆಯಲ್ಲಿ ಹೇಳುವುದಾದರೆ ಪ್ರತಿವ್ಯಕ್ತಿಗೆ ಜಾಗ ಕಡಿಮೆ ಇರುವುದರಿಂದ ಅವುಗಳತುಂಬಾ ರಭಸದಿಂದ ಹರಡುತ್ತವೆ.) ಮೂಗು ಅಥವಾ ಗಂಟಲಿನಲ್ಲಿ ೧-೨ ದಿನಗಳ ಮೊದಲು ಲಕ್ಷಣಗಳು ಕಾಣಿಸುತ್ತವೆ. ಅನಂತರ ಜ್ವರ ಬರುತ್ತದೆ. ಸುಮಾರು ೧೦೧ ರಿಂದ ೧೦೪ ಎಫ್ (ಫ್ಯಾರನ್‌ಹೈಟ್) ಈ ಪ್ರಮಾಣದಲ್ಲಿ ಜ್ವರ ಇರುತ್ತದೆ. ಅದರ ಜೊತೆಗೆ ಮೈ ಕೈ ನೋವು, ಗಂಟಲು ನೋವು, ಗಂಟಲಿನಲ್ಲಿ ಕೆರೆತ, ತಲೆನೋವು, ಮೂಗಿನಿಂದ ನೀರಿಳಿಯುವುದು, ಮೂಗು ಕಟ್ಟುವುದು, ಕೆಮ್ಮು, ಹಸಿವು ಮಂದವಾಗುವುದು, ನಿತ್ರಾಣ, ಹೊಟ್ಟೆನೋವು, ಭೇದಿ, ವಾಕರಿಕೆ, ಕೆಲವೊಮ್ಮೆ ವಾಂತಿಯಾಗುವುದು ಇಂತಹ ಕೆಲವು ಲಕ್ಷಣಗಳು ಕಾಣಿಸುತ್ತವೆ. (ಎಲ್ಲ ಲಕ್ಷಣಗಳು ಒಂದೇ ಸಮಯದಲ್ಲಿ ಒಂದೇ ರೋಗಿಯಲ್ಲಿ ಕಾಣಿಸುವುದಿಲ್ಲ ಹಾಗೂ ಕಾಣಲೂಬಾರದು.) ಸಾಮಾನ್ಯವಾಗಿ ಜ್ವರ ೧ ರಿಂದ ೪ ದಿನ ಇರುತ್ತದೆ. ಕೆಲವೊಮ್ಮೆ ೭ ದಿನಗಳವರೆಗೂ ಇರುತ್ತದೆ. ಆದರೆ ಉಳಿದ ಲಕ್ಷಣಗಳು ಕಡಿಮೆಯಾಗಲು ೧೦ ರಿಂದ ೧೨ ದಿನಗಳು ಬೇಕಾಗುತ್ತವೆ.

೪. ಸರಳ ಉಪಚಾರದಿಂದ ಗುಣಮುಖವಾಗುವ ‘ವೈರಲ್ ಜ್ವರ’ಕ್ಕೆ ಪ್ರತಿಜೈವಿಕ ಸೇವನೆ ಮಾಡುವುದನ್ನು ತಪ್ಪಿಸಿರಿ ಹಾಗೂ ಧೈರ್ಯದಿಂದಿರಿ !

ಸದ್ಯ ವಿಷಾಣುಜನ್ಯ ಕಾಯಿಲೆಗಳನ್ನು ಪ್ರತಿರೋಧಿಸುವ ೨ ಉಪಾಯಗಳಿವೆ. ಮೊದಲನೆಯದ್ದು ಪ್ರತಿಬಂಧಕ ಲಸಿಕೆ ! ವಿಷಾಣುವಿನ ಸಂಖ್ಯೆ ಮತ್ತು ಪ್ರಕಾರಗಳ ಹರಡುವಿಕೆಯನ್ನು ನೋಡುವಾಗ ಅದು ಸೂಕ್ತವಲ್ಲ. ಇನ್ನೊಂದು ಉಪಾಯವಿದೆ, ‘ಆಂಟಿವೈರಲ್’ನ ಔಷಧಗಳು ! ಇವುಗಳು ಸಿಗುವುದು ಬಹಳ ಕಡಿಮೆ. ಅಲ್ಲದೆ ಅವುಗಳ ಉಪಯೋಗದ ದುಷ್ಪರಿಣಾಮವೂ ಹೆಚ್ಚು ಇರುತ್ತದೆ. ಅತೀ ಸರಳ ಉಪಚಾರಗಳಿಂದ ಗುಣವಾಗುವ ಜ್ವರಕ್ಕೆ ಇಂತಹ ಅಪಾಯಕಾರಿ ಔಷಧಗಳನ್ನು ಏಕೆ ಉಪಯೋಗಿಸಬೇಕು ? ೧ – ೨ ದಿನಗಳಲ್ಲಿ ಜ್ವರ ಬಿಡದಿದ್ದರೆ ಜನರು ಧೈರ್ಯಗೆಟ್ಟು ಆಧುನಿಕ ವೈದ್ಯರನ್ನು ಬದಲಾಯಿಸುತ್ತಾರೆ. ಆಧುನಿಕ ವೈದ್ಯರೂ ಅವಮಾನ ಮತ್ತು ವೈಫಲ್ಯತೆಗೆ ಭಯಪಡುತ್ತಾರೆ. ಆಗ ಆವಶ್ಯಕತೆಯಿಲ್ಲದ ಪ್ರತಿಜೈವಿಕ ಉಪಯೋಗಿಸುತ್ತಾರೆ. ಇಷ್ಟು ಮಾಡಿಯೂ ಕಾಯಿಲೆ ಅದರ ನಿರ್ದಿಷ್ಟ ಸಮಯದಲ್ಲಿಯೇ ಗುಣವಾಗುತ್ತದೆ. ಇದರಲ್ಲಿ ಕೇವಲ ಪ್ರತಿಜೈವಿಕಗಳನ್ನು ತಯಾರಿಸುವ ಔಷಧ ಕಂಪನಿಗಳಿಗೆ ಲಾಭವಾಗುತ್ತದೆ ಮತ್ತು ರೋಗಿಗಳಿಗೆ ಕೇವಲ ಹಾನಿ ಆಗುತ್ತದೆ. ಆದ್ದರಿಂದ ಧೈರ್ಯದಿಂದಿರುವುದು ಮಹತ್ವದ್ದಾಗಿದೆ.

– ವೈದ್ಯೆ ಸುಚಿತಾ ಕುಲಕರ್ಣಿ (ಆಧಾರ : ‘ಸಾಪ್ತಾಹಿಕ ವಿವೇಕ’)