ಶಾಲೆಗಳಿಗೆ ಶುಕ್ರವಾರ ರಜೆ ನೀಡುವ ಮೂಲಕ ಬಿಹಾರದಲ್ಲಿ ಶರಿಯಾ ಕಾನೂನು ಜಾರಿ ಮಾಡುವ ಪ್ರಯತ್ನ ! – ಕೇಂದ್ರಿಯ ಮಂತ್ರಿ ಗಿರಿರಾಜ ಸಿಂಹ

ಕೇಂದ್ರಿಯ ಮಂತ್ರಿ ಗಿರಿರಾಜ ಸಿಂಹ

ಪಾಟಲಿಪುತ್ರ (ಬಿಹಾರ): ಬಿಹಾರದ ಕಟಿಹಾರ ಜೊತೆಗೆ ಅನ್ಯ ನಗರಗಳಲ್ಲಿ ಅನೇಕ ಶಾಲೆಗಳಿಗೆ ಭಾನುವಾರದ ಬದಲು ಶುಕ್ರವಾರ ರಜೆ ನೀಡಲಾಗುತ್ತಿರುವುದರಿಂದ ಕೇಂದ್ರ ಸಚಿವ ಗಿರಿರಾಜ ಸಿಂಹ ಇವರು ಪ್ರತಿಕ್ರಿಯೆ ವ್ಯಕ್ತಪಡಿಸುತ್ತಾ, ಶುಕ್ರವಾರ ಶಾಲೆಗೆ ರಜೆ ಘೋಷಿಸುವ ಮೂಲಕ ಶರಿಯಾ ಕಾನೂನನ್ನು ಜಾರಿ ಮಾಡಲು ಪ್ರಯತ್ನಿಸಲಾಗುತ್ತಿದೆ. ಬಾಲ್ಯದಿಂದಲೂ ನಮಗೆ ಗೊತ್ತಿದ್ದ ಪ್ರಕಾರ ಶಾಲೆ ಮತ್ತು ಕಾರ್ಯಾಲಯಗಳಿಗೆ ಭಾನುವಾರದ ರಜೆ ಇರುತ್ತದೆ. ಆದ್ದರಿಂದ ಶುಕ್ರವಾರ ರಜೆ ನೀಡುವುದು, ಇದು ಒಂದು ಸಮುದಾಯದ ಲಾಭಕ್ಕಾಗಿ ಶರಿಯಾ ಕಾನೂನು ಜಾರಿ ಮಾಡುವ ಪ್ರಯತ್ನ ಎಂದು ಅನಿಸುತ್ತದೆ, ಎಂದು ಅವರು ಹೇಳಿದರು.

 

ಸಂಪಾದಕೀಯ ನಿಲುವು

ಇದೇ ರೀತಿ ಹಿಂದೂಗಳ ಉಪಾಸನೆಯ ದಿನದಂದು ಯಾವುದಾದರೊಂದು ಶಾಲೆಯು ರಜೆ ನೀಡಿದ್ದೆ ಆಗಿದ್ದಲ್ಲಿ ಆ ಶಾಲೆಯನ್ನು ಯಾವತ್ತೋ ಕಟ್ಟರವಾದಿ ಎಂದು ನಿರ್ಧರಿಸಲಾಗುತ್ತಿತ್ತು. ಶಿಕ್ಷಣದ ಕೇಸರಿಕರಣವಾಗುತ್ತಿದೆ ಎಂದು ಹೀನೈಸಲಾಗುತ್ತಿತ್ತು, ಆದರೆ ಈಗ ಇಲ್ಲಿ ರಾಜಾರೋಷವಾಗಿ ಸರಕಾರಿ ಶಿಕ್ಷಣವನ್ನು ಹಸಿರುಕರಣ ಮಾಡಲಾಗುತ್ತಿರುವಾಗಲೂ ತಥಾಕಥಿತ ಜಾತ್ಯಾತೀತರು ಬಾಯಿ ಮುಚ್ಚಿ ಸುಮ್ಮನೆ ಕುಳಿತಿದ್ದಾರೆ !