ಕರ್ನಾಟಕದ ಮಠಗಳು ಮತ್ತು ದೇವಸ್ಥಾನಗಳಿಗೆ ಭಾಜಪ ಸರಕಾರದಿಂದ ೧೪೨ ಕೋಟಿ ರೂಪಾಯಿಗಳ ಅನುದಾನ ಘೋಷಣೆ !

ಬೆಂಗಳೂರು – ಕರ್ನಾಟಕದ ಭಾಜಪ ಸರಕಾರವು ವಿವಿಧ ಮಠಗಳು ಮತ್ತು ದೇಗುಲಗಳಿಗೆ ೧೪೨.೩೭ ಕೋಟಿ ರೂಪಾಯಿ ಅನುದಾನವನ್ನು ಅನುಮೋದಿಸಿದೆ. ಇದರಡಿ ೧೭೮ ಮಠಗಳಿಗೆ ೧೦೮.೦೨ ಕೋಟಿ ರೂಪಾಯಿ, ೫೯ ದೇವಸ್ಥಾನಗಳಿಗೆ ೨೧.೩೫ ಕೋಟಿ ರೂಪಾಯಿ ಹಾಗೂ ೨೬ ಸಂಘ ಸಂಸ್ಥೆಗಳು ಮತ್ತು ಟ್ರಸ್ಟ್‌ಗಳಿಗೆ ೧೩ ಕೋಟಿ ರೂಪಾಯಿ ಅನುದಾನ ನೀಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹಣಕಾಸು ಇಲಾಖೆಗೆ ಸೂಚನೆ ನೀಡಿದರು. ಈ ನಿಧಿಯನ್ನು ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ ನೀಡಲಾಗುವುದು.

ಸಂಪಾದಕೀಯ ನಿಲುವು

ಈ ನಿರ್ಧಾರಕ್ಕೆ ಬಸವರಾಜ ಬೊಮ್ಮಾಯಿ ಸರಕಾರಕ್ಕೆ ಅಭಿನಂದನೆಗಳು ! ಇನ್ನು ಭಾಜಪದ ಆಡಳಿತವಿರುವ ಇತರ ರಾಜ್ಯಗಳೂ ಈ ರೀತಿಯ ನಿರ್ಧಾರ ತೆಗೆದುಕೊಳ್ಳಬೇಕು !