ಅಲಿಗಡ್, ಜಾಮಿಯಾ ಮಿಲಿಯಾ ಇಸ್ಲಾಮಿಮಿಯ ಮತ್ತು ಹಮದರ್ದ ವಿಶ್ವವಿದ್ಯಾಲಯಗಳಿಂದ ಜಿಹಾದಿ ಶಿಕ್ಷಣ ನೀಡಲಾಗುತ್ತಿದೆ !

ದೇಶದ ೨೫ ವಿಚಾರವಂತರಿಂದ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ, ಕ್ರಮಕ್ಕೆ ಬೇಡಿಕೆ !

ಹೊಸ ದೆಹಲಿ – ದೇಶದ ೨೫ ವಿಚಾರವಂತರು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ಮೂರು ವಿಶ್ವವಿದ್ಯಾಲಯಗಳಲ್ಲಿ ಜಿಹಾದಿ ಶಿಕ್ಷಣ ನೀಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಆಲಿಗಡ್ ಮುಸ್ಲಿಂ ವಿಶ್ವವಿದ್ಯಾಲಯ, ಜಾಮಿಯಾ ಮಿಲಿಯ ಇಸ್ಲಾಮಿಯ ವಿಶ್ವವಿದ್ಯಾಲಯ ಮತ್ತು ಹಮದರ್ದ ವಿಶ್ವವಿದ್ಯಾಲಯಗಳ ಮೇಲೆ ನಿಷೇಧ ಹೇರಲು ಒತ್ತಾಯಿಸಿದ್ದಾರೆ.

ಈ ಪತ್ರದಲ್ಲಿ ಈ ವಿಶ್ವವಿದ್ಯಾಲಯಗಳ ಕೆಲವು ವಿಭಾಗಗಳಲ್ಲಿ ಜಿಹಾದಿ ಶಿಕ್ಷಣ ನೀಡಲಾಗುತ್ತಿದೆ. ಇದರ ಮೂಲಕ ಹಿಂದೂ ಸಮಾಜ ಮತ್ತು ಸಂಸ್ಕೃತಿ ಇದರ ಮೇಲೆ ದಾಳಿ ಮಾಡಲಾಗುತ್ತಿದೆ. ಇದು ಚಿಂತೆಯ ವಿಷಯವಾಗಿದೆ. ಪ್ರಮುಖ ಇಸ್ಲಾಮಿ ವಿಶ್ವವಿದ್ಯಾಲಯಗಳಲ್ಲಿ ಈ ರೀತಿಯ ವಿಚಾರಸರಣಿಗೆ ಪ್ರೋತ್ಸಾಹ ನೀಡುವ ಪ್ರಯತ್ನವಾಗಿದೆ. ವಿಶೇಷ ಎಂದರೆ ದೇಶದ ವಿಭಜನೆಯ ನಂತರ ಈಗ ಕೆಲವು ಪ್ರಮುಖ ಮುಸಲ್ಮಾನ ನಾಯಕರು ೨೦೪೭ ರ ವರೆಗೆ ದೇಶದ ಇಸ್ಲಾಮೀಕರಣ ಮಾಡುವ ಸಂಕಲ್ಪ ಮಾಡಿದ್ದಾರೆ. ಈ ವಿಶ್ವವಿದ್ಯಾಲಯಗಳು ಜನರ ತೆರಿಗೆಯಿಂದ ನಡೆಸಲಾಗುತ್ತಿವೆ. ಇಂತಹವರ ಮೇಲೆ ಕ್ರಮ ಕೈಗೊಳ್ಳಲು ಒತ್ತಾಯಿಸುವ ಅಧಿಕಾರ ನಮಗೆ ಇದೆ. ಆದ್ದರಿಂದ ಇದರ ಮೇಲೆ ಗಮನ ನೀಡಿ ಕ್ರಮ ಕೈಗೊಳ್ಳಬೇಕು ಎಂದು ಪತ್ರದಲ್ಲಿ ಬರೆಯಲಾಗಿದೆ.

ಸಂಪಾದಕೀಯ ನಿಲುವು

ವಿಚಾರವಂತರಿಗೆ ತಿಳಿಯುವ ವಿಷಯ, ಗುಪ್ತಚರ ಇಲಾಖೆ ಮತ್ತು ಶಿಕ್ಷಣ ಇಲಾಖೆಗೆ ಹೇಗೆ ತಿಳಿಯುವುದಿಲ್ಲ ?