ಬನ್ಸೂರ (ರಾಜಸ್ಥಾನ) – ಬನ್ಸೂರು ಪೊಲೀಸ ಠಾಣೆಯ ಹವಾಲ್ದಾರ್ ಸುರೇಶ ಕುಮಾರ ಎಂಬವನು ೧ ಲಕ್ಷ ೪೦ ಸಾವಿರ ರೂಪಾಯಿಯ ಲಂಚ ಪಡೆಯುವಾಗ ಭ್ರಷ್ಟಾಚಾರ ನಿಗ್ರಹ ದಳದ ಕೈಯಲ್ಲಿ ಸಿಕ್ಕಿಬಿದ್ದ ಎಂದು ವರದಿಯಾಗಿದೆ.
राजस्थान पुलिस का शर्मनाक चेहरा आया सामने: एंटी करप्शन ब्यूरो ने पुलिस स्टेशन में 1.40 लाख की रिश्वत लेते हेड कॉन्स्टेबल को रंगे हाथ किया गिरफ्तार#Rajasthan #Police https://t.co/13SmVT347z
— Dainik Bhaskar (@DainikBhaskar) August 3, 2022
ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸ್ ನಿರೀಕ್ಷಕ ವಿಜಯ ಸಿಂಹ ಮೀಣಾ ಇವರ ಪ್ರಕಾರ, ಹರಸೋಲಿ (ಕೋಟಕಾಸಿಂ) ಇಲ್ಲಿಯ ಮಹಿಳೆ ಮುಕೇಶ ದೇವಿ ಇವರು ಆಗಸ್ಟ್ ೧, ೨೦೨೨ ರಂದು ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ಸಲ್ಲಿಸಿದರು. ಅದರಲ್ಲಿ ಅವರ ಪತಿ ಸತೀಶ ಕುಮಾರ ಜಾಟ ಇವರ ವಿರುದ್ಧ ಬನ್ಸೂರ್ ಪೊಲೀಸ ಠಾಣೆಯಲ್ಲಿ ದಾಖಲಿಸಲಾಗಿರುವ ಬಲಾತ್ಕಾರದ ಆರೋಪದಲ್ಲಿ ಅವರನ್ನು ಬಂಧಿಸದೆ ಇರುವುದಕ್ಕಾಗಿ ೧ ಲಕ್ಷ ೪೦ ಸಾವಿರ ರೂಪಾಯಿ ಲಂಚ ಕೇಳಲಾಗಿತ್ತು, ಹಾಗೂ ಪೊಲೀಸ ನಿರೀಕ್ಷಕ ರವೀಂದ್ರ ಕಾವಿಯಾ ಇವರು ಅವರ ಪತಿಯನ್ನು ಕಳೆದ ೧೭ ದಿನಗಳಿಂದ ಕಾನೂನಬಾಹಿರವಾಗಿ ಪೊಲೀಸ ಠಾಣೆಯಲ್ಲಿ ಕೂಡಿಸಿದ್ದಾರೆ ಎಂದು. (ಇಂತಹ ಕಾನೂನ ದ್ರೋಹಿ ಪೊಲೀಸರಿಗೆ ಜನ್ಮವಿಡೀ ಜೈಲಿನಲ್ಲಿರಿಸಬೇಕು !- ಸಂಪಾದಕರು) ಈ ದೂರಿನ ಆಧಾರದಲ್ಲಿ ಭ್ರಷ್ಟಾಚಾರ ನಿಗ್ರಹ ದಳವು ದೂರಿನ ತಥ್ಯ ಪರೀಕ್ಷಿಸಲು ಪೊಲೀಸ ನಿರೀಕ್ಷಕ ಮಹೇಂದ್ರ ಮೀಣಾ ಇವರ ನೇತೃತ್ವದ ಒಂದು ತಂಡಕ್ಕೆ ತನಿಖೆ ಒಪ್ಪಿಸಿತು. ಪೂರ್ವ ಯೋಜನೆಯ ಪ್ರಕಾರ ಮುಕೇಶದೇವಿ ಇವರು ಲಂಚದ ಹಣ ಪೊಲೀಸ ಹವಾಲ್ದಾರ್ ಸುರೇಶ ಕುಮಾರ ಇವರಿಗೆ ನೀಡಿದರು. ಅದೇ ಸಮಯಕ್ಕೆ ಅಲ್ಲಿ ಮೊದಲೇ ಬಂದು ಸೇರಿದ್ದ ಭ್ರಷ್ಟಾಚಾರ ನಿಗ್ರಹ ದಳವುವರು ಅವನನ್ನು ೧ ಲಕ್ಷ ೪೦ ಸಾವಿರ ರೂಪಾಯಿ ಲಂಚ ತೆಗೆದುಕೊಳ್ಳುವಾಗ ಹಿಡಿದಿದ್ದಾರೆ. ಈ ಕ್ರಮದ ನಂತರ ಆ ಪೊಲೀಸ ಠಾಣೆಯ ನಿರೀಕ್ಷಕ ರವೀಂದ್ರ ಕಾವಿಯಾ ಮತ್ತು ದೇವಿ ಸಿಂಹ ನಾಪತ್ತೆಯಾಗಿರುವುದು ಕಂಡು ಬಂದಿದೆ . ಸತೀಶ ಕುಮಾರ ಜಾಟ ಇವರನ್ನು ೧೭ ದಿನಗಳಿಂದ ಕಾನೂನು ಬಾಹಿರವಾಗಿ ಪೊಲೀಸ ಠಾಣೆಯಲ್ಲಿ ಇರಿಸಿರುವ ಕಾರಣ ಪೊಲೀಸ ನಿರೀಕ್ಷಕ ರವೀಂದ್ರ ಕಾವಿಯಾ ಇವರನ್ನು ಅಮಾನತ್ತುಗೊಳಿಸಲಾಗಿದೆ.
ಸಂಪಾದಕೀಯ ನಿಲುವುಬ್ರಷ್ಟಾಚಾರದಿಂದ ಪೀಡಿತ ಪೊಲೀಸ ಇಲಾಖೆ ! ಸರಕಾರ ಈ ಕೃತ್ಯದಲ್ಲಿ ದೋಷಿ ಪೊಲೀಸರ ಸಂಪತ್ತಿ ವಶಪಡಿಸಿಕೊಂಡು ಸಮಾಜದಲ್ಲಿ ತಲೆ ಎತ್ತಿ ಓಡದ ಹಾಗೆ ಮಾಡಬೇಕು, ಆಗಲೇ ಬೇರೆಯವರಲ್ಲಿ ಭಯ ಹುಟ್ಟುವುದು . |