ಭಗವಾನ ಶಿವನ ಭಜನೆ ಹಾಡಿದ ಮುಸಲ್ಮಾನ ಗಾಯಕಿಯನ್ನು ಟೀಕಿಸಿದ ದೇವಬಂದ ಉಲೇಮಾ

ಭಜನೆ ಶರಿಯತ್ತಿಗೆ ವಿರುದ್ಧವಾಗಿದೆ ! (ಅಂತೆ)

(ಉಲೆಮಾ ಎಂದರೆ ‘ಇಸ್ಲಾಮಿನ ನಿಯಮಗಳ ಪಾಲನೆ ಆಗುತ್ತಿದೆ ಅಲ್ಲವೇ’ ಎಂಬುವುದರ ಕಡೆ ಗಮನ ಇಡುವ ಗುಂಪು)

ಮುಜಫ್ಫರನಗರ (ಉತ್ತರಪ್ರದೇಶ) – ಯೂಟ್ಯೂಬನಲ್ಲಿ ಗಾಯಕಿ ಫರಮಾನಿ ನಾಝ ಇವರು ಕಾವಡಯಾತ್ರೆಗಾಗಿ ಭಗವಾನ್ ಶಿವನ ‘ಹರ ಹರ ಶಂಭೋ’ ಎಂಬ ಭಜನೆ ಹಾಡಿರುವುದಕ್ಕೆ ದೇವಬಂದ ಉಲೇಮಾ ಅವರನ್ನು ಟೀಕಿಸುತ್ತಾ, ‘ಇದು ಶರಿಯತ್ತಿನ ವಿರುದ್ಧವಾಗಿದೆ ಎಂದು ಹೇಳಿದ್ದಾರೆ. ಇಸ್ಲಾಮಿನಲ್ಲಿ ಯಾವುದೇ ರೀತಿಯ ಹಾಡು ಹಾಡುವುದು ಅಯೋಗ್ಯವಾಗಿದೆ, ಇದು ಇಸ್ಲಾಮಿನ ವಿರುದ್ಧವಾಗಿದೆ, ಆದ್ದರಿಂದ ಪರಮಾನಿ ಇವರು ಇಂತಹ ವಿಷಯಗಳಿಂದ ದೂರವಿರಬೇಕು’.

ಕಲಾವಿದರಿಗೆ ಯಾವುದೇ ಧರ್ಮ ಇರುವುದಿಲ್ಲ ! – ಫರಮಾನಿ ನಾಝ

ನಾನೊಬ್ಬ ಕಲಾವಿದೆ. ಆದ್ದರಿಂದ ನನಗೆ ಬೇರೆ ಬೇರೆ ಹಾಡು ಹಾಡಬೇಕಾಗುತ್ತದೆ. ಕಲಾವಿದರಿಗೆ ಯಾವುದೇ ಧರ್ಮ ಇರುವುದಿಲ್ಲ. ನಾನು ಕವ್ವಾಲಿ ಮತ್ತು ಭಕ್ತಿ ಗೀತೆ ಎರಡರಲ್ಲೂ ಜೀವ ತುಂಬಿ ಹಾಡುತ್ತೇನೆ. ಅದಕ್ಕಾಗಿ ನಾನು ಉಲೇಮಾ ಅಥವಾ ಬೇರೆ ಯಾರನ್ನು ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ. ಕಲಾವಿದರು ಹಿಂದೂ ಮತ್ತು ಮುಸಲ್ಮಾನ ಎಂದು ನೋಡಿಕೊಂಡು ಕಲೆ ಪ್ರಸ್ತುತಪಡಿಸುವುದಿಲ್ಲ ಎಂದು ಫರಮಾನಿ ನಾಝ ಪ್ರತಿಕ್ರಿಯೆ ವ್ಯಕ್ತಪಡಿಸಿದರು.

ಸಂಪಾದಕೀಯ ನಿಲುವು

ಮನಬಂದಂತೆ ಹಿಂದೂಗಳಿಗೆ ಸರ್ವಧರ್ಮ ಸಮಭಾವದ ಉಪದೇಶವನ್ನು ಉಣಬಡಿಸುವ ಜಾತ್ಯಾತೀತರು, ಪ್ರಗತಿಪರರು ಈಗ ಎಲ್ಲಿ ಇದ್ದಾರೆ ?