ಸೈನಿಕರ ಹತ್ಯೆ ಮಾಡಿದ ಭಯೋತ್ಪಾದಕರ ಮನೆಗಳು ನೆಲಸಮ !

ಯೋಗಿ ಆದಿತ್ಯನಾಥ್ ಅವರಿಂದ ಪಾಠ ಕಲಿತ ಇಸ್ರೇಲ್ !

ತೆಲಅವೀವ (ಇಸ್ರೇಲ್) – ಗಲಭೆಕೋರರ ವಿರುದ್ಧ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಕಾರ್ಯಾಚರಣೆ ಮಾಡುವಾಗ ಗಲಭೆಕೋರರ ಅಕ್ರಮ ಮನೆಗಳನ್ನು ಕೆಡವಲು ಆದೇಶಿಸುತ್ತಾರೆ. ಅದರಂತೆ ಇದುವರೆಗೆ ಸಾಕಷ್ಟು ಅಕ್ರಮ ಮನೆಗಳನ್ನು ಬುಲ್ಡೋಜರ್ ಮೂಲಕ ನೆಲಸಮ ಮಾಡಲಾಗಿದೆ. ಮಧ್ಯಪ್ರದೇಶ ಸರಕಾರ ಕೂಡ ಇದೇ ರೀತಿಯಲ್ಲಿ ಆದೇಶ ನೀಡಿದೆ. ಈಗ ಇಸ್ರೇಲ್ ಇದೇ ರೀತಿಯ ಕ್ರಮ ಕೈಗೊಳ್ಳಲು ಪ್ರಾರಂಭಿಸಿದೆ ಎಂದು ತೋರುತ್ತದೆ. ಇಸ್ರೇಲ್‌ನ ವೆಸ್ಟ ಬ್ಯಾಂಕನಲ್ಲಿ ನೆಲೆಸಿದ್ದ ೨ ಪ್ಯಾಲೆಸ್ತೀನ್ ಭಯೋತ್ಪಾದಕರು ಇಸ್ರೇಲಿ ಭದ್ರತಾ ಸಿಬ್ಬಂದಿಯನ್ನು ಕೊಂದಿದ್ದರು.

(ಸೌಜನ್ಯ : The Times of Israel)

ಇದರ ನಂತರ, ಇಸ್ರೇಲ್ ಈ ಭಯೋತ್ಪಾದಕರನ್ನು ಬಂಧಿಸಿ ಕರಾವತ್ ಬನಿ ಹಾಸನ ಗ್ರಾಮದಲ್ಲಿ ಅವರ ಮನೆಗಳನ್ನು ನೆಲಸಮಗೊಳಿಸಿತು. ಈ ಕಾರ್ಯಾಚರಣೆಯ ಸಮಯದಲ್ಲಿ, ಪ್ಯಾಲೆಸ್ಟೀನ್ ನವರು ಇಸ್ರೇಲಿ ಸೈನಿಕರ ಮೇಲೆ ಪೆಟ್ರೋಲ್ ಬಾಂಬ್‌ಗಳನ್ನು ಮತ್ತು ಬೆಂಕಿ ಹಚ್ಚಿದ ಟೈರ್‌ಗಳನ್ನು ಎಸೆದರು; ಆದರೂ ಇಸ್ರೇಲ್ ಈ ಕಾರ್ಯಾಚರಣೆಯನ್ನು ಪೂರ್ಣಗೊಳಿಸಿದೆ.