ಭರತಪೂರ (ರಾಜಸ್ಥಾನ) ಇಲ್ಲಿಯ ಅಕ್ರಮ ಗಣಿಗಾರಿಕೆಯನ್ನು ವಿರೋಧಿಸಲು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಸಂತ ವಿಜಯ ದಾಸ ಇವರ ಸಾವು

ಭರತಪೂರ (ರಾಜಸ್ಥಾನ) – ಇಲ್ಲಿಯ ಆದಿಬದ್ರಿ ಧಾಮ ಮತ್ತು ಕನಕಾಚಲ ಭಾಗದಲ್ಲಿ ಅಕ್ರಮ ಗಣಿಗಾರಿಕೆಯ ಪ್ರಕರಣದಲ್ಲಿ ಸಾಧು, ಸಂತರು ಮತ್ತು ಗ್ರಾಮಸ್ಥರು ೫೫೦ ದಿನ ಆಂದೋಲನ ಮಾಡಿದ ನಂತರ ಸರಕಾರ ಈ ಕ್ಷೇತ್ರಕ್ಕೆ ‘ವನಕ್ಷೇತ್ರ’ ಎಂದು ಘೋಷಿಸುವ ಆಶ್ವಾಸನೆ ನೀಡಿತು. ಆದರೂ ಇದರ ಒಂದು ದಿನ ಮೊದಲು ಆಂದೋಲನದ ಸಮಯದಲ್ಲಿ ೬೫ ವಯಸ್ಸಿನ ಸಂತ ವಿಜಯ ದಾಸ ಆತ್ಮಹತ್ಯೆಗೆ ಯತ್ನಿಸಿದ್ದರು. ಇದರಿಂದ ಅವರ ದೇಹ ಶೇ. ೮೦ ರಷ್ಟು ಸುಟ್ಟಿತ್ತು. ಕೊನೆಗೆ ಜುಲೈ ೨೩ ರಂದು ದೆಹಲಿಯ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡುತ್ತಿರುವಾಗ ನಿಧನ ಹೊಂದಿದರು. ಈ ಪ್ರಕರಣದಲ್ಲಿ ಸಂಬಂಧಪಟ್ಟವರ ಮೇಲೆ ಕ್ರಮ ಕೈಗೊಳ್ಳಲು ಭಾಜಪದಿಂದ ಒತ್ತಾಯಿಸಲಾಗುತ್ತಿದೆ.

ಸಂಪಾದಕೀಯ ನಿಲುವು

ಸಂತರ ಸಾವಿಗೆ ರಾಜಸ್ಥಾನದ ಕಾಂಗ್ರೆಸ್ ಸರಕಾರವೇ ಹೊಣೆ. ಅವರು ಎಷ್ಟೇ ಕಠಿಣ ಪ್ರಾಯಶ್ಚಿತ್ತ ತೆಗೆದುಕೊಂಡುರು, ಅದು ಕಡಿಮೆ ಆಗಿದೆ. ಈಗ ಜನರೆ ಕಾಂಗ್ರೆಸ್ ಸರಕಾರವನ್ನು ಅಧಿಕಾರದಿಂದ ಕೆಳಗೆ ಇಳಿಸಬೇಕು !