ಆಸ್ಸಾಂನಲ್ಲಿ ಮುಸಲ್ಮಾನ ಯುವಕನಿಂದ ತಾನು ಹಿಂದೂ ಎಂದು ಹೇಳಿ ಹಿಂದೂ ಯುವತಿಯೊಂದಿಗೆ ವಿವಾಹ : ಬಲವಂತವಾಗಿ ಗೋಮಾಂಸ ಸೇವನೆಗೆ ಒತ್ತಡ

ಪೊಲೀಸರಿಂದ ಮುಸಲ್ಮಾನ ಯುವಕನ ಬಂಧನ

ಸಾಂಕೇತಿಕ ಛಾಯಾಚಿತ್ರ

ಗೌಹಾಟಿ (ಆಸ್ಸಾಂ) – ಇಲ್ಲಿ ವಿವಾಹಿತ ಮುಸಲ್ಮಾನ ಯುವಕನು ತಾನು ಹಿಂದೂ ಎಂದು ಹೇಳಿ ಓರ್ವ ಹಿಂದೂ ಯುವತಿಯನ್ನು ಪ್ರೇಮದ ಬಲೆಯಲ್ಲಿ ಸಿಲುಕಿಸಿ ಅವಳೊಂದಿಗೆ ಮದುವೆಯಾದನು. ತದನಂತರ ಅವಳನ್ನು ಬಲವಂತವಾಗಿ ಗೋಮಾಂಸವನ್ನು ಸೇವಿಸುವಂತೆ ಒತ್ತಾಯಿಸಿದಾಗ ಅವನನ್ನು ಬಂಧಿಸಲಾಗಿದೆ. ಅಬ್ದುಲ ಶಾಹಜಹಾನ ಅವನ ಹೆಸರಾಗಿದ್ದು, ಅವನು ‘ಮಿಂಟೂ ರಾಯ್’ ಎಂದು ಹಿಂದೂ ಹೆಸರು ಹೇಳಿ ಈ ಯುವತಿಯನ್ನು ಪ್ರೇಮದ ಬಲೆಯಲ್ಲಿ ಬೀಳಿಸಿದ್ದನು. ಅವರ ವಿವಾಹ ಪ್ರಸಿದ್ಧ ಕಾಮಾಖ್ಯ ಮಂದಿರದಲ್ಲಿ ಆಗಿತ್ತು. ೬ ತಿಂಗಳ ಬಳಿಕ ಈ ಯುವತಿಗೆ ಅವನ ನೈಜ ಗುರುತು ತಿಳಿಯಿತು. ಈ ಕಾಲದಲ್ಲಿ ಅವನು ಅವಳಿಂದ ಅವಳ ಹತ್ತಿರವಿದ್ದ ಎಲ್ಲ ಹಣವನ್ನು ಕಸಿದುಕೊಂಡನು ಮತ್ತು ಇನ್ನೊರ್ವ ಹಿಂದೂ ಯುವತಿಯನ್ನು ಪ್ರೇಮದ ಬಲೆಯಲ್ಲಿ ಸಿಲುಕಿಸಲು ಪ್ರಯತ್ನಿಸಿದನು.

ಹಿಂದೂ ಮಹಿಳೆಯರು ಮುಸಲ್ಮಾನ ಪುರುಷರೊಂದಿಗೆ ವಿವಾಹವಾಗಬಾರದು ! – ಸಂತ್ರಸ್ತ ಹಿಂದೂ ಯುವತಿ

ಈ ಘಟನೆಯ ವಿಷಯದಲ್ಲಿ ಈ ಯುವತಿಯು, ‘ಹಿಂದೂ ಮಹಿಳೆಯರು ಮುಸಲ್ಮಾನ ಪುರುಷರೊಂದಿಗೆ ವಿವಾಹವಾಗಬಾರದು’, ಎಂದು ನಾನು ಕರೆ ನೀಡಲು ಇಚ್ಛಿಸುತ್ತೇನೆ. ಅವರ ಬಲೆಯಲ್ಲಿ ಸಿಲುಕುವುದರಿಂದ ಜಾಗೃತವಾಗಿರಬೇಕು. ಅವರು(ಮುಸಲ್ಮಾನ ಪುರುಷರು) ಕೆಲವು ದಿನಗಳ ವರೆಗೆ ನಿಮ್ಮೊಂದಿಗೆ ಚೆನ್ನಾಗಿ ವರ್ತಿಸುತ್ತಾರೆ ಮತ್ತು ತದನಂತರ ನಿಮ್ಮನ್ನು ಶಾರೀರಿಕವಾಗಿ ಹಿಂಸಿಸುವರು. ಅಲ್ಲದೇ ನಿಮ್ಮ ಆಹಾರವನ್ನೂ ನಿಲ್ಲಿಸುವರು ಎಂದು ಹೇಳಿದಳು.

ಸಂಪಾದಕೀಯ ನಿಲುವು

ಲವ ಜಿಹಾದ್ ವಿರೋಧಿ ಕಾನೂನು ಜಾರಿಗೊಳಿಸಿದರೂ ಇಂತಹ ಪ್ರಕರಣಗಳು ನಿಲ್ಲುವುದಿಲ್ಲ. ಇದರಿಂದ ‘ಮತಾಂಧರಿಗೆ ಕಾನೂನಿನ ಭಯ ಇರುವುದಿಲ್ಲ’, ಎನ್ನುವುದು ಪುನಃ ಒಮ್ಮೆ ಸ್ಪಷ್ಟವಾಗಿದೆ. ಇಂತಹವರಿಗೆ ಈಗ ಹಿಂದೂ ಯುವತಿಯ ಜೀವನ ನಾಶವಾಗಿರುವ ಕಾರಣದಿಂದ ಗಲ್ಲುಶಿಕ್ಷೆ ನೀಡಲು ಸರಕಾರ ಪ್ರಯತ್ನಿಸಬೇಕು !