ಬಂದೂಕಿನ ಉತ್ತರ ಬಂದೂಕಿನಿಂದಲೇ ! – ತಮಿಳುನಾಡಿನ ರಾಜ್ಯಪಾಲರಿಂದ ಪಾಕಿಸ್ತಾನಕ್ಕೆ ಎಚ್ಚರಿಕೆ

ತಮಿಳುನಾಡಿನ ರಾಜ್ಯಪಾಲ ಆರ್ ಎನ್ ರವಿ

ಕೊಚ್ಚಿ (ಕೇರಳ) : ತಮಿಳುನಾಡಿನ ರಾಜ್ಯಪಾಲ ಆರ್ ಎನ್ ರವಿ ಇವರು ಪಾಕ್ ಬೆಂಬಲಿತ ಭಯೋತ್ಪಾದನೆಯನ್ನು ಕಠೋರವಾಗಿ ಟೀಕಿಸುವಾಗ, ಬಂದೂಕಿನ ಉತ್ತರ ಬಂದೂಕಿನಿಂದಲೇ ಸಿಗುವುದು , ಎಂಬ ಎಚ್ಚರಿಕೆ ಪಾಕಿಸ್ತಾನಕ್ಕೆ ನೀಡಿದರು. ಕೇರಳದ ಕೊಚ್ಚಿಯಲ್ಲಿ ನಡೆದ ಒಂದು ಕಾರ್ಯಕ್ರಮದಲ್ಲಿ ಮಾತನಾಡುವಾಗ, ದೇಶದ ಐಕ್ಯತೆ ಮತ್ತು ಅಖಂಡತೆಯ ವಿರುದ್ಧ ಮಾತನಾಡುವವರ ಜೊತೆಗೆ ಯಾವುದೇ ಚರ್ಚೆ ಮಾಡಲಾಗುವುದಿಲ್ಲ. ಕಳೆದ ೮ ವರ್ಷಗಳಲ್ಲಿ ಯಾವುದೇ ಸಶಸ್ತ್ರ ಗುಂಪಿನ ಜೊತೆ ಸಂವಾದ ನಡೆಸಿಲ್ಲ ಮತ್ತು ಈ ನಿಲುವೇ ಯೋಗ್ಯವಾಗಿದೆ ಎಂದು ಅವರು ಆ ಸಮಯದಲ್ಲಿ ಹೇಳಿದರು.

ಮಾತು ಮುಂದುವರಿಸಿ, ಪುಲ್ವಾಮಾ ದಾಳಿಯ ನಂತರ ನಾವು ಬಾಲಾಕೋಟದಲ್ಲಿ ವಾಯು ದಾಳಿ (ಸರ್ಜಿಕಲ್ ಸ್ಟ್ರೈಕ್) ನಡೆಸಿ ಪಾಕಿಸ್ತಾನಕ್ಕೆ ಪಾಠ ಕಲಿಸಿದೆವು. ನೀವು ಏನಾದರೂ ಭಯೋತ್ಪಾದಕ ಕೃತ್ಯ ಮಾಡಿದರೆ ಆಗ ಅದರ ಬೆಲೆ ನೀವೇ ತೆರಬೇಕು, ಎಂಬ ಸಂದೇಶ ನೀಡಲಾಯಿತು. ಮುಂಬೈಯಲ್ಲಿ ೨೬/೧೧ ರ ಭಯೋತ್ಪಾದಕ ದಾಳಿ ನಡೆದಿತ್ತು, ಸಂಪೂರ್ಣ ದೇಶ ಹೆದರಿತ್ತು. ಬೆರಳೆಣಿಕೆಯಷ್ಟು ಭಯೋತ್ಪಾದಕರಿಂದ ಭಾರತದ ಅಪಮಾನಿತವಾಗಿತ್ತು. ಇಂದೂ ಕೂಡ ಪಾಕಿಸ್ತಾನ ಭಯೋತ್ಪಾದಕರಿಗೆ ಪ್ರೋತ್ಸಾಹ ನೀಡುತ್ತಿದೆ.