ವಿಶೇಷ ಸಂವಾದ : ‘ಬಾಂಗ್ಲಾದೇಶಿ ಹಿಂದೂಗಳ ಮೇಲಿನ ದೌರ್ಜನ್ಯದ ಬಗ್ಗೆ ಸರಕಾರ ಏಕೆ ಮೌನ ?’
ಬಾಂಗ್ಲಾದೇಶದಲ್ಲಿ ಅಪರಾಧ ಪ್ರವೃತ್ತಿಯ ಸಾವಿರಾರು ಮುಸಲ್ಮಾನರು ಹಿಂದೂಗಳನ್ನು ಗುರಿ ಮಾಡುತ್ತಿದ್ದಾರೆ. ಕುರಾನ್ ಅಥವಾ ಪ್ರವಾದಿ ಮೊಹಮ್ಮದ್ ಅವರನ್ನು ಅವಮಾನಿಸಿದ್ದಾರೆ ಎಂಬ ಸುಳ್ಳು ಆರೋಪ ಹೊರಿಸಿ ಹಿಂದೂಗಳ ದೇವಸ್ಥಾನಗಳನ್ನು ಕೆಡಹುವುದು, ದೇವತೆಗಳ ವಿಗ್ರಹಗಳನ್ನು ಒಡೆಯುವುದು, ಹಿಂದೂ ವಸತಿಗಳನ್ನು ಸುಡುವುದು, ಹಿಂದೂಗಳ ಹತ್ಯೆ ಮಾಡುವುದು ಮತ್ತು ಮಹಿಳೆಯರು-ಹುಡುಗಿಯರ ಮೇಲೆ ಬಲಾತ್ಕಾರ ಮಾಡಲಾಗುತ್ತಿದೆ. ಈ ಕೃತ್ಯಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ. ಬಾಂಗ್ಲಾದೇಶ ಸರಕಾರ ಮತ್ತು ಪೊಲೀಸರು ಹಿಂದೂಗಳ ರಕ್ಷಣೆಗೆ ಏನನ್ನೂ ಮಾಡುತ್ತಿಲ್ಲ. ಆದ್ದರಿಂದ ಈಗ ಬಾಂಗ್ಲಾದೇಶದಲ್ಲಿ ಹಿಂದೂಗಳು ಸುರಕ್ಷಿತವಾಗಿ ಬದುಕಲು ಸಾಧ್ಯವಾಗುತ್ತಿಲ್ಲ. ಅಲ್ಲಿ ಹಿಂದೂಗಳ ರಕ್ಷಣೆಗೆ ಯಾರೂ ಇಲ್ಲ. ಇದು ಹೀಗೆಯೇ ಮುಂದುವರಿದರೆ ಬಾಂಗ್ಲಾದೇಶದಲ್ಲಿ ಹಿಂದಿನಂತೆ ಹಿಂದೂಗಳು ಉಳಿಯುವುದಿಲ್ಲ. ಆದ್ದರಿಂದ ಜಗತ್ತಿನಾದ್ಯಂತದ ದೇಶಗಳು, ವಿಶ್ವ ಸಂಸ್ಥೆ ಮತ್ತು ಭಾರತ ಈ ವಿಷಯದ ಬಗ್ಗೆ ಗಮನಹರಿಸಿ ಹಿಂದೂಗಳ ರಕ್ಷಣೆಗೆ ಮುಂದಾಗಬೇಕು, ಎಂದು ಹಿಂದೂಗಳ ಮಾನವ ಹಕ್ಕುಗಳಿಗಾಗಿ ಹೋರಾಡುವ ‘ಬಾಂಗ್ಲಾದೇಶ ಮೈನಾರಟಿ ವಾಚ್’ನ ಅಧ್ಯಕ್ಷ ನ್ಯಾಯವಾದಿ (ಪೂಜ್ಯ) ರವೀಂದ್ರ ಘೋಷ ಇವರು ಕಳಕಳಿಯಿಂದ ಕರೆ ನೀಡಿದ್ದಾರೆ. ಅವರು ಹಿಂದೂ ಜನಜಾಗೃತಿ ಸಮಿತಿಯು ಆಯೋಜಿಸಿದ್ದ ‘ಬಾಂಗ್ಲಾದೇಶಿ ಹಿಂದೂಗಳ ಮೇಲಿನ ದೌರ್ಜನ್ಯದ ಬಗ್ಗೆ ಸರಕಾರ ಮೌನವೇಕೆ ?’ ಎಂಬ ವಿಷಯದ ಕುರಿತು ಆನ್‌ಲೈನ್ ‘ವಿಶೇಷ ಸಂವಾದ’ದಲ್ಲಿ ಮಾತನಾಡುತ್ತಿದ್ದರು.
ಈ ಸಮಯದಲ್ಲಿ ಬಾಂಗ್ಲಾದೇಶದ ‘ರೀಸರ್ಚ್ ಅಂಡ್ ಎಂಪವರಮೆಂಟ್ ಆರ್ಗನೈಸೇಶನ’ನ ಅಧ್ಯಕ್ಷ ಪ್ರಾ. ಚಂದನ ಸರಕಾರ ಇವರು ಮಾತನಾಡುತ್ತಾ, 2012 ಮತ್ತು 2022 ರ ನಡುವೆ ಬಾಂಗ್ಲಾದೇಶದಲ್ಲಿ ಕ್ರಮಬದ್ಧವಾಗಿ ಹಿಂದೂ ವಸತಿಗಳ ಮೇಲೆ ದಾಳಿ ಮಾಡಿ ಹಿಂದೂಗಳನ್ನು ಗುರಿಯಾಗಿಸಲಾಗುತ್ತಿದೆ. ಇದರಿಂದ ಹಿಂದೂಗಳು ಬಾಂಗ್ಲಾದೇಶದಿಂದ ಪಲಾಯನ ಮಾಡುತ್ತಾರೆ. ಇದರಿಂದಾಗಿ ಹಿಂದೂಗಳ ಜನಸಂಖ್ಯೆ ನಿರಂತರವಾಗಿ ಕಡಿಮೆಯಾಗುತ್ತಿದೆ. ಈ ಹಿಂದೆ ಶೇ. 28 ರಷ್ಟಿದ್ದ ಸಂಖ್ಯೆ ಈಗ ಶೇ. 6 ಕ್ಕೆ ಇಳಿಕೆಯಾಗಿದೆ ಎಂದು ಹೇಳಿದರು.
‘ವರ್ಲ್ಡ ಹಿಂದೂ ಫೆಡರೇಶನ್’ನ ಪ್ರಧಾನ ಕಾರ್ಯದರ್ಶಿ ಶ್ರೀ. ದಿಪೆನ ಮಿತ್ರಾ ಇವರು ಮಾತನಾಡುತ್ತಾ, ಕಳೆದ ಕೆಲವು ತಿಂಗಳುಗಳಲ್ಲಿ ೩೨೫ ಕ್ಕೂ ಹೆಚ್ಚು ಹಿಂದೂ ದೇವಾಲಯಗಳು, ಶ್ರೀ ದುರ್ಗಾಪೂಜಾ ಪೆಂಡಲ್‌ಗಳನ್ನು ಧ್ವಂಸಗೊಳಿಸಲಾಗಿದೆ. ಹಿಂದೂಗಳನ್ನು ಕೊಂದು ಮಹಿಳೆಯರನ್ನು ಅಪಹರಿಸಲಾಗುತ್ತಿದೆ. ಹಿಂದೂಗಳಿಗೆ ಯಾವುದೇ ಹಕ್ಕುಗಳಿಲ್ಲ; ಆದರೆ ಇಡೀ ಜಗತ್ತು ಮತ್ತು ನೆರೆಯ ರಾಷ್ಟ್ರ ಭಾರತ ಇದನ್ನು ಮೌನವಾಗಿ ನೋಡುತ್ತಿವೆ. ಹಿಂದೂಗಳ ಮೇಲಿನ ದೌರ್ಜನ್ಯ ತಡೆಯಲು ನಮಗೆ ಸಹಾಯ ಬೇಕಾಗಿದೆ ಎಂದು ಹೇಳಿದರು.
ಈ ಸಮಯದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಪೂರ್ವ ಮತ್ತು ಈಶಾನ್ಯ ಭಾರತ ಸಮನ್ವಯಕರಾದ ಶ್ರೀ. ಶಂಭು ಗವಾರೆ ಇವರು ಮಾತನಾಡುತ್ತಾ, ಎಲ್ಲಿಯಾದರೂ ಮುಸಲ್ಮಾನರ ಮೇಲೆ ಕಿಂಚಿತ್ತು ದೌರ್ಜನ್ಯಗಳಾದಾಗ ಜಗತ್ತಿನ 57 ಇಸ್ಲಾಮಿಕ್ ರಾಷ್ಟ್ರಗಳು ಒಗ್ಗೂಡಿ ಅದರ ವಿರುದ್ಧ ಧ್ವನಿ ಎತ್ತುತ್ತವೆ. ‘ವಿಶ್ವಸಂಸ್ಥೆ’ ಮತ್ತು ‘ಯುರೋಪಿಯನ್ ಯೂನಿಯನ್’ ಕೂಡ ಮುಸಲ್ಮಾನರ ಪರವಾಗಿ ಮಾತನಾಡುತ್ತವೆ; ಹಾಗಾದರೆ 30 ವರ್ಷಗಳಿಂದ ನಡೆಯುತ್ತಿರುವ ಕಾಶ್ಮೀರಿ ಹಿಂದೂಗಳ ನರಮೇಧ ಮತ್ತು ಬಾಂಗ್ಲಾದೇಶದಲ್ಲಿ ಹಿಂದೂಗಳ ಶೋಷಣೆಯ ಬಗ್ಗೆ ಅವರು ಏಕೆ ಮಾತನಾಡುತ್ತಿಲ್ಲ ? ಅದಕ್ಕಾಗಿ ಹಿಂದೂಗಳೆಲ್ಲ ಈಗಲಾದರೂ ಒಂದಾಗಬೇಕು. ಬಾಂಗ್ಲಾದೇಶದ ಹಿಂದೂಗಳ ಮೇಲಿನ ಅತ್ಯಾಚಾರದ ವಿರುದ್ಧ ‘ನೆದರಲ್ಯಾಂಡ್’ನ ಸಂಸತ್ ಸದಸ್ಯ ಗೀರ್ಟ್ ವೈಲ್ಡರ್ಸ್ ಇವರು 13 ಪ್ರಶ್ನೆಗಳನ್ನು ಕೇಳುವ ಮೂಲಕ ವಿಶ್ವದಾದ್ಯಂತ ಧ್ವನಿ ಎತ್ತಿದರು. ಅದೇ ರೀತಿ ಭಾರತದಲ್ಲಿನ ಹಿಂದೂಗಳು ಬಾಂಗ್ಲಾದೇಶ ರಾಯಭಾರಿ ಕಚೇರಿಯ ಹೊರಗೆ ಪ್ರತಿಭಟನೆ ನಡೆಸಿ ಅವರ ಮೇಲೆ ಒತ್ತಡ ಹೇರಬೇಕು. ‘ಮಾನವ ಹಕ್ಕುಗಳ ಸಂಘಟನೆ’ಗಳು ಮತ್ತು ‘ವಿಶ್ವ ಸಂಸ್ಥೆ’ಯನ್ನು ಪ್ರಶ್ನಿಸಬೇಕು ಎಂದು ಹೇಳಿದರು.