ಮಹರಾಜಗಂಜ(ಉತ್ತರಪ್ರದೇಶ) ಇಲ್ಲಿ ೫೫ ವಯಸ್ಸಿನ ಮೌಲವಿಯಿಂದ ೮ ವರ್ಷದ ಬಾಲಕಿಯ ಮೇಲೆ ಮದರಸಾದಲ್ಲಿ ಬಲಾತ್ಕಾರ

(ಮೌಲವಿ ಎಂದರೆ ಇಸ್ಲಾಂನ ಧಾರ್ಮಿಕ ನಾಯಕ)

ಮಹರಾಜಗಂಜ(ಉತ್ತರಪ್ರದೇಶ) – ಇಲ್ಲಿಯ ಸಾನೌಲಿ ಪ್ರದೇಶದ ಒಂದು ಮುಚ್ಚಿರುವ ಮದರಸಾದಲ್ಲಿ ೫೫ ವರ್ಷದ ಮೌಲವಿ ಶಮಸುಲ್ ಹಕ ಇವನು ೮ ವರ್ಷದ ಹುಡುಗಿಯ ಮೇಲೆ ಬಲಾತ್ಕಾರ ಮಾಡಿ ಅಲ್ಲಿಂದ ಪರಾರಿಯಾದನು. ಪೊಲೀಸರು ಅವನ ವಿರುದ್ಧ ಪೋಕ್ಸೋ ಕಾನೂನಿನಂತರ್ಗತ ದೂರನ್ನು ದಾಖಲಿಸಿಕೊಂಡಿದ್ದಾರೆ. ಈ ಬಾಲಕಿಯು ಅಂಗಡಿಗೆ ವಸ್ತುಗಳನ್ನು ತರಲು ಹೋಗುತ್ತಿರುವಾಗ ಶಮಸುಲ ಹಕನು ಆಕೆಗೆ ಆಮಿಷ ಒಡ್ಡಿ ಮದರಸಾಗೆ ಕರೆದುಕೊಂಡು ಹೋಗಿ ಆಕೆಯ ಮೇಲೆ ಬಲಾತ್ಕಾರ ನಡೆಸಿದ್ದಾನೆ.

ಸಂಪಾದಕೀಯ ನಿಲುವು

ಇಂತಹ ಕಾಮುಕನಿಗೆ ಇಸ್ಲಾಮಿ ದೇಶಗಳಲ್ಲಿ ಶರಿಯತ್ ಕಾನೂನಿನ ಪ್ರಕಾರ ಗುಂಡಿ ತೋಡಿ ಅದರಲ್ಲಿ ಸೊಂಟದವರೆಗೆ ಹುಗಿದು ಅವನ ಮೇಲೆ ಕಲ್ಲು ಎಸೆದು ಕೊಲ್ಲುವ ಶಿಕ್ಷೆ ನೀಡಲಾಗುತ್ತದೆ, ಅದೇ ರೀತಿ ಶಿಕ್ಷೆ ನೀಡಬೇಕು ಎಂದು ಯಾರಾದರೂ ಒತ್ತಾಯಿಸಿದರೆ ಅದರಲ್ಲಿ ಆಶ್ಚರ್ಯ ಪಡಬೇಕಾಗಿಲ್ಲ.