ಬಲಾತ್ಕಾರ ಪ್ರಕರಣದ ಆರೋಪಿಗೆ ಜಾಮೀನಿನ ಮೇಲೆ ಬಿಡುಗಡೆ ಹೊಂದುತ್ತಲೇ ಸಂತ್ರಸ್ತೆಯ ಮೇಲೆ ಮತ್ತೆ ಬಲಾತ್ಕಾರ ಮಾಡಿದ !

ಬಲಾತ್ಕಾರದ ಚಿತ್ರೀಕರಣ ನಡೆಸಿ ದೂರನ್ನು ಹಿಂಪಡೆಯದಕ್ಕೆ ಬೆದರಿಕೆ

ಜಬಲಪುರ (ಮಧ್ಯಪ್ರದೇಶ) – ಇಲ್ಲಿ ಬಲಾತ್ಕಾರದ ಪ್ರಕರಣದಲ್ಲಿ ಬಂಧಿಸಲಾಗಿರುವ ಆರೋಪಿ ವಿವೇಕ್ ಪಟೇಲ್ ಇವನು ಜಾಮೀನಿನ ಮೇಲೆ ಬಿಡುಗಡೆ ಹೊಂದುತ್ತಲೆ ಚಾಕುವಿನಿಂದ ಹೆದರಿಸಿ ಸಂತ್ರಸ್ತೆಯ ಮೇಲೆ ಮತ್ತೊಮ್ಮೆ ಬಲಾತ್ಕಾರ ಮಾಡಿದ್ದಾನೆ. ಅದರ ಜೊತೆಗೆ ಬಲತ್ಕಾರ ಮಾಡುವಾಗ ವಿಡಿಯೋ ತಯಾರಿಸಿ ಅದರ ಆಧಾರದಲ್ಲಿ ಸಂತ್ರಸ್ತೆಗೆ ದೂರನ್ನು ಹಿಂಪಡೆಯಲು ಹಾಗೂ ಹಾಗೆ ಏನಾದರೂ ಮಾಡದಿದ್ದರೆ ಈ ವಿಡಿಯೋ ಪ್ರಸಾರ ಮಾಡಲಾಗುವುದೆಂದು ಬೆದರಿಸಲಾಗುತ್ತಿತ್ತು.

ಪಟೇಲ್ ಇವನು ಎರಡು ವರ್ಷಗಳ ಹಿಂದೆ ಸಂತ್ರಸ್ತೆಯ ಮೇಲೆ ಬಲಾತ್ಕಾರ ಮಾಡಿದ್ದನು, ಅದರ ನಂತರ ಅವನಿಗೆ ಬಂಧಿಸಲಾಗಿತ್ತು. ಒಂದು ವರ್ಷದ ಜೈಲು ಶಿಕ್ಷೆ ಅನುಭವಿಸಿ ಜಾಮೀನಿನ ಮೇಲೆ ಬಿಡುಗಡೆ ಹೊಂದಿದ್ದನು. ಹೊರ ಬಂದ ನಂತರ ಅವನು ಸಂತ್ರಸ್ತೆಯ ಮನೆಗೆ ಹೋಗಿ ಆಕೆಯ ಮೇಲೆ ಮತ್ತೊಮ್ಮೆ ಬಲತ್ಕಾರ ಮಾಡಿದನು. ‘ವಿರೋಧಿಸಿದರೆ ಕೊಲ್ಲುವೆನೆಂದು’ ಬೆದರಿಸಿ ಸಂತ್ರಸ್ತೆಯ ಮೇಲೆ ಬಲಾತ್ಕಾರ ನಡೆಸಿದನು. ವಿವೇಕ ಜೊತೆಗೆ ಅವನ ಸ್ನೇಹಿತ ಕೂಡ ಬಂದಿದ್ದನು, ಅವನು ಬಲಾತ್ಕಾರ ಮಾಡುವಾಗ ವಿಡಿಯೋ ಮಾಡಿದ್ದನು.

ಸಂಪಾದಕೀಯ ನಿಲುವು

ಈ ಘಟನೆಯಿಂದ, ಬಲಾತ್ಕಾರಿಗಳಿಗೆ ಶೀಘ್ರಗತಿ ನ್ಯಾಯಾಲಯದಲ್ಲಿ ಮೊಕೊದ್ದಮೆ ನಡೆಸಿ ಅವರಿಗೆ ಗಲ್ಲು ಶಿಕ್ಷೆ ವಿಧಿಸುವುದು ಎಷ್ಟು ಅವಶ್ಯಕವಾಗಿದೆ ಎಂಬುದು ಗಮನಕ್ಕೆ ಬರುತ್ತದೆ ! ಸರಕಾರ ಈ ದೃಷ್ಟಿಯಿಂದ ಯಾವಾಗ ಪ್ರಯತ್ನಿಸುವುದು ?