ಜಯಪುರದ ಶ್ರೀ ಖಾಟೂಶ್ಯಾಮಜಿ ದೇವಸ್ಥಾನದಲ್ಲಿ ನಡೆದಂತಹ ಕಾಲ್ತುಳಿತದಲ್ಲಿ ೩ ಭಾವಿಕರ ಸಾವು

ಜಯಪುರ (ರಾಜಸ್ಥಾನ) – ಇಲ್ಲಿ ಸಿಕರ ಪರಿಸರದಲ್ಲಿರುವ ಪ್ರಸಿದ್ಧ ಶ್ರೀ ಖಾಟೂಶ್ಯಾಮಜಿ ದೇವಸ್ಥಾನದಲ್ಲಿ ಮಾಸಿಕ ಯಾತ್ರೆಯ ಸಮಯದಲ್ಲಿ ದುರ್ಘಟನೆ ನಡೆದಿದೆ. ಆಗಸ್ಟ್ ೮ ರಂದು ಬೆಳಿಗ್ಗೆ ದೇವಸ್ಥಾನ ತೆರೆಯುವ ಮೊದಲೇ ಹೆಚ್ಚಿನ ಸಂಖ್ಯೆಯಲ್ಲಿ ಭಾವಿಕರು ಸೇರಿದ್ದರು. ಬೆಳಿಗ್ಗೆ ದೇವಸ್ಥಾನ ತೆರೆದ ನಂತರ ದರ್ಶನಕ್ಕಾಗಿ ಒಳ ಹೋಗಲು ಭಾವಿಕರು ಗದ್ದಲ ಮಾಡಿದ್ದರಿಂದ ಕಾಲ್ತುಳಿತದಲ್ಲಿ ಮೂರು ಜನ ಭಾವಿಕರು ಸಾವನ್ನಪ್ಪಿದರು. ಗಾಯಗೊಂಡಿರುವ ಭಾವಿಕರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಲಾಯಿತು. ಸಾವನ್ನಪ್ಪಿರುವ ಮೂರು ಜನ ಭಾವಿಕರು ಮಹಿಳೆಯರಾಗಿದ್ದಾರೆ. ಇವರಲ್ಲಿ ಓರ್ವ ಮಹಿಳೆಯನ್ನು ಪೊಲೀಸರು ಗುರುತಿಸಿದ್ದಾರೆ. ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಈ ಘಟನೆಯ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ.

ಭಗವಾನ್ ಖಾಟೂಶ್ಯಾಮಜಿ ಇವರು ಭಗವಾನ ಶ್ರೀ ಕೃಷ್ಣನ ಅವತಾರವಾಗಿದ್ದಾರೆ. ಚಾಂದ್ರಮಾನ ದಿನದರ್ಶಿಕೆಯ ಅನುಸಾರ ಇಂದಿನ ದಿನ ಶ್ರೀ ಖಾಟೂಶ್ಯಾಮಜಿಯವರ ದರ್ಶನವನ್ನು ಶುಭವೆಂದು ಪರಿಗಣಿಸಲಾಗಿದೆ. ಈ ದೇವಸ್ಥಾನದಲ್ಲಿ ಯಾವಾಗಲೂ ಭಾವಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿರುತ್ತಾರೆ.

ಸಮಪಾದಕೀಯ ನಿಲುವು

ಹಿಂದೂಗಳ ದೇವಸ್ಥಾನಗಳಲ್ಲಿ ಸುವ್ಯವಸ್ಥಾಪನೆಯನ್ನು ಮಾಡದಿರುವುದರಿಂದ ಯಾತ್ರೆಗಳಲ್ಲಿ ಇಂತಹ ದುರ್ಘಟನೆಗಳು ನಡೆಯುತ್ತವೆ ! ಭಕ್ತರಿಗೆ ಸುಲಭವಾಗಿ ದರ್ಶನ ಸಿಗಲು ದೇವಸ್ಥಾನದ ಆಡಳಿತ ಮಂಡಳಿಯು ಉಪಾಯ ಯೋಜನೆಗಳನ್ನು ಮಾಡಿದರೆ ಭಕ್ತರು ದೇವರ ಬಾಗಿಲಿನಲ್ಲಿ ಜೀವ ಕಳೆದುಕೊಳ್ಳ ಬೇಕಾಗುವುದಿಲ್ಲ.