|
ನವದೆಹಲಿ – ದೇಶದಲ್ಲಿ ಚೀನಾದ ಸಂಚಾರವಾಣಿ ಕಂಪನಿಗಳ ಮೇಲೆ ನಿಷೇಧ ಹೇರುವ ಸಿದ್ಧತೆ ನಡೆಯುತ್ತಿವೆ. ಕೇಂದ್ರ ಸರಕಾರ ಆದಷ್ಟು ಬೇಗನೆ ೧೨ ಸಾವಿರಗಿಂತಲೂ ಕಡಿಮೆ ಬೆಲೆಯ ಚೀನಾ ಸಂಚಾರವಾಣಿಯನ್ನು ಭಾರತದಲ್ಲಿ ನಿಷೇಧಿಸಬಹುದು. ‘ಬ್ಲೂಮ್‌ಬರ್ಗ್’ ಈ ಕಂಪನಿ ನೀಡಿರುವ ಮಾಹಿತಿ ಪ್ರಕಾರ ಕೇಂದ್ರವು ಈ ನಿರ್ಧಾರವನ್ನು ‘ಲಾವಾ’ ಮತ್ತು ‘ಮೈಕ್ರೋಸಾಫ್ಟ್’ ಈ ರೀತಿಯ ದೇಶದ ಕಂಪನಿಗಳಿಗೆ ಪ್ರೋತ್ಸಾಹಿಸಲು ತೆಗೆದುಕೊಂಡಿದೆ. ಈ ನಿರ್ಧಾರದಿಂದ ‘ಶಾವುಮಿ’, ‘ವಿವೋ’, ‘ಒಪ್ಪೋ’, ‘ಪೋಕೊ’, ‘ರೆಡಮಿ’, ರಿಯಲಮಿ, ಈ ಚೀನಾದ ಕಂಪನಿಗಳಿಗೆ ನಷ್ಟ ಆಗುವುದು.
#LeadStoryOnET | The move is aimed at pushing Chinese giants out of the lower segment of the world’s second-biggest mobile market, according to people familiar with the matter.https://t.co/aFwOml0zL0
— Economic Times (@EconomicTimes) August 9, 2022
೧. ‘ಸ್ಮಾರ್ಟ್ ಫೋನ್’ ಕ್ಷೇತ್ರದಲ್ಲಿ ಭಾರತವು ಪ್ರಪಂಚದ ಎರಡನೇ ಸ್ಥಾನದ ಮಾರುಕಟ್ಟೆಯಾಗಿದೆ. ಇದರಲ್ಲಿ ಚೀನಾದ ಕಂಪನಿಗಳ ಪ್ರಭಾವವಿದೆ. (ಇದು ಭಾರತೀಯರಿಗೆ ಲಚ್ಚಾಸ್ಪದ ! – ಸಂಪಾದಕರು)
೨. ಒಂದು ವರದಿಯ ಪ್ರಕಾರ ಭಾರತದಲ್ಲಿ ೧೫೦ ಡಾಲರ್‌ಗಿಂತ (೧೨ ಸಾವಿರ ರೂಪಾಯಿಗಿಂತ) ಕಡಿಮೆ ಬೆಲೆಯ ಸ್ಮಾರ್ಟ್ ಫೋನಿನ ಪಾಲು ಒಟ್ಟು ಸಂಚಾರವಾಣಿಯ ವ್ಯವಹಾರದಲ್ಲಿ ೧ ನೇ ೩ ಭಾಗದಷ್ಟು ಇದೆ. ಇದರಲ್ಲಿ ಚೀನಾದ ಕಂಪನಿಯ ಪ್ರಭಾವ ಇದ್ದು ಅದರ ಪ್ರಮಾಣ ನಿವ್ವಳ ಶೇ. ೮೦ ರಷ್ಟು ಇದೆ. ಆದ್ದರಿಂದ
ಶಾವುಮಿಗೆ ಹೆಚ್ಚಿನ ನಷ್ಟ ಆಗಲಿದ್ದೂ ಅದರ ಶೇ. ೬೬ ರಷ್ಟು ಸಂಚಾರವಾಣಿಯು ೧೨ ಸಾವಿರ ಅಥವಾ ಅದಕ್ಕಿಂತ ಕಡಿಮೆ ಬೆಲೆಗೆ ಇದೆ.
೩. ‘ಚೀನಾದ ಸಂಚಾರವಾಣಿ ನಿಷೇಧಿಸಿದರೆ, ‘ಸ್ಯಾಮ್ಸಂಗ್’ ಮತ್ತು ‘ಆಪಲ್’ ಈ ಸಂಚಾರವಾಣಿ ಕಂಪನಿಗಳಿಗೆ ಅದರ ಲಾಭ ಆಗುವುದು’, ಎಂದು ಹೇಳಲಾಗುತ್ತಿದೆ.
ಭಾರತವು ಕಳೆದ ಕೆಲವು ಕಾಲಾವಧಿಯಲ್ಲಿ ಚೀನಾದ ಮೇಲೆ ಹೇರಿರುವ ವ್ಯಾಪಾರ ನಿರ್ಬಂಧ !
|
ಸಂಪಾದಕೀಯ ನಿಲುವುಶತ್ರುರಾಷ್ಟ್ರದ ಸಂಚಾರವಾಣಿಯ ವಿರುದ್ಧ ಭಾರತ ಸರಕಾರ ತೆಗೆದುಕೊಂಡಿರುವ ನಿರ್ಧಾರ ಸ್ವಾಗತರ್ಯವಾಗಿದೆ. ಈಗ ರಾಷ್ಟ್ರ ಪ್ರೇಮಿಗಳು ಚೀನಾದ ಉತ್ಪನ್ನಗಳನ್ನು ಬಹಿಷ್ಕರಿಸಬೇಕು ! |