ತಮಿಳುನಾಡಿನಲ್ಲಿ ಹೆಸರಾಂತ ಹಿಂದೂ ವ್ಯಕ್ತಿಯ ಹತ್ಯೆಯ ಸಂಚು ಬಯಲಾಗಿದೆ

ಇಸ್ಲಾಮಿಕ ಸ್ಟೇಟನೊಂದಿಗೆ ಸಂಪರ್ಕವಿರುವ ಮೀರ ಅನಸ ಅಲಿಯ ಬಂಧನ

ಮೀರ ಅನಸ ಅಲೀ

ಅಂಬೂರ (ತಮಿಳುನಾಡು) – ಇಲ್ಲಿನ ಮೀರ ಅನಸ ಅಲೀ ಎಂಬ ೨೨ ವರ್ಷ ವಯಸ್ಸಿನ ಯಾಂತ್ರಿಕ ಅಭಿಯಂತ (ಮೆಕೆನಿಕಲ ಇಂಜಿನಿಯರ) ನಾಗಿರುವ ವಿದ್ಯಾರ್ಥಿಯನ್ನು ಪೊಲೀಸರು ಇಸ್ಲಾಮಿಕ ಸ್ಟೇಟ್‌ನೊಂದಿಗೆ ಸಂಬಂಧವಿದ್ದ ಕಾರಣದಿಂದ ಬಂಧಿಸಿದ್ದಾರೆ. ಅವನು ಇಸ್ಲಾಮಿಕ ಸ್ಟೇಟ್‌ನೊಂದಿಗೆ ಸಂಬಂಧವಿಟ್ಟು ಭಾರತದಲ್ಲಿ ಭಯೋತ್ಪಾದಕ ಆಕ್ರಮಣಗಳನ್ನು ಮಾಡುವ ಸಂಚನ್ನು ರೂಪಿಸುತ್ತಿದ್ದನು. ಅವನು ಟೆಲಿಗ್ರಾಂ ಹಾಗೂ ಇತರ ಸಾಮಾಜಿಕ ಮಾಧ್ಯಮಗಳಿಂದ ನಿಯಮಿತವಾಗಿ ಇಸ್ಲಾಮಿಕ ಸ್ಟೇಟ್‌ನ ಸಂಪರ್ಕದಲ್ಲಿದ್ದನು. ಪೊಲೀಸ ಮೂಲಗಳಿಂದ ‘ರಾಜ್ಯದಲ್ಲಿನ ಹಿಂದೂಗಳಲ್ಲಿ ಭಯದ ವಾತಾವರಣವನ್ನು ನಿರ್ಮಿಸಲು ಅವನು ಓರ್ವ ಹೆಸರಾಂತ ಹಿಂದೂ ವ್ಯಕ್ತಿಯ ಹತ್ಯೆಯ ಸಂಚನ್ನು ರೂಪಿಸುತ್ತಿದ್ದನು’ ಎಂಬುದು ತಿಳಿದು ಬಂದಿದೆ.

ಇಸ್ಲಾಮಿಕ ಸ್ಟೇಟ್‌ನ ಸಂಪರ್ಕದಲ್ಲಿರುವ ಮದರಸಾದಲ್ಲಿರುವ ವಿದ್ಯಾರ್ಥಿಯನ್ನೂ ಬಂಧಿಸಲಾಯಿತು

ಉತ್ತರಪ್ರದೇಶದಲ್ಲಿನ ದೇವಬಂಧನಿಂದ ಕರ್ನಾಟಕದ ಫಾರೂಖ ಎಂಬ ಹೆಸರಿನ ಭಯೋತ್ಪಾದಕನನ್ನು ಬಂಧಿಸಲಾಗಿದೆ. ಅವನೂ ಇಸ್ಲಾಮಿಕ ಸ್ಟೇಟ್‌ನ ಸಂಪರ್ಕದಲ್ಲಿದ್ದನು. ಅವನು ಮದರಸಾದ ವಿದ್ಯಾರ್ಥಿಯಾಗಿದ್ದಾನೆ.

ಸಂಪಾದಕೀಯ ನಿಲುವು

ದೇಶದಲ್ಲಿ ಮತಾಂಧರಿಂದ ಹಿಂದೂಗಳನ್ನು ಒಬ್ಬರ ನಂತರ ಇನ್ನೊಬ್ಬರಂತೆ ಹತ್ಯೆ ಮಾಡುವ ಷಡ್ಯಂತ್ರವನ್ನು ರಚಿಸಲಾಗಿರುವ ಬಗ್ಗೆ ಈ ಘಟನೆಯಿಂದ ಗಮನಕ್ಕೆ ಬರುತ್ತದೆ. ಇಂತಹ ಘಟನೆಗಳನ್ನು ಎದುರಿಸಲು ಹಿಂದೂಗಳು ಸ್ವಸಂರಕ್ಷಣಾ ತರಬೇತಿಯನ್ನು ಪಡೆಯುವುದು ಆವಶ್ಯಕವಾಗಿದೆ !