ಹಿಂದುಳಿದ ವರ್ಗಗಳನ್ನು ಸೇರಿಸಿ ಇಸ್ಲಾಮಿಕ್ ರಾಷ್ಟ್ರ ಮಾಡಲು ‘ಪಿಎಫ್‌ಐ’ ಸಂಚು !

‘ಮಿಶನ್ ೨೦೪೭’ಕ್ಕಾಗಿ ರೂಪಿಸಿದ ‘ಜೈ ಭೀಮ್-ಜೈ ಮಿಮ್’ ಶಸ್ತ್ರ !

ನವ ದೆಹಲಿ – ಜಿಹಾದಿ ಭಯೋತ್ಪಾದಕ ಸಂಘಟನೆ ‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ (ಪಿ.ಎಫ್.ಐ.)ವು ಹಿಂದೂ ಸಮಾಜದಲ್ಲಿ ಬಿರುಕುಂಟು ಮಾಡುವ ಸಂಚು ರೂಪಿಸಿದ್ದು, ದೇಶವನ್ನು ‘ಇಸ್ಲಾಮಿಕ್ ರಾಷ್ಟ್ರ’ವನ್ನಾಗಿ ಮಾಡಲು ವೇದಿಕೆ ಸಿದ್ಧಪಡಿಸಿದೆ. ಈ ಹಿನ್ನೆಲೆಯಲ್ಲಿ ಪಿ.ಎಫ್.ಐ.ನ ಜಿಹಾದಿ ನಾಯಕರು ಭಾರತದಲ್ಲಿ ‘ಜೈ ಭೀಮ್-ಜೈ ಮಿಮ್’ ಎಂಬ ಘೋಷಣೆಯನ್ನು ನೀಡಿದ್ದಾರೆ. ಪೊಲೀಸರು ಪಿ.ಎಫ್.ಐ.ನ ಕಚೇರಿ ಮೇಲೆ ನಡೆಸಿದ ದಾಳಿ ವೇಳೆ ಕೆಲವು ಕಗದಪತ್ರಗಳು ಪತ್ತೆಯಾಗಿವೆ. ಇದರಿಂದ ಈ ಸಂಚು ಬಯಲಾಗಿದೆ.

೧. ‘ಪಿ.ಎಫ್.ಐ’ನ ಕಚೇರಿಯಲ್ಲಿ ‘ಇಂಡಿಯಾ ವಿಶನ್ ೨೦೪೭’ ಹೆಸರಿನ ಕಡತ ಪತ್ತೆಯಾಗಿದೆ. ಅದರಲ್ಲಿ ‘ಹೇಡಿ ಹಿಂದುಗಳ ಮೇಲೆ ಸಂಪೂರ್ಣ ಪ್ರಾಬಲ್ಯ ಸಾಧಿಸಲು ‘ರೊಡ ಮ್ಯಾಪ್’ (ಯೋಜನೆ) ಮಾಡುವುದನ್ನು ಉಲ್ಲೇಖಿಸಿದೆ. ಇದರಲ್ಲಿ ಪರಿಶಿಷ್ಟ ಜಾತಿ-ಪಂಗಡ ಮತ್ತು ಇತರ ಹಿಂದುಳಿದ ವರ್ಗಗಳ ಹಿಂದೂಗಳಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಬಗ್ಗೆ ದ್ವೇಷವನ್ನು ಹುಟ್ಟುಹಾಕುವುದು ಮತ್ತು ಅವರೊಂದಿಗೆ ಸೇರಿ ಇಸ್ಲಾಮಿಕ್ ರಾಷ್ಟ್ರವನ್ನು ರೂಪಿಸುವ ಪಿತೂರಿಯು ಒಳಗೊಂಡಿದೆ.

೨. ಈ ಕಡತದಲ್ಲಿ, ‘ಪಿ.ಎಫ್.ಐ.’ಯು ಪರಿಶಿಷ್ಟ ಜಾತಿ-ಪಂಗಡ ಮತ್ತು ಇತರ ಹಿಂದುಳಿದ ಹಿಂದೂ ಸಮುದಾಯಗಳೊಂದಿಗೆ ಆತ್ಮೀಯತೆ ಮಾಡಿಕೊಳ್ಳಬೇಕು ಮತ್ತು ಚುನಾವಣೆಯಲ್ಲಿ ಕೆಲವು ಸ್ಥಾನಗಳನ್ನು ಗೆಲ್ಲಬೇಕು ಎಂದು ಹೇಳಿದೆ.

೩. ‘ಪಿ.ಎಫ್.ಐ.’ಗೆ ಪರಿಶಿಷ್ಟ ಜಾತಿ-ಪಂಗಡ ಮತ್ತು ಇತರ ಹಿಂದುಳಿದ ವರ್ಗಗಳವರೆಗೆ ತಲುಪಲು ಮತ್ತು ಇಸ್ಲಾಮಿಕ್ ಆಡಳಿತವನ್ನು ಸ್ಥಾಪಿಸಲು ‘ರಾಷ್ಟ್ರಧ್ವಜ’, ‘ಸಂವಿಧಾನ’ ಮತ್ತು ‘ಅಂಬೇಡ್ಕರ್’ ನಂತಹ ಪರಿಕಲ್ಪನೆಗಳನ್ನು ಗುರಾಣಿಯಾಗಿ ಬಳಸಬೇಕಾಗುತ್ತದೆ, ಎಂದೂ ಹೇಳಿದೆ.

೪. ‘ಯಾವಾಗ ‘ಪಿ.ಎಫ್.ಐ.’ಬಳಿ ಸಾಕಷ್ಟು ತರಬೇತಿ ಪಡೆದ ಜಿಹಾದಿ ಕಾರ್ಯಕರ್ತರು ನಿರ್ಮಾಣವಾಗುವರೋ ಮತ್ತು ಹೇರಳವಾದ ಶಸ್ತ್ರಾಸ್ತ್ರಗಳನ್ನು ಹೊಂದುವರೋ ಆಗ ಮುಸಲ್ಮಾನರು ಇಸ್ಲಾಮಿಕ್ ತತ್ತ್ವಗಳನ್ನು ಆಧರಿಸಿ ಹೊಸ ಸಂವಿಧಾನವನ್ನು ಘೋಷಿಸಬೇಕು. ಆ ಸಮಯದಲ್ಲಿ ಬಾಹ್ಯ ಶಕ್ತಿಗಳೂ ನಮಗೆ ಸಹಾಯ ಮಾಡುತ್ತವೆ. ನಮ್ಮ ವಿರೋಧಿಗಳನ್ನು ವ್ಯವಸ್ಥಿತವಾಗಿ ಮತ್ತು ದೊಡ್ಡ ಪ್ರಮಾಣದಲ್ಲಿ ನಾಶಪಡಿಸಲಾಗುವುದು ಮತ್ತು ಭಾರತದಲ್ಲಿ ಇಸ್ಲಾಮಿಕ್ ವೈಭವವನ್ನು ಮರುಸ್ಥಾಪಿಸಲಾಗುವುದು’, ಎಂದು ಕಡತದ ಹೇಳಿದೆ.

ಸಂಪಾದಕೀಯ ನಿಲುವು

‘ಮುಸಲ್ಮಾನರು ಹಿಂದುಳಿದ ವರ್ಗಗಳೊಂದಿಗೆ ಏಕೆ ಸ್ನೇಹ ಬೆಳೆಸುತ್ತಾರೆ ?’, ಇದು ಈಗಲಾದರೂ ಅವರ ಗಮನಕ್ಕೆ ಬರುತ್ತದೆಯೇ ?

‘ಪಿ,ಎಫ್,ಐ,’ ದೇಶವಿರೋಧಿ ಚಟುವಟಿಕೆಗಳನ್ನು ನಡೆಸುತ್ತಿದೆ ಎಂಬುದಕ್ಕೆ ಹಲವಾರು ಪುರಾವೆಗಳಿದ್ದರೂ ಸರಕಾರ ಅದನ್ನು ಏಕೆ ನಿಷೇಧಿಸುತ್ತಿಲ್ಲ ?’, ಎಂದು ರಾಷ್ಟ್ರಪ್ರೇಮಿಗಳಲ್ಲಿ ಪ್ರಶ್ನೆ ಮೂಡಿದೆ !