ಬಾಂಗ್ಲಾದೇಶದ ದೇವಸ್ಥಾನದ ಮೇಲೆ ಆಕ್ರಮಣ ಮಾಡಿ ಶ್ರೀ ಕಾಳಿಮಾತೆ ಮತ್ತು ಶ್ರೀ ಗಣೇಶನ ಮೂರ್ತಿಯನ್ನು ಧ್ವಂಸಗೊಳಿಸಿದ್ದಾರೆ

ಮದರಸಾದ ೩ ವಿದ್ಯಾರ್ಥಿಗಳ ಬಂಧನ

ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದ ಕೆನಮಾರಿ ದೇವಸ್ಥಾನದಲ್ಲಿನ ಶ್ರೀ ಕಾಳಿಮಾತೆ ಮತ್ತು ಶ್ರೀ ಗಣೇಶನ ಮೂರ್ತಿಗಳನ್ನು ಮದರಸಾದ ೩ ವಿದ್ಯಾರ್ಥಿಗಳು ಭಗ್ನಗೊಳಿಸಿದ್ದಾರೆ. ಈ ಮೂವರನ್ನೂ ಬಂಧಿಸಲಾಗಿದೆ. ಈ ದೇವಸ್ಥಾನಕ್ಕೆ ಅಂಟಿಕೊಂಡಿರುವ ಮೈದಾನದಲ್ಲಿ ಫುಟ್ಬಾಲ್ ಆಡಲು ದೇವಸ್ಥಾನ ಸಮಿತಿಯು ಅಡ್ಡಿಪಡಿಸಿದ್ದರಿಂದ ಅವರು ವಿಧ್ವಂಸಕ ಕೃತ್ಯವನ್ನು ನಡೆಸಿದ್ದಾರೆ. ಇಷ್ಟೇ ಅಲ್ಲದೆ ಈ ವಿದ್ಯಾರ್ಥಿಗಳು ಪಾಠ ಕಲಿಸುವುದಾಗಿ ಬೆದರಿಕೆಯನ್ನೂ ಹಾಕಿದ್ದರು.

ಸಮಪಾದಕೀಯ ನಿಲುವು

ವಿದ್ಯಾರ್ಥಿಗಳಿಗೆ ಮದರಸಾದಲ್ಲಿ ಏನು ಕಲಿಸುತ್ತಾರೆ ? ಮತ್ತು ಅದರ ನಂತರ ಅವರು ಏನು ಮಾಡುತ್ತಾರೆ? ಎಂಬುದು ಮತ್ತೊಮ್ಮೆ ಸ್ಪಷ್ಟವಾಗಿದೆ ! ಈ ಘಟನೆಯ ಬಗ್ಗೆ ಭಾರತ ಸರಕಾರವು ಬಾಂಗ್ಲಾದೇಶದಿಂದ ಉತ್ತರ ಕೇಳುವುದೇ ?