‘ಭಾರತದಲ್ಲಿ ಬಂಧಿಸಲ್ಪಡುವ ಪಾಕಿಸ್ತಾನದವರೆಲ್ಲರೂ ಹಿಂದೂ ಇರುತ್ತಾರೆ ಮತ್ತು ಅವರಿಗೆ ಸಂಘದೊಂದಿಗೆ ಸಂಬಂಧ ಇರುತ್ತದೆ ! (ಅಂತೆ)

ಬಿಹಾರದ ರಾಷ್ಟ್ರೀಯ ಜನತಾ ದಳದ ಪ್ರದೇಶಾಧ್ಯಕ್ಷ ಜಗದಾನಂದ ಸಿಂಹ ಇವರ ವಿಚಿತ್ರ ಶೋಧನೆ !

ಪಾಟಲೀಪುತ್ರ (ಬಿಹಾರ) – ಯಾವಾಗ ಸೈನಿಕರು ಪಾಕಿಸ್ತಾದವರನ್ನು ಬಂಧಿಸುತ್ತಾರೆ, ಆಗ ಅವರು ಹಿಂದೂಗಳಾಗಿರುತ್ತಾರೆ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘದೊಂದಿಗೆ ಸಂಬಂಧ ಹೊಂದಿರುತ್ತಾರೆ ಎಂದು ರಾಷ್ಟ್ರೀಯ ಜನತಾದಳದ ಪ್ರದೇಶಾಧ್ಯಕ್ಷ ಜಗದಾನಂದ ಸಿಂಹ ಇವರು ಹೇಳಿದರು. ಸಧ್ಯಕ್ಕೆ ರಾಜ್ಯದಲ್ಲಿ ಪಾಪ್ಯುಲರ ಫ್ರಂಟ್ ಆಫ್ ಇಂಡಿಯಾದ ಜಿಹಾದಿ ಕಾರ್ಯಕರ್ತರ ವಿರುದ್ಧ ಕ್ರಮ ಕೈಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಅವರು ಮಾತನಾಡುತ್ತಿದ್ದರು. ಹಾಗೆಯೇ ಅವರು ಬಂಧಿಸಿರುವ ‘ಅಲ್ಟ್ ನ್ಯೂಸ ಹಿಂದೂದ್ವೇಷಿ ಸಹಸಂಸ್ಥಾಪಕ ಮಹಮ್ಮದ ಜುಬೇರನನ್ನು ‘ಜುಬೇರ ಸಾಹೇಬ ಎಂದು ಸಂಬೋಧಿಸಿದರು. ‘ಅವನನ್ನು ಭಾಜಪವು ಜೈಲಿನಿಂದ ಹೊರಗೆ ಬರಲು ಬಿಡುತ್ತಿಲ್ಲ, ಎಂದು ಆರೋಪಿಸಿದರು.

೧. ಪಿ.ಎಫ್.ಐ.ನ ಪ್ರಕರಣದ ವಿಷಯದಲ್ಲಿ ಪೊಲೀಸ ಅಧೀಕ್ಷಕ ಮಾನವಜೀತ ಸಿಂಹ ಢಿಲ್ಲೋ ಇವರು, ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮತ್ತು ಪಿ.ಎಫ್. ಐ. ಇಬ್ಬರೂ ಶಾರೀರಿಕ ಶಿಕ್ಷಣದ ಹೆಸರಿನಲ್ಲಿ ಜನರಿಗೆ ಶಸ್ತ್ರಾಸ್ತ್ರಗಳನ್ನು ಉಪಯೋಗಿಸುವ ಪ್ರಶಿಕ್ಷಣ ನೀಡುತ್ತಿದ್ದಾರೆ ಎಂದು ಹೇಳಿದರು. (ಯಾರನ್ನು ಯಾರೊಂದಿಗೆ ತುಲನೆ ಮಾಡಬೇಕು, ಎನ್ನುವುದೂ ಕೂಡ ತಿಳಿಯದೇ ಇರುವ ಇಂತಹ ಪೊಲೀಸ ಅಧಿಕಾರಿ ಭಾಜಪ ಅಧಿಕಾರದಲ್ಲಿರುವ ರಾಜ್ಯದಲ್ಲಿದ್ದಾರೆ. ಇದು ಹಿಂದೂಗಳಿಗೆ ಅಪೇಕ್ಷಿತವಿಲ್ಲ – ಸಂಪಾದಕರು)

೨. ಜಗದಾನಂದ ಸಿಂಹ ಇವರ ಹೇಳಿಕೆಗೆ ಭಾಜಪ ವಕ್ತೆ ನಾಜಿಯಾ ಇಲಾಹಿ ಇವರು ಪ್ರತ್ಯುತ್ತರ ನೀಡುವಾಗ, ಭ್ರಷ್ಟಾಚಾರದ ತಮ್ಮ ಪ್ರಕರಣಗಳನ್ನು ಮುಚ್ಚಿಡಲು ಜಗದಾನಂದ ಸಿಂಹ ಇವರು ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

‘ಜಗದಾನಂದ ಸಿಂಹ ಇವರಿಗೆ ಪಾಕಿಸ್ತಾನದೊಂದಿಗೆ ಏನು ಸಂಬಂಧವಿದೆ, ಎಂದು ವಿಚಾರಣೆ ಮಾಡುವ ಆವಶ್ಯಕತೆಯಿದೆ, ಎಂದು ಯಾರಾದರೂ ಹೇಳಿದರೆ ಆಶ್ಚರ್ಯ ಪಡಬಾರದು !