ಶ್ರೀ ಗಣೇಶ ಮತ್ತು ಶ್ರೀ ದುರ್ಗಾಮಾತೆಯ ಮೂರ್ತಿಗಳು ೩ ಅಡಿಗಿಂತ ಎತ್ತರವಿರಬಾರದು ! – ರಾಜಸ್ಥಾನ ಪೊಲೀಸ

  • ‘ಪ್ಲಾಸ್ಟರ ಆಫ್ ಪ್ಯಾರಿಸ’ ಮೂರ್ತಿಯನ್ನು ತಯಾರಿಸದಂತೆ ಸೂಚನೆ

  • ಆದೇಶವನ್ನು ಉಲ್ಲಂಘಿಸುವ ಮೂರ್ತಿಕಾರರ ಮೂರ್ತಿಯನ್ನು ವಶಪಡಿಸಿಕೊಳ್ಳುವುದಾಗಿ ಎಚ್ಚರಿಕೆ

ಕೋಟಾ(ರಾಜಸ್ಥಾನ) – ರಾಜಸ್ಥಾನದ ಕೋಟಾ ಪೊಲೀಸರು ಮುಂಬರುವ ಗಣೇಶೋತ್ಸವ ಮತ್ತು ದುರ್ಗಾಪೂಜೆಗಾಗಿ ಮೂರ್ತಿಯನ್ನು ತಯಾರಿಸುವ ಮೂರ್ತಿಕಾರರಿಗೆ ಕೆಲವು ನಿಬಂಧನೆಗಳೊಂದಿಗೆ ಮಾರ್ಗದರ್ಶಕ ಸೂತ್ರಗಳನ್ನು ಕಳುಹಿಸಿದೆ. ಈ ಸೂಚನೆಗಳಲ್ಲಿ ಶ್ರೀ ಗಣೇಶ ಮತ್ತು ಶ್ರೀ ದುರ್ಗಾಮಾತೆಯ ಮಣ್ಣಿನ ಮೂರ್ತಿಗಳು ೩ ಅಡಿಗಿಂತ ಹೆಚ್ಚು ಎತ್ತರವಿರಬಾರದು ಹಾಗೆಯೇ ‘ಪ್ಲಾಸ್ಟರ ಆಫ್ ಪ್ಯಾರಿಸ’ ನ ಮೂರ್ತಿಯನ್ನು ತಯಾರಿಸಬಾರದು, ಎಂದು ನಮೂದಿಸಲಾಗಿದೆ. ಅಗಸ್ಟ ೪, ೨೦೨೨ ರಂದು ನೀಡಲಾಗಿರುವ ಈ ಆದೇಶವನ್ನು ಪಾಲಿಸದಿರುವ ಮೂರ್ತಿಕಾರರ ಮೂರ್ತಿಯನ್ನು ವಶಪಡಿಸಿಕೊಳ್ಳುವುದಾಗಿ ಎಚ್ಚರಿಕೆಯನ್ನು ನೀಡಲಾಗಿದೆ. ‘ಈ ಮೂರ್ತಿಯನ್ನು ನೀರಿನಲ್ಲಿ ವಿಸರ್ಜಿಸುವುದರಿಂದ ಜಲಮಾಲಿನ್ಯವಾಗಿ ಜಲಚರಗಳಿಗೆ ಅಪಾಯ ನಿರ್ಮಾಣವಾಗುತ್ತದೆ’, ಎಂದು ಈ ನೋಟೀಸಿನಲ್ಲಿ ತಿಳಿಸಲಾಗಿದೆ.

ಮೂರ್ತಿಕಾರರಿಂದ ನಿರ್ಬಂಧ ಹಿಂಪಡೆಯುವಂತೆ ಒತ್ತಾಯ !

ಸರಕಾರ ಅನೇಕ ಮೂರ್ತಿಕಾರರಿಗೆ ಈ ನೊಟೀಸು ಕಳುಹಿಸಿದೆ. ಈ ಆದೇಶದಿಂದಾಗಿ ಮೂರ್ತಿಕಾರರಿಗೆ ಬಹಳ ಅಡಚಣೆಯಾಗುತ್ತಿದ್ದು, ಮೂರ್ತಿಗಳ ಎತ್ತರದ ಮೇಲಿನ ನಿರ್ಬಂಧವನ್ನು ಹಿಂಪಡೆಯುವಂತೆ ಅವರು ಮನವಿ ಮಾಡಿದ್ದಾರೆ. ನೂರಾರು ಮೂರ್ತಿಗಳನ್ನು ಈಗಾಗಲೇ ತಯಾರಿಸಲಾಗಿದೆಯೆಂದು ಅವರು ಹೇಳಿದರು.

ಸಂಪಾದಕೀಯ ನಿಲುವು

ಎಲ್ಲೆಡೆಯ ಪೊಲೀಸರು ಇಂತಹ ಕ್ರಮವನ್ನು ತೆಗೆದುಕೊಳ್ಳಬೇಕು, ಎಂದು ಹಿಂದೂಗಳಿಗೆ ಅನಿಸುತ್ತದೆ !