ಕಾಶ್ಮೀರ ಕಣಿವೆಯಲ್ಲಿ ಕಾಶ್ಮೀರಿ ಹಿಂದೂ ಸಿಬ್ಬಂದಿಗಳ ವರ್ಗಾವಣೆಗಾಗಿ ಈಗಲೂ ಆಂದೋಲನ ನಡೆಯುತ್ತಲೇ ಇದೆ !

ಶ್ರೀನಗರ (ಜಮ್ಮು ಕಾಶ್ಮೀರ) : ಸರಕಾರದ ಬೇರೆ ಬೇರೆ ರೀತಿಯ ಪ್ರಯತ್ನಗಳ ನಂತರವೂ ಹಿಂದೂ ಸಿಬ್ಬಂದಿಗಳು ಕಾಶ್ಮೀರ ಕಣಿವೆಯಲ್ಲಿ ಸುರಕ್ಷಿತವಾಗಿಲ್ಲ. ಆದ್ದರಿಂದ ಕಣಿವೆಯಿಂದ ಹೊರಗೆ ದೇಶದಲ್ಲಿ ಬೇರೆಲ್ಲಾದರೂ ಸರಿ ವರ್ಗಾವಣೆ ಆಗುವವರೆಗೂ ಆಂದೋಲನ ನಡೆಸುವೆವು, ಎಂದು ಆಂದೋಲನದ ನೇತೃತ್ವ ವಹಿಸಿರುವ ಆಲ್ ಮೈಗ್ರಂಟ್ (ವಲಸಿಗ) ಸಿಬ್ಬಂದಿಗಳ ಸಂಘ ಕಶ್ಮೀರ ಹೇಳಿದೆ. ಇಲ್ಲಿ ಮೇ ೧೨ ರಿಂದ ಸತತವಾಗಿ ಆಂದೋಲನ ನಡೆಯುತ್ತಿದೆ.

ಕಳೆದ ಕೆಲವು ತಿಂಗಳಿಂದ ಕಾಶ್ಮೀರ ಕಣಿವೆಯಲ್ಲಿ ಕಾಶ್ಮೀರಿ ಹಿಂದೂಗಳನ್ನ ಗುರಿಯಾಗಿಸಿ ಅವರ ಹತ್ಯೆಯಾಗುತ್ತಿರುವುದರಿಂದ ಅಲ್ಲಿಯ ಕಾಶ್ಮೀರಿ ಹಿಂದೂ ಸಿಬ್ಬಂದಿಗಳು ಅವರ ವರ್ಗಾವಣೆ ಆಗಬೇಕೆಂದು ಒತ್ತಾಯಿಸುತ್ತಿದ್ದಾರೆ, ಅದಕ್ಕಾಗಿ ಈ ಆಂದೋಲನ ಮಾಡುತ್ತಿದ್ದಾರೆ.

ಈಗ ಕೇಂದ್ರ ಗೃಹ ಸಚಿವಾಲಯ ಸಾರ್ವಜನಿಕ ಕಟ್ಟಡ ನಿರ್ಮಾಣ ಇಲಾಖೆ ೫ ಕಿರಿಯ ಇಂಜಿನಿಯರ್ ಗಳನ್ನು ಕಾಶ್ಮೀರದಿಂದ ಜಮ್ಮು ವಿಭಾಗಕ್ಕೆ ವರ್ಗಾಯಿಸಿರುವ ಆದೇಶ ನೀಡಿದ್ದು, ಇವರೆಲ್ಲರೂ ಕಾಶ್ಮೀರಿ ಹಿಂದೂಗಳಾಗಿದ್ದಾರೆ. ಈ ಮೊದಲು ಕೇಂದ್ರ ಸರಕಾರ ಯಾವುದೇ ಹಿಂದೂ ಸಿಬ್ಬಂದಿಯನ್ನು ಹಿಂಸಾಚಾರದ ಭಯದಿಂದ ಕಾಶ್ಮೀರದಿಂದ ವರ್ಗಾಯಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದು; ಈಗ ಅಕಸ್ಮಾತ್ತಾದ ವರ್ಗಾವಣೆಯ ನಿರ್ಣಯವನ್ನು ಆಂದೋಲನ ನಡೆಸುವ ೫ ಸಾವಿರ ಕಾಶ್ಮೀರಿ ಹಿಂದೂ ಸಿಬ್ಬಂದಿಗಳು ಸ್ವಾಗತಿಸಿದ್ದಾರೆ. ಆದರೆ ಎಲ್ಲಿಯವರೆಗೆ ಎಲ್ಲಾ ಕಾಶ್ಮೀರಿ ಹಿಂದೂ ಸಿಬ್ಬಂದಿಗಳು ಕಣಿವೆಯಿಂದ ಹೊರಗೆ ಸುರಕ್ಷಿತ ಸ್ಥಳಕ್ಕೆ ವರ್ಗಾವಣೆ ಆಗವುದಿಲ್ಲ, ಅಲ್ಲಿಯವರೆಗೆ ಆಂದೋಲನ ಮುಗಿಯುವುದಿಲ್ಲ ಎಂದು ಅವರು ನಿಶ್ಚಯಿಸಿದ್ದಾರೆ.

ಕೇಂದ್ರ ಸರಕಾರವು ಕಾಶ್ಮೀರದಲ್ಲಿ ನೇಮಿಸಲಾದ ಮೂಲ ಜಮ್ಮುವಿನ ಹಿಂದೂ ಸಿಬ್ಬಂದಿಗಳ (ಕಾಶ್ಮೀರಿ ಹಿಂದೂ ಅಲ್ಲದೇ ಇರುವ) ವರ್ಗಾವಣೆಯ ನಿರ್ಣಯ ತೆಗೆದುಕೊಳ್ಳುವ ಮೊದಲು ಸಮಿತಿಯ ಸ್ಥಾಪನೆ ಮಾಡಿದೆ. ಸಿಬ್ಬಂದಿಗಳ ಇಲಾಖೆಯ ಮುಖ್ಯ ಸಚಿವ ಮನೋಜ ಕುಮಾರ ದ್ವಿವೇದಿ ಇವರು ಈ ಸಮಿತಿಯ ಪ್ರಮುಖರಾಗಿದ್ದಾರೆ. ಈ ಸಮಿತಿ ವರ್ಗಾವಣೆ ಸಂಬಂಧಿಸಿದ ಎಲ್ಲಾ ಅಂಶಗಳನ್ನು ಪರಿಶೀಲಿಸುವುದು, ಆದರೆ ಕಾಶ್ಮೀರಿ ಹಿಂದೂಗಳ ವರ್ಗಾವಣೆಯ ಶಿಫಾರಸ್ಸು ಮಾಡುವುದಿಲ್ಲ. ಈ ಸಿಬ್ಬಂದಿಗಳ ವರ್ಗಾವಣೆಗೆ ಸಂಬಂಧಪಟ್ಟ ಯಾವುದೇ ನಿರ್ಣಯ ಕೇಂದ್ರ ಗೃಹ ಸಚಿವಾಲಯದ ಅನುಮತಿ ಇಲ್ಲದೆ ಆಗಲು ಸಾಧ್ಯವಿಲ್ಲ.

ಸಂಪಾದಕೀಯ ನಿಲುವು

ಸ್ವಂತ ಪ್ರಾಣರಕ್ಷಣೆಗಾಗಿ ಈ ರೀತಿಯ ಆಂದೋಲನ ನಡೆಸಿಯೂ ಸರಕಾರಿದಿಂದ ಪ್ರತಿಕ್ರಿಯೆ ದೊರೆಯದೇ ಇರುವುದು ಲಜ್ಜಾಸ್ಪದ !