ದೆಹಲಿ ನ್ಯಾಯಾಲಯದಿಂದ ಅಮಾನತ್ತುಗೊಂಡಿರುವ ನ್ಯಾಯಧೀಶೆ ಮತ್ತು ಅವರ ಪತಿಯ ವಿರುದ್ಧ ದೂರು ದಾಖಲು

ಆದಾಯದಕ್ಕಿಂತ ಹೆಚ್ಚಿನ ಸಂಪತ್ತಿ ಇರುವ ಪ್ರಕರಣ

ಹೊಸ ದೆಹಲಿ – ಆದಾಯಕ್ಕಿಂತ ಹೆಚ್ಚಿನ ಸಂಪತ್ತಿ ಗಳಿಸಿರುವ ಪ್ರಕರಣದಲ್ಲಿ ಸಿಬಿಐ ದೆಹಲಿ ನ್ಯಾಯಾಲಯದ ಅಮಾನತ್ತುಗೊಂಡಿರುವ ನ್ಯಾಯಾಧೀಶೆ ರಚನಾ ಲಖನಪಾಲ ಮತ್ತು ಅವರ ಪತಿ ನ್ಯಾಯವಾದಿ ಆಲೋಕ ಇವರ ವಿರುದ್ಧ ದೂರು ದಾಖಲಿಸಿದೆ. ಅವರ ಹತ್ತಿರ ಆದಾಯಕ್ಕಿಂತ ೨ ಕೋಟಿ ೯೯ ಲಕ್ಷ ರೂಪಾಯಿಗಿಂತ ಹೆಚ್ಚಿನ ಸಂಪತ್ತಿ ಕಂಡು ಬಂದಿದೆ. ೨೦೧೬ ರಲ್ಲಿ ಒಂದು ಪ್ರಕರಣದ ಪರವಾಗಿ ತೀರ್ಪು ನೀಡುವುದಕ್ಕಾಗಿ ೪ ಲಕ್ಷ ರೂಪಾಯಿ ಲಂಚ ಪಡೆದಿರುವ ಪ್ರಕರಣದಲ್ಲಿ ನ್ಯಾಯಾಧೀಶೆ ರಚನಾ ಲಖನಪಾಲ ಮತ್ತು ಅವರ ಪತಿ ಆಲೋಕ ಇವರನ್ನು ಬಂಧಿಸಲಾಗಿತ್ತು. ಇವರ ವಿರುದ್ಧ ೨೦೧೮ ರಲ್ಲಿ ಸಿಬಿಐ ಆರೋಪ ಪತ್ರ ದಾಖಲಿಸಿತ್ತು.

ಸಂಪಾದಕೀಯ ನಿಲುವು

ಬ್ರಷ್ಟಾಚಾರ ಇಲ್ಲದೇ ಇರುವ ಒಂದಾದರು ಕ್ಷೇತ್ರ ಉಳದಿದೆಯಾ ? ಇಂತಹ ಸ್ಥಿತಿಯಲ್ಲಿ ಹಿಂದೂ ರಾಷ್ಟ ಅನಿವಾರ್ಯವಾಗುತ್ತದೆ.