‘ಇಸ್ರೋ’ದಿಂದ ಉಪಗ್ರಹದ ಯಶಸ್ವಿ ಉಡಾವಣೆ: ಆದರೆ ಸಂಪರ್ಕ ಕಡಿತ !

‘ಎಸ್.ಎಸ್.ಎಲ್.ವಿ.- ಡಿ೧’ನ ಉಡಾವಣೆ

ಶ್ರೀಹರಿಕೋಟಾ (ಆಂಧ್ರಪ್ರದೇಶ) – ಇಲ್ಲಿನ ಸತೀಶ ಧವನ ಬಾಹ್ಯಾಕಾಶ ಸಂಶೋಧನಾ ಕೇಂದ್ರದಿಂದ ‘ಭಾರತೀಯ ಬಾಹ್ಯಾಕಾಶ ಸಂಶೋಧನೆ’ ಅಂದರೆ ‘ಇಸ್ರೋ’ವು ‘ಸ್ಮಾಲ್ ಸೆಟಲೈಟ್ ಲಾಂಚ್ ವೆಹಿಕಲ್ ಡೆವಲಪಮೆಂಟ್ ಫ್ಲೈಟ್ – ೧’ (‘ಎಸ್.ಎಸ್.ಎಲ್.ವಿ.- ಡಿ೧’ನ) ಮೊದಲ ಉಡಾವಣೆ ನಡೆಸಿತು. ಇದರೊಂದಿಗೆ ಪೃಥ್ವಿ ಉಪಗ್ರಹ ಮತ್ತು ವಿದ್ಯಾರ್ಥಿಗಳು ಸಿದ್ಧಪಡಿಸಿದ ‘ಆಜಾದಿ ಸ್ಯಾಟ’ ಈ ಉಪಗ್ರಹದ ಉಡಾವಣೆ ಮಾಡಲಾಯಿತು; ಆದರೆ ಯಶಸ್ವಿಯಾಗಿ ಉಡಾವಣೆ ಆದ ಬಳಿಕ ಅದರ ಸಂಪರ್ಕ ಕಡಿತಗೊಂಡಿರುವುದರಿಂದ ಇದರಿಂದ ಯಾವುದೇ ಲಾಭ ಆಗುವುದಿಲ್ಲ ಎಂದು ಇಸ್ರೋ ಹೇಳಿದೆ. ಈ ಉಡಾವಣೆಗಾಗಿ ೫೬ ಕೋಟಿ ರೂಪಾಯಿಗಳ ಖರ್ಚು ಮಾಡಲಾಗಿದೆ.

ಭಾರತಕ್ಕೆ ಸ್ವಾತಂತ್ರ್ಯ ದೊರೆತು ೭೫ ವರ್ಷ ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ದೇಶಾದ್ಯಂತವಿರುವ ೭೫ ಶಾಲೆಗಳ ೭೫೦ ವಿದ್ಯಾರ್ಥಿಗಳು ‘ಆಜಾದಿ ಸ್ಯಾಟ’ ಉಪಗ್ರಹ ಅಭಿವೃದ್ಧಿ ಪಡಿಸಿದ್ದರು. ಈ ಉಪಗ್ರಹದ ತೂಕ ಕೇವಲ ೮ ಕಿಲೋಗ್ರಾಮ ಇತ್ತು. ಇದರಲ್ಲಿ ‘ಸೋಲಾರ ಪ್ಯಾನಲ್’ ಮತ್ತು ‘ಸೆಲ್ಫಿ ಕ್ಯಾಮೆರಾ’ ಅಳವಡಿಸಲಾಗಿದೆ.